ಬರುತ್ತಿದೆ ಹೋಳಿ: ಹಬ್ಬದ ಸಂಭ್ರಮದ ಮಧ್ಯೆ ಕಣ್ಣುಗಳ ರಕ್ಷಣೆಯ ಬಗ್ಗೆ ಇರಲಿ ಎಚ್ಚರ!

ಭಾರತದಲ್ಲಿ ಸುಗ್ಗಿ ಕಾಲದಲ್ಲಿ ಅಂದರೆ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಣ್ಣದೋಕುಳಿ ಆಡುವ ಮೂಲಕ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಮನಸ್ಸುಗಳ ನಡುವೆ ಪ್ರೀತಿಯ ಸಂಬಂಧವನ್ನು ಬೆಸೆಯುವ ಈ ಬಣ್ಣಗಳು ನೋಡಲು ಎಷ್ಟು ಸುಂದರವಾಗಿರುತ್ತದೆಯೋ ಅಷ್ಟೇ ಅಪಾಯಕಾರಿಯೂ ಹೌದು.

Published: 25th March 2021 01:25 PM  |   Last Updated: 25th March 2021 02:17 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಎಲ್ಲರೂ ಕಾಯುತ್ತಿದ್ದ ಹಬ್ಬಗಳ ಹಬ್ಬ ಹೋಳಿ ಹಬ್ಬ ಹತ್ತಿರ ಬರುತ್ತಿದೆ. ಭಾರತದಲ್ಲಿ ಸುಗ್ಗಿ ಕಾಲದಲ್ಲಿ ಅಂದರೆ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬಣ್ಣದೋಕುಳಿ ಆಡುವ ಮೂಲಕ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಮನಸ್ಸುಗಳ ನಡುವೆ ಪ್ರೀತಿಯ ಸಂಬಂಧವನ್ನು ಬೆಸೆಯುವ ಈ ಬಣ್ಣಗಳು ನೋಡಲು ಎಷ್ಟು ಸುಂದರವಾಗಿರುತ್ತದೆಯೋ ಅಷ್ಟೇ ಅಪಾಯಕಾರಿಯೂ ಹೌದು.

ಹೋಳಿ ಬಣ್ಣಗಳು ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಹೆಚ್ಚು ಹಾನಿಯನ್ನುಂಟು ಮಾಡುತ್ತವೆ. ಚರ್ಮದ ಮೇಲೆ ಹೋಳಿ ಬಣ್ಣವು ಕಣ್ಣನ್ನು ಕೆಂಪಾಗಿಸುವುದು, ಅಲರ್ಜಿಗಳು, ತುರಿಕೆ ಹೀಗೆ ಹಲವು ರೀತಿಯ ತೊಂದರೆ ಉಂಟುಮಾಡುತ್ತದೆ, ನಂತರ ಹಾನಿಕಾರಕ ಬಣ್ಣಗಳು ಕಣ್ಣಿನ ಒಳಗೆ ಹೋದಲ್ಲಿ ಕಣ್ಣು ಉರಿ, ಅಲರ್ಜಿ ಹೀಗೆ ಇತ್ಯಾದಿಗಳ ತೊಂದರೆಗಳು ಉಂಟಾಗಬಹುದು.

ಪರಸ್ಪರ ಬಣ್ಣ ಹಚ್ಚಿಕೊಳ್ಳದಿದ್ದರೆ ಹೋಳಿ ಹಬ್ಬ ಆಚರಣೆ ಮಾಡಿದಂತೆ ಆಗುವುದಿಲ್ಲ. ಹೋಳಿಯಲ್ಲಿ ಕೆಲವರು ಬಹಳ ಉತ್ಸುಕರಾಗಿರುತ್ತಾರೆ, ಇನ್ನೂ ಕೆಲವರು ಬಣ್ಣ ಹಚ್ಚುವ ಸಂಭ್ರಮದಲ್ಲಿ ರಾಸಾಯನಿಕ ಭರಿತ ಬಣ್ಣಗಳನ್ನು ಕಣ್ಣುಗಳಿಗೆ ಮತ್ತು ಬಾಯಿಗೆ ಹಚ್ಚಿ ಬಿಡುತ್ತಾರೆ. ಈ ರಾಸಾಯನಿಕ ಬಣ್ಣಗಳು ಚರ್ಮ ಮತ್ತು ಕಣ್ಣುಗಳಿಗೆ ತುಂಬಾ ಹಾನಿಕಾರಕವಾಗಿದೆ. ಹೋಳಿ ಆಡುವಾಗ ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿರಿಸಲು ಈ ಸಲಹೆಗಳನ್ನು ಅನುಸರಿಸಿ...

ಹೋಳಿ ಕಣ್ಣುಗಳ ರಕ್ಷಿಸಲು ಏನನ್ನು ಮಾಡಬೇಕು....?

 • ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವು ಅತ್ಯಂತ ಸೂಕ್ಷ್ಮವಾಗಿದ್ದು, ಹೋಳಿ ಆಡಲು ಹೊರಗೆ ಹೋಗುವುದಕ್ಕೂ ಮುನ್ನ ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿ.
 • ನಿಮ್ಮ ಮುಖದ ಮೇಲೆ ಬಣ್ಣಗಳನ್ನು ಹಚ್ಚುವ ವೇಳೆ ಕಣ್ಣುಗಳಿಗೆ ತಾಕದಂತೆ ನೋಡಿಕೊಳ್ಳಿ. ಕಣ್ಣುಗಳ ರಕ್ಷಣೆಗಾಗಿ ಕನ್ನಡಕ, ಸನ್ಗ್ಲಾಸ್ ಅಥವಾ ಸರಳ ಕನ್ನಡಕ ಬಳಕೆ ಉತ್ತಮವಾಗಿರುತ್ತದೆ.
 • ಹೋಳಿ ಆಡಿದ ಬಳಿಕ ಕಣ್ಮುಗಳನ್ನು ಮಿಟುಕಿಸಿ ಸ್ವಚ್ಛಗೊಳಿಸಿಕೊಳ್ಳಿ. ನಂತರ ಶುದ್ಧವಾದ ಕುಡಿಯುವ ನೀರಿನಿಂದ ಸಾಕಷ್ಟು ಬಾರಿ ತೊಳೆಯಿರಿ.
 • ನಿಮ್ಮ ಮುಖವನ್ನು ಕೆಳಗೆ ಮಾಡಿ ಅಂಗೈಯಲ್ಲಿ ನೀರಿನ್ನು ಹಿಡಿದುಕೊಂಡು ಕಣ್ಣುಗಳನ್ನು ನೀರಿನಲ್ಲಿ ಹಾಕಿ ನಿಧಾನವಾಗಿ ಕಣ್ಣುಗಳನ್ನು ಮಿಟುಕಿಸಿ ಬಣ್ಣವನ್ನು ತೆಗೆಯಲು ಪ್ರಯತ್ನಿಸಿ. ಕಣ್ಣು ಮಿಟುಕಿಸಿದ ಬಳಿಕ ನೀರು ಬಣ್ಣವಾಗಿದ್ದರೆ, ಮತ್ತೊಮ್ಮೆ ಶುದ್ಧವಾದ ನೀರನ್ನು ಅಂಗೈಯಲ್ಲಿ ಇಟ್ಟು ಕಣ್ಣುಗಳನ್ನು ಸ್ವಚ್ಛಗೊಳಿಸಿದ.
 • ಹೋಳಿ ಆಡುವ ವೇಳೆ ಹೆಣ್ಣು ಮಕ್ಕಳು ಕೂದಲನ್ನು ಕಟ್ಟುವುದು ಉತ್ತಮ. ಏಕೆಂದರೆ, ಹೋಳಿ ಆಡುವ ವೇಳೆ ಹಾಕುವ ನೀರು ಬಣ್ಣ ಮಿಶ್ರಿತಗೊಂಡು ಕೂದಲಿನಿಂದ ಕಣ್ಣುಗಳಿಗೆ ಶೀಘ್ರಗತಿಯಲ್ಲಿ ತಲುಪುತ್ತದೆ. ಹೀಗಾಗಿ ಕ್ಯಾಪ್ ಗಳನ್ನು ಬಳಕೆ ಮಾಡುವುದೂ ಉತ್ತಮವಾಗಿರುತ್ತದೆ.
 • ಹೋಳಿ ಆಡಿದ ಬಳಿಕ ದೇಹದ ಚರ್ಮದ ಕೆಂಪಗಾಗಿದ್ದರೆ, ತುರಿಕೆಗಳು ಕಂಡು ಬಂದರೆ, ಅಸ್ವಸ್ಥತೆಯಿಂದಿರುವುದು, ತುರಿಕೆಯಿಂದ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದ್ದೇ ಆದರೆ, ಕೂಡಲೇ ಸೂಕ್ತ ವೈದ್ಯರನ್ನು ಸಂಪರ್ಕಿಸಿ.
 • ಹೋಳಿ ಆಡುವಾಗ ಸಾಧ್ಯವಾದಷ್ಟು ಕಣ್ಣಿಗೆ ಬಣ್ಣ ಬೀಳದಂತೆ ಬಹಳ ಎಚ್ಚರದಿಂದಿರಿ. ಕೆಲವೊಮ್ಮೆ ಎಷ್ಟೆ ಏಚ್ಚರದಿಂದ ಇದ್ದರೂ ಕೂಡ ಕಣ್ಣುಗಳನ್ನು ರಕ್ಷಣೆ ಮಾಡುವುದು ಕಷ್ಟಕರವಾಗಿ ಹೋಗುತ್ತದೆ. ಆದರೂ, ಯಾರಾದರೂ ಮುಖದ ಮೇಲೆ ಬಣ್ಣ ಹಚ್ಚಲು ಬಂದಿದ್ದೇ ಆದರೆ, ಕಣ್ಣು ಹಾಗೂ ತುಟಿಗಳನ್ನು ಬಿಗಿಯಾಗಿ ಮುಚ್ಚಿಕೊಳ್ಳಿ.

ಏನನ್ನು ಮಾಡಬಾರದು...?

 • ಕಣ್ಣುಗಳಿಗೆ ಸಣ್ಣ ದೂಳೆ ಆಗಲಿ ಅಥವಾ ಬಣ್ಣವಾಗಲಿ ಬಿದ್ದಾಗ ಕಣ್ಣುಗಳನ್ನು ಸ್ವಲ್ಪವೂ ಉಜ್ಜಬೇಡಿ. ಇದು ಕಣ್ಣಿನ ಕಿರಿಕಿರಿ ಮತ್ತು ಕಣ್ಣು ಕೆಂಪಾಗುವುದಕ್ಕೆ ಕಾರಣವಾಗಬಹುದು. ಕಣ್ಣುಗಳ ಹೊರಗೆ ಬಣ್ಣವಿದ್ದರೆ, ಮೊದಲು ಅದನ್ನು ಬಟ್ಟೆಯಿಂದ ತೆಗೆದುಹಾಕಿ. ನಂತರ ಕಣ್ಣಿನ ಡ್ರಾಪ್ ಹಾಕಿ.
 • ಕಣ್ಣುಗಳಿಗೆ ಧೂಳು ಅಥವಾ ಬಣ್ಣ ಬಿದ್ದ ಕೂಡಲೇ ಕರವಸ್ತ್ರ ಅಥವಾ ಟಿಶ್ಯೂವಿನಿಂದ ಕಣ್ಣಿನ ಒಳಗೆ ಹಾಕದಿರಿ. ಒಂದು ವೇಳೆ ಈ ರೀತಿ ಮಾಡಿದ್ದೇ ಆದರೆ, ಸಮಸ್ಯೆ ಹೆಚ್ಚಾಗುತ್ತದೆ.
 • ಹೋಳಿ ವೇಳೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವುದನ್ನು ನಿಯಂತ್ರಿಸಿ. ಸಾಮಾನ್ಯವಾಗಿ ಕಾಂಟ್ಯಾಕ್ಟ್ ಲೆನ್ಸ್‌ಗಳು ನೀರನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದ್ದು, ಬಣ್ಣದ ನೀರು ಕಣ್ಣಿಗೆ ಬಿದ್ದಾಗ ಇದು ಕಾಂಟ್ಯಾಕ್ಟ್ ಲೆನ್ಸ್ ಮೂಲಕ ಕಣ್ಣಿಗೆ ಅಲರ್ಜಿ, ಸೋಂಕಿನ ಅಪಾಯವನ್ನು ಎದುರು ಮಾಡಲಿದೆ.
 • ವಾಟರ್ ಬಲೂನ್ ಗಳನ್ನು ಬಳಕೆ ಮಾಡದಿರುವುದು ಉತ್ತಮ. ಏಕೆಂದರೆ, ಇದು ಅತ್ಯಂತ ಅಪಾಯಕಾರಿಯಾಗಿದ್ದು, ಕಣ್ಣುಗಳಿಗೆ ಸಾಕಷ್ಟು ಹಾನಿಯುಂಟು ಮಾಡುತ್ತವೆ.
Stay up to date on all the latest ಜೀವನಶೈಲಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp