
ಅಗಸೆ ಬೀಜ
ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಸಿಗುವ ಅಗಸೆ ಬೀಜ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿಯಾಗುತ್ತದೆ.
ಪುಡಿ ಮಾಡಿದ ಅಗಸೆಬೀಜದ ಒಂದು ಟೀಚಮಚ 7 ಗ್ರಾಂ ಇರುತ್ತದೆ. ಇದರಲ್ಲಿ 1.28 ಗ್ರಾಂ ಪ್ರೋಟೀನ್, 2.95 ಗ್ರಾಂ ಕೊಬ್ಬು, 2.02 ಗ್ರಾಂ ಕಾರ್ಬೋಹೈಡ್ರೇಟ್, 1.91 ಗ್ರಾಂ ಫೈಬರ್, 17.8 ಮಿಗ್ರಾಂ ಕ್ಯಾಲ್ಸಿಯಂ, 27.4 ಮಿಗ್ರಾಂ ಮೆಗ್ನೀಷಿಯಮ್, 44.9 ಮಿಗ್ರಾಂ ರಂಜಕ, 56.9 ಮಿಗ್ರಾಂ ಪೊಟ್ಯಾಸಿಯಮ್, 6.09 ಮೈಕ್ರೊಗ್ರಾಂ ಫೋಲೇಟ್ ಮತ್ತು 45.6 ಮೈಕ್ರೊಗ್ರಾಂ ಲುಟೀನ್ ಮತ್ತು ಗ್ಯಾಕ್ಸಾಂಟಿನ್ ಹ್ಯಾಪನ್ಸ್ ಇದೆ, ಇದು ಆರೋಗ್ಯಕರ ದೇಹಕ್ಕೆ ಬಹಳ ಮುಖ್ಯ.
ಅಗಸೆ ಬೀಜದ ಆರೋಗ್ಯಕಾರಿ ಪ್ರಯೋಜನಗಳು ಇಲ್ಲಿವೆ.
ತೂಕ ನಿರ್ವಹಣೆ
ಸ್ಥೂಲಕಾಯ ಹೊಂದಿರುವವರಿಗೆ ಅಗಸೆ ಬೀಜ ರಾಮಬಾಣ. ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಇದು ಪ್ರಯೋಜನಕಾರಿ. ಪ್ರತಿದಿನ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 6 ರಿಂದ ಶೇ.11 ರಷ್ಟು ಕಡಿಮೆ ಮಾಡಬಹುದು.
ಜೀರ್ಣಕ್ರಿಯೆಗೆ ನೆರವು
ಸಕಲ ರೋಗಗಳ ಮೂಲ ಈ ಜೀರ್ಣಕ್ರಿಯೆಯೇ ಆಗಿರುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್ಸ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿವೆ. ಅಗಸೆ ಬೀಜಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಅಕಾಲಿಕ ವೃದ್ಧಾಪ್ಯ ನಿಯಂತ್ರಣ
ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಫೈಟೊಕೆಮಿಕಲ್ಸ್ ಗುಣ ಲಕ್ಷಣಗಳಿವೆ, ಇದು ಹೆಚ್ಚುತ್ತಿರುವ ವಯಸ್ಸಿನಲ್ಲಿ ಮುಖದ ಚರ್ಮವನ್ನು ಯುವ್ವನಯುಕ್ತವಾಗಿರಿಸುತ್ತದೆ. ಸುಕ್ಕುಗಳು ಸಮಸ್ಯೆ ದೂರವಾಗಿಸಿ ಮತ್ತು ಚರ್ಮವು ಹೊಳೆಯುವಂತೆ ಮಾಡುತ್ತದೆ.
ಮಲಬದ್ಧತೆ
ಅಗಸೆ ಬೀಜದಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ಉರಿಯೂತದ ಕಾಯಿಲೆ, ಹೃದಯ ಕಾಯಿಲೆ, ಹಾರ್ಮೋನುಗಳ ಅಸಮತೋಲನ, ಹೊಟ್ಟೆ ಉಬ್ಬರ ಮತ್ತು ಎಡಿಮಾವನ್ನು ಕಡಿಮೆ ಮಾಡುತ್ತದೆ. ಆಗಸೆ ಬೀಜಗಳು ಟೈಪ್ 2 ಡಯಾಬಿಟಿಸ್, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಲ್ಲದು.