ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೀರಾ? ಹಾಗಾದರೆ ಇದೂ ತಿಳಿದಿರಲಿ...

ಇತ್ತೀಚಿನ ವಿಟಮಿನ್ ಮಾತ್ರೆ ತೆಗೆದುಕೊಳ್ಳುವುದನ್ನು ಜನರು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾದರೆ ಸಾಮಾನ್ಯವಾಗಿ ವೈದ್ಯರೇ ವಿಟಮಿನ್ ಮಾತ್ರಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ.

Published: 12th March 2021 01:51 PM  |   Last Updated: 12th March 2021 01:55 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚೆಚ್ಚು ವಿಟಮಿನ್ ಮಾತ್ರೆ ತೆಗೆದುಕೊಳ್ಳುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ವಿಟಮಿನ್ ಮಾತ್ರೆ ತೆಗೆದುಕೊಳ್ಳುವುದನ್ನು ಜನರು ಅಭ್ಯಾಸ ಮಾಡಿಕೊಂಡುಬಿಟ್ಟಿದ್ದಾರೆ. ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾದರೆ ಸಾಮಾನ್ಯವಾಗಿ ವೈದ್ಯರೇ ವಿಟಮಿನ್ ಮಾತ್ರಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಆದರೆ, ಅದು ನಿಯಮಿತ ಅವಧಿವರೆಗೆ ಮಾತ್ರವೇ ನೀಡಿರುತ್ತಾರೆ. ದೇಹದಲ್ಲಿ ವಿಟಮಿನ್ಸ್ ಬ್ಯಾಲೆನ್ಸ್ ಆದಾಗ ಮಾತ್ರೆಗಳನ್ನು ನಿಲ್ಲಿಸಬೇಕು. ಬಳಿಕ ವೈದ್ಯರು ಆ ವಿಟಮಿನ್ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ. 

ಆದರೆ, ಕೆಲವರು ವಿಟಮಿನ್ ಮಾತ್ರೆ ಸೇವನೆಗೆ ಅಡಿಕ್ಟ್ ಆಗಿ ಬಿಟ್ಟಿರುತ್ತಾರೆ. ಕೆಲವರಂತೂ ವೈದ್ಯರ ಸಲಹೆ ಇಲ್ಲದೆಯೇ ಆನ್ ಲೈನ್ ಗಳಲ್ಲಿ ಹುಡುಕಾಡಿ ಸಿಕ್ಕ ಸಿಕ್ಕ ಮಾಹಿತಿಗಳನ್ನು ನಂಬಿ ವಿಟಮಿನ್ ಸಪ್ಲಿಮಂಟ್ ತೆಗೆದುಕೊಳ್ಳುತ್ತಾರೆ. ಆದರೆ, ವಿಟಮಿನ್ ಅಂಶ ಅತಿಯಾದರೂ ಕೂಡ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. 

ಚರ್ಮ, ಕೂದಲು ಹಾಗೂ ಸ್ನಾಯುಗಳಿಗಾಗಿ ನೂರಾರು ಮಾತ್ರಗಳಿವೆ. ಇವುಗಳನ್ನು ನಿಯಮಿತ ಅವಧಿಯಲ್ಲಿ ತೆಗೆದುಕೊಳ್ಳಬೇಕು. ಹೆಚ್ಚಾದರೂ ಕೂಡ ಇವುಗಳಿಂದ ಅಡ್ಡ ಪರಿಣಾಮಗಳಾಗುತ್ತವೆ ಎಂದು ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ. 

ಕೆಲವು ಮಾತ್ರೆಗಳು ಹಾಗೂ ಅವುಗಳ ಅಡ್ಡ ಪರಿಣಾಮಗಳನ್ನು ಇಲ್ಲಿ ತಿಳಿಸಲಾಗಿದೆ.

ವಿಟಮಿನ್ ಬಿ6
ಈ ಮಾತ್ರೆಯನ್ನು ದೀರ್ಘಕಾಲದವರೆಗೆ ತೆಗೆದುಕೊಂಡಿದ್ದೇ ಆದರೆ, ದೀರ್ಘಕಾಲದ ತಲೆನೋವು, ನರಗಳ ಹಾನಿಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ನಿಯಾಸಿನ್
ಇದು ವಿಟಮಿನ್ ಬಿ  ಮಾತ್ರೆಯಾಗಿದ್ದು, ಇದು ದೇಹಕ್ಕೆ ಸೇರುವ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಬಳಕೆ ಮಾಡಲಾಗುತ್ತದೆ. ಜನರು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಸಂಧಿವಾತವನ್ನು ನಿಯಂತ್ರಿಸಲು ಮತ್ತು ಚರ್ಮದ ಕಾರ್ಯವನ್ನು ಸುಧಾರಿಸಲು ಯಾದೃಚ್ಛಿಕವಾಗಿ ಈ ಮಾತ್ರೆಯನ್ನು ಬಳಕೆ ಮಾಡುತ್ತಾರೆ. ಆದರೆ, ಅಗತ್ಯಕ್ಕಿಂತ ಹೆಚ್ಚಾಗಿ ಈ ಮಾತ್ರೆಯನ್ನು ಸೇವಿಸಿದ್ದೇ ಆದರೆ, ಯಕೃತ್ತಿನ ಹಾನಿಯಾಗುತ್ತದೆ. ಆಲ್ಲದೆ ಕರುಳಿನ ಸಮಸ್ಯೆ ಕೂಡ ಎದುರಾಗುತ್ತದೆ. 

ವಿಟಮಿನ್ ಸಿ
ಈ ಮಾತ್ರೆಯನ್ನು ಯುವ ಮತ್ತು ವಯಸ್ಸಾದ ವ್ಯಕ್ತಿಗಳು ಹೆಚ್ಚು ಬಳಕೆ ಮಾಡುವುದುಂಟು. ಈ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೂ ಮುನ್ನ ತಮ್ಮ ದೇಹಕ್ಕೆ ಅಗತ್ಯವಿದೆಯೇ ಎಂಬುದನ್ನು ಸಾಕಷ್ಟು ಜನರು ಪರೀಕ್ಷಿಸುವುದಿಲ್ಲ. ಈ ಮಾತ್ರೆಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಜಠರ, ಕರುಳಿನ ಸಮಸ್ಯೆಗಳು ಉಂಟಾಗುತ್ತವೆ. 

ವಿಟಮಿನ್ ಬಿ9 (ಫೋಲೇಟ್) ಅಥವಾ ಫೋಲಿಕ್ ಆ್ಯಸಿಡ್
ಈ ಮಾತ್ರೆ 8 ಜೀವಸತ್ವಗಳನ್ನು ಹೊಂದಿರುವ ಮಾತ್ರೆಯಾಗಿದ್ದು, ಸಾಮಾನ್ಯವಾಗಿ ಈ ಮಾತ್ರೆಗಳನ್ನು ಜನರು ತಾವಾಗಿಯೇ ಸೇವನೆ ಮಾಡುವುದುಂಟು. ಮಾತ್ರೆ ಹೆಚ್ಚು ಸುರಕ್ಷಿತ ಹೌದು. ಆದರೂ ಕೆಲವೊಮ್ಮೆ ಈ ಮಾತ್ರೆಗಳಿಂದ ಮಾನಸಿಕ ಸಮಸ್ಯೆಗಳು ಎದುರಾಗುವುದುಂಟು. ಕಿಬ್ಬೊಟ್ಟೆಯ ಸೆಳೆತ, ಅನಿಯಮಿತ ನಿದ್ರೆ, ವಾಕರಿಕೆ, ಮನಃಸ್ಥಿತಿಗಳು ಇದ್ದಕ್ಕಿದ್ದಂತೆ ಬದಲಾಗುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳು ಎದುರಾಗುತ್ತವೆ. 

ವಿಟಮಿನ್ ಎ
ಇದು ಹಲ್ಲುಗಳು, ಅಂಗಾಂಶಗಳನ್ನು ಮೃದುವಾಗಿಸುವುದು ಮತ್ತು ಚರ್ಮ ಸಮಸ್ಯೆಗಳಿಗೆ ಬಳಕೆ ಮಾಡಲಾಗುತ್ತದೆ. ಆದರೆ, ಈ ಮಾತ್ರೆ ಎಲ್ಲರಿಗೂ ಸರಿಹೊಂದುವುದಿಲ್ಲ. ವೈದ್ಯರ ಸಲಹೆ ಪಡೆಯದೆಯೇ ಈ ಮಾತ್ರೆಗಳನ್ನು ನಿಯಮಿತವಾಗಿ ಸೇವನೆ ಮಾಡಿದ್ದೇ ಆದರೆ, ಕೋಮಾ ಅಥವಾ ಸಾವುಗಳು ಸಂಭವಿಸುವ ಸಾಧ್ಯತೆಗಳಿವೆ. 

ವಿಟಮಿನ್ ಕೆ
ಈ ಮಾತ್ರೆಯಲ್ಲಿ ವಿಷದ ಪ್ರಮಾಣ ಕಡಿಮೆ ಇದ್ದರೂ, ಪ್ರತಿಜೀವಕಗಳಿಗೆ ಅಡ್ಡಿಪಡಿಸುತ್ತದೆ. ವೈದ್ಯರ ಸಲಹೆ ಇಲ್ಲದೆ ಇಂತಹ ಮಾತ್ರೆಗಳನ್ನು ತೆಗೆದುಕೊಳ್ಳದೆ ಇರುವುದೇ ಒಳ್ಳೆಯದು. ಪ್ರಮುಖವಾಗಿ ಹೃದಯ ಸಮಸ್ಯೆ ಎದುರಿಸುತ್ತಿರುವವರು ಈ ಮಾತ್ರೆಯಿಂದ ದೂರ  ಇರುವುದೇ ಒಳ್ಳೆಯದು.

Stay up to date on all the latest ಜೀವನಶೈಲಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp