ಗರ್ಭಾವಸ್ಥೆಯಲ್ಲಿ ತಾಯಿಯ ಮನಸ್ಥಿತಿ: ಮಗುವಿನ ಮೇಲೆ ಪರಿಣಾಮ ಹೇಗೆ?
ಗರ್ಭಾವಸ್ಥಿಯಲ್ಲಿನ ತಾಯಿಯ ಆಲೋಚನೆಗಳು, ಮನಸ್ಥಿತಿ ಮಗುವಿನ ಮೇಲೆ ಪರಿಣಾಮ ಉಂಟುಮಾಡುವ ಬಗ್ಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು ಹಲವು ಕುತೂಹಲಭರಿತ ಮಾಹಿತಿಗಳನ್ನು ಬಹಿರಂಗಪಡಿಸಿದೆ.
Published: 01st April 2022 05:06 PM | Last Updated: 01st April 2022 05:20 PM | A+A A-

ಸಾಂಕೇತಿಕ ಚಿತ್ರ
ಗರ್ಭಾವಸ್ಥಿಯಲ್ಲಿನ ತಾಯಿಯ ಆಲೋಚನೆಗಳು, ಮನಸ್ಥಿತಿ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತನ್ನು ನಾವು ಹಲವು ಬಾರಿ ಕೇಳಿರುತ್ತೇನೆ. ಈ ಬಗ್ಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು ಹಲವು ಕುತೂಹಲಭರಿತ ಮಾಹಿತಿಗಳನ್ನು ಬಹಿರಂಗಪಡಿಸಿದೆ.
ಅಧ್ಯಯನ ವರದಿಯಲ್ಲೇನಿದೆ?
ಮನಸ್ಥಿತಿಯನ್ನು ಉತ್ತಮಗೊಳಿಸುವ ಕಾರ್ಯಕ್ರಮಗಳಿಂದ ಗರ್ಭಿಣಿಯರಲ್ಲಿ ಒತ್ತಡ, ಖಿನ್ನತೆ ಕಡಿಮೆಯಾಗಲಿದೆ.
ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಾಯಂದಿರ ಮಕ್ಕಳಲ್ಲಿ ಉತ್ತಮ ಮನಸ್ಥಿತಿ ಹೊಂದಿರುತ್ತಾರೆ ಹಾಗೂ 6 ತಿಂಗಳಲ್ಲಿ ಒತ್ತಡದ ಪ್ರತಿಕ್ರಿಯೆ ಆರೋಗ್ಯವಾಗಿರಲಿದೆ
ಪ್ರತಿಕೂಲತೆಗಳಿಂದ ಮರಳಿ ಪುಟಿದೇಳುವುದಕ್ಕೆ ಇಂತಹ ಮಕ್ಕಳಲ್ಲಿ ಹೆಚ್ಚಿನ ಸಾಮರ್ಥ್ಯ ಇರಲಿದೆ ಹಾಗೂ ಶಸ್ತ್ರಚಿಕಿತ್ಸೆ ಹಾಗೂ ಅನಾರೋಗ್ಯದಿಂದ ಬಹುಬೇಗ ಚೇತರಿಸಿಕೊಳ್ಳುತ್ತಾರೆ.
ಉತ್ತಮ ಮನಸ್ಥಿತಿ ಎಂಬುದು ನಿರೀಕ್ಷೆಯಲ್ಲಿರುವ ತಾಯಿ ಹಾಗೂ ಇನ್ನಷ್ಟೇ ಜನಿಸಬೇಕಿರುವ ಮಗು ಇಬ್ಬರಿಗೂ ಸಹಕಾರಿಯಾಗಿದೆ. ಯಾವುದೇ ವ್ಯಕ್ತಿಯ ಮನಸ್ಸು ಆನುವಂಶಿಕ ಅಡಿಪಾಯ, ವಾತಾವರಣದ ಅಂಶಗಳು, ಭಾವನೆಗಳು ಹಾಗೂ ವರ್ತನೆಯ ಭಾಗವಾಗಿರುತ್ತದೆ. ಆದ್ದರಿಂದ ಶಾಂತಿಗೆ ಸಂಬಂಧಿಸಿದ ಯಾವುದೇ ಅಭ್ಯಾಸಗಳನ್ನು ಗರ್ಭಿಣಿಯರು ಆದ್ಯತೆಯನ್ನಾಗಿ ಪರಿಗಣಿಸಬೇಕು. ಇದರಿಂದ ಅವರ ಜೀವನ ಹಾಗೂ ಮಗುವಿನ ಜೀವನದ ಗುಣಮಟ್ಟ ಹೆಚ್ಚಲಿದೆ ಎನ್ನುತ್ತಾರೆ ಎಚ್‌ಒಡಿ ಮತ್ತು ಸಮಾಲೋಚಕರು, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಣಿಪಾಲ್ ಆಸ್ಪತ್ರೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರಿನ ವೈದ್ಯರಾದ ಡಾ ಗಾಯತ್ರಿ ಕಾರ್ತಿಕ್ ನಾಗೇಶ್.
ಇನ್ನು ಮುಂಬೈ ಸೆಂಟ್ರಲ್ ನ ವೊಕಾರ್ಡ್ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ಇಂದ್ರಾಣಿ ಸಾಳುಂಖೆ ಮಾತನಾಡಿ, ಅಧ್ಯಯನಕ್ಕೆ ವ್ಯತಿರಿಕ್ತವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗರ್ಭದಲ್ಲಿರುವ ಮಗುವಿನ ಮಾನಸಿಕ ಆರೋಗ್ಯಕ್ಕೂ ತಾಯಿಯ ಮಾನಸಿಕ ಆರೋಗ್ಯಕ್ಕೂ ಸಂಬಂಧವಿರಲೇಬೇಕೆಂದೇನು ಇಲ್ಲ ಎಂದಿದ್ದಾರೆ.
ಡಾ. ಇಂದ್ರಾಣಿ ಸಾಳುಂಖೆ ಹೇಳುವ ಪ್ರಕಾರ "ಮಾನಸಿಕ ಆರೋಗ್ಯ ಚೆನ್ನಾಗಿಯೇ ಇರುವ ತಾಯಂದಿರು ಮಾನಸಿಕವಾಗಿ ಅಸ್ಥಿರವಾಗಿರುವ ಮಕ್ಕಳಿಗೆ ಜನ್ಮ ನೀಡಿರುವ ಉದಾಹರಣೆಗಳಿವೆ. ಹೆರಿಗೆ ಸಮಯದಲ್ಲಿ ಮಗು ಎದುರಿಸುವ ಒತ್ತಡ ನಿರ್ಣಾಯಕ ಅಂಶವಾಗಿದೆ. ಕೆಲವೊಮ್ಮೆ ತಾಯಿ ಎದುರಿಸುವ ದೀರ್ಘಾವಧಿಯ ಹೆರಿಗೆಯಿಂದ ಮಗುವಿನಲ್ಲಿ ಸೆರೆಬ್ರಲ್ ಹೈಪೋಕ್ಸಿಯಾ ಸಮಸ್ಯೆಗೆ ಕಾರಣವಾಗಿ ಬೆಳವಣಿಗೆಯಲ್ಲಿ ಕುಂಠಿತವಾಗಬಹುದು ಅಪೌಷ್ಟಿಕತೆ ಎದುರಿಸುತ್ತಿರುವ ತಾಯಂದಿರು ಕುಂಠಿತ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇರುವುದರಿಂದ ಸರಿಯಾದ ಪೋಷಣೆಯತ್ತ ಗಮನ ನೀಡಬೇಕು".