ವಾರಾಂತ್ಯ ಕರ್ಫ್ಯೂ, ಹೊರಗೆ ಓಡಾಡುವಂತಿಲ್ಲ, ನಗರ ವಾಸಿಗಳು ಏನು ಮಾಡಬಹುದು?

ರಾಜ್ಯದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ, ಓಮಿಕ್ರಾನ್ ರೂಪಾಂತರಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದಂತೆ ವೀಕೆಂಡ್ ನಿರ್ಬಂಧ, ಕೊರೋನಾ ನಿಯಮಗಳನ್ನು ರಾಜ್ಯ ಸರ್ಕಾರ ಹೇರಿದೆ.

Published: 08th January 2022 11:11 AM  |   Last Updated: 08th January 2022 03:04 PM   |  A+A-


Representational image

ಸಾಂದರ್ಭಿಕ ಚಿತ್ರ

The New Indian Express

ರಾಜ್ಯದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆ, ಓಮಿಕ್ರಾನ್ ರೂಪಾಂತರಿ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿದ್ದಂತೆ ವೀಕೆಂಡ್ ನಿರ್ಬಂಧ, ಕೊರೋನಾ ನಿಯಮಗಳನ್ನು ರಾಜ್ಯ ಸರ್ಕಾರ ಹೇರಿದೆ. ವೀಕೆಂಡ್ ಬಂತೆಂದರೆ ಹೊರಗಡೆ ಸುತ್ತಾಟ, ವಾರಂತ್ಯ ಮೋಜು-ಮಸ್ತಿ, ಪಾರ್ಟಿ, ಸ್ನೇಹಿತರು, ಬಂಧುಗಳ ಭೇಟಿ ಎಂದು ಹೇಳುತ್ತಿದ್ದ ನಗರವಾಸಿಗಳಿಗೆ ಇನ್ನು ಕೆಲ ದಿನಗಳವರೆಗೆ ಸರ್ಕಾರದಿಂದ ನಿರ್ಬಂಧ ಇರುವುದಂತೂ ಸತ್ಯ.

ಹಾಗಾದರೆ ಮನೆಯಲ್ಲಿದ್ದುಕೊಂಡು ಬೋರ್ ಆಗದಂತೆ ವಾರಾಂತ್ಯವನ್ನು ನಗರವಾಸಿಗಳು ಹೇಗೆ ಕಳೆಯಬಹುದು, ಕೊರೋನಾ ಕೇಸುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗಡೆ ಓಡಾಡದೆ ಮನೆಯಲ್ಲಿಯೇ ಹೇಗೆ ಕಳೆಯಬಹುದು, ಮನೆಯಲ್ಲಿದ್ದುಕೊಂಡು ಹೇಗೆ ಚಟುವಟಿಕೆಯಿಂದ ಇರಬಹುದು ಎಂಬುದಕ್ಕೆ ಇಲ್ಲಿ ಕೆಲವು ಟಿಪ್ಸ್ ಗಳಿವೆ.

ಗಾರ್ಡನ್ ನಲ್ಲಿ ಕಳೆಯಿರಿ: ನಿಮ್ಮ ಮನೆಯ ಬಾಲ್ಕನಿಯಲ್ಲಿ, ಟೆರೇಸ್ ಮೇಲೆ ಜಾಗವಿದ್ದರೆ ಪಾಟ್ ಗಳಲ್ಲಿ, ಪ್ಲಾಸ್ಟಿಕ್ ಡಬ್ಬಿಗಳು, ಬಕೆಟ್ ಗಳಲ್ಲಿ ಹೂಗಿಡಗಳನ್ನು, ತರಕಾರಿಗಳನ್ನು ಬೆಳೆಸಲು ಪ್ರಯತ್ನಿಸಿ. ಯಾವ ರೀತಿ ನಗರ ಪ್ರದೇಶಗಳಲ್ಲಿ ಗಾರ್ಡನ್ ಗಳನ್ನು ಬೆಳೆಸಬಹುದು, ಇರುವ ಪುಟ್ಟ ಜಾಗದಲ್ಲಿ ನವೀನ ರೀತಿಯಲ್ಲಿ ಜಾಗವನ್ನು ಸರಿಯಾಗಿ ಹೇಗೆ ಬಳಸಬಹುದು ಎಂಬುದಕ್ಕೆ ಹಲವು ಟಿಪ್ಸ್ ಗಳು ಗೂಗಲ್ ನಲ್ಲಿ ಸಿಗುತ್ತವೆ, ಹುಡುಕಿ.

ಅಪರೂಪದ ತಿಂಡಿ-ತಿನಿಸುಗಳನ್ನು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ: ಕೊರೋನಾ ಕರ್ಫ್ಯೂ, ನಿರ್ಬಂಧ ಎಂದ ಮೇಲೆ ಹೊರಗಡೆ ನಮಗೆ ಬೇಕಾದಂತೆ ಓಡಾಡಲು ಸಾಧ್ಯವಾಗುವುದಿಲ್ಲ ಹೌದು, ಆದರೆ ಅದನ್ನು ಪಾಸಿಟಿವ್ ಆಗಿ ಯೋಚಿಸಿ ಕುಟುಂಬಸ್ಥರೊಂದಿಗೆ ಕೂಡಿ ಕಳೆದು ಚೆನ್ನಾಗಿ ಅಡುಗೆ ಮಾಡಿ, ಅಪರೂಪದ ತಿಂಡಿ ತಿನಿಸುಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ, ಆಗ ಸಮಯ ಹೋಗುವುದು ಗೊತ್ತಾಗುವುದಿಲ್ಲ.

ಪುಸ್ತಕಗಳನ್ನು ಓದಿ: ಪುಸ್ತಕ ಮನುಷ್ಯನ ಜೀವನದ ಅತ್ಯುತ್ತಮ ಸಂಗಾತಿ. ನಿಮಗೆ ಬೋರ್ ಎನಿಸಿದಾಗ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿ ಸಮಯ ಸದುಪಯೋಗಪಡಿಸಿಕೊಳ್ಳಿ.

ವೀಕೆಂಡ್ ನಲ್ಲಿ ಹೊಟೇಲ್ ನಿಂದ ಆರ್ಡರ್ ಮಾಡಿ: ವಾರಾಂತ್ಯಗಳಲ್ಲಿ ಮನೆಯಿಂದ ಹೊರಗೆ ಹೋಗಬಾರದು, ಆದರೆ ಹೊಟೇಲ್ ನಿಂದ ಆರ್ಡರ್ ಮಾಡಿ ತರಿಸಿಕೊಂಡು ತಿನ್ನಬಹುದು. ನಿಮ್ಮ ಕೈಯಲ್ಲಿ ಹಣವಿದ್ದರೆ ಹೊಟೇಲ್ ನಿಂದ ಆರ್ಡರ್ ಮಾಡಿಸಿ ತರಿಸಿ ತಿಂದು ಖುಷಿಪಡಿ. ಇದರಿಂದ ಹೊಟೇಲ್ ಉದ್ಯಮಿಗಳಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ. 

ಯೋಗ, ಧ್ಯಾನ, ವ್ಯಾಯಾಮ ಮಾಡಿ: ವಾರಾಂತ್ಯ ಹೊರಗೆ ಹೋಗಲು ಸಾಧ್ಯವಿಲ್ಲ ಎಂದು ಸುಮ್ಮನೆ ಕುಳಿತುಕೊಳ್ಳಬೇಕಾಗಿಲ್ಲ, ಮನೆಯಲ್ಲಿ ತಿಂದುಂಡು ಚೆನ್ನಾಗಿ ದೇಹ ದಂಡಿಸಿ. ಯೋಗ, ಪ್ರಾಣಾಯಾಮ, ಧ್ಯಾನ, ವ್ಯಾಯಾಮ ಮಾಡಿ, ದೇಹಕ್ಕೆ ದೈಹಿಕ ಕಸರತ್ತು ನೀಡಿ. ಅಪಾರ್ಟ್ ಮೆಂಟ್ ಗಳಲ್ಲಿ ನೀವು ವಾಸಿಸುತ್ತಿದ್ದರೆ ಅದರ ಆವರಣದಲ್ಲಿ ಮನೆಯ ಕೆಳಗೆ ಸುತ್ತಮುತ್ತ ಓಡಾಡಬಹುದು. ದೇವರ ಧ್ಯಾನ ಮಾಡಿ, ಸಂಗೀತ ಹೇಳಿ, ಭಜನೆ ಮಾಡಿ, ನೃತ್ಯ ಮಾಡಿ. 

ಆನ್ ಲೈನ್ ನಲ್ಲಿ ತರಗತಿಗಳಲ್ಲಿ ಭಾಗವಹಿಸಿ: ಇಂದು ಆನ್ ಲೈನ್ ನಲ್ಲಿ ಹಲವು ಶೋಗಳು, ಕಾರ್ಯಾಗಾರಗಳು ನಡೆಯುತ್ತವೆ. ಅದರಲ್ಲಿ ಭಾಗವಹಿಸಿ ಮನಸ್ಸು ಪ್ರಫುಲ್ಲಗೊಳಿಸಿ.

ವರ್ಚುವಲ್ ಆಗಿ ಸಂಪರ್ಕಿಸಿ: ಕೋವಿಡ್ ಬಂದ ಮೇಲೆ ಡಿಜಿಟಲೀಕರಣ, ಆನ್ ಲೈನ್ ಸಂಪರ್ಕ ಹೆಚ್ಚುತ್ತಿದೆ. ಸ್ನೇಹಿತರು, ಕುಟುಂಬಸ್ಥರ ಜೊತೆ ಡಿಜಿಟಲ್ ಮೂಲಕ ಸಂಪರ್ಕಿಸಿ. ಆನ್ ಲೈನ್ ಗೇಮ್ ಗಳನ್ನು ಸ್ವಲ್ಪ ಹೊತ್ತು ಆಡಿ. ಮನೆಯ ಸದಸ್ಯರ ಜೊತೆ ಲೂಡೋ, ಕೇರಂ, ಕಾರ್ಡ್ಸ್, ಚೆಸ್, ಚೆನ್ನಮಣೆ ಆಟ ಇತ್ಯಾದಿಗಳನ್ನು ಆಡಿ ಮನೋರಂಜನೆ ಪಡೆಯಿರಿ. 

ನೆನಪಿಡಿ, ಈ ಕೊರೋನಾ ಸಮಯದಲ್ಲಿ ದೈಹಿಕ ಆರೋಗ್ಯ ಜೊತೆ ಮಾನಸಿಕ ಆರೋಗ್ಯ ಕೂಡ ಅತಿ ಮುಖ್ಯ.


Stay up to date on all the latest ಜೀವನಶೈಲಿ news
Poll
Priyanka Gandhi

ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಭವಿಷ್ಯ ಸುಧಾರಿಸುತ್ತದೆ ಎಂದು ನೀವು ಭಾವಿಸುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp