ಬಾಡಿಗೆ ತಾಯ್ತನ (surrogacy) ಸವಾಲುಗಳು ಮತ್ತು ಪ್ರತಿಫಲಗಳು
ಬಾಡಿಗೆ ತಾಯ್ತನಕ್ಕೆ ಒಳಗಾಗುವವರಿಗೆ ವಿಶೇಷವಾಗಿದ್ದರೂ, ಅನುಭವ ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ. ಇದಕ್ಕೆ ಒಪ್ಪುವಾಗ ಹಲವಾರು ದೈಹಿಕ, ಭಾವನಾತ್ಮಕ, ಆರ್ಥಿಕ ಮತ್ತು ಕಾನೂನಿನ ಸಮಸ್ಯೆಗಳಿವೆ.
Published: 27th January 2022 01:46 PM | Last Updated: 27th January 2022 02:01 PM | A+A A-

ಸರೋಗಸಿ ಸಾಂದರ್ಭಿಕ ಚಿತ್ರ
ಯಾವುದೇ ಮಹಿಳೆಯರು ಮತ್ತು ಪುರುಷರು ಬಂಜೆತನ ಮತ್ತಿತರ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ ಅವರು ಮಕ್ಕಳನ್ನು ಹೊಂದುವುದು ಕಷ್ಟವಾಗುತ್ತದೆ. ಮತ್ತೊಂದೆಡೆ, ಮಕ್ಕಳನ್ನು ಹೊಂದುವ ಅವರ ಬಲವಾದ ಬಯಕೆಯು ಇತರ ಆಯ್ಕೆಗಳಿಗೆ ಕಾರಣವಾಗುತ್ತದೆ. ತಂತ್ರಜ್ಞಾನ ಸುಧಾರಿಸಿರುವ ಮತ್ತು ಸಾಕಷ್ಟು ಸಾಧ್ಯತೆಗಳು ಲಭ್ಯವಿರುವ ಕಾಲದಲ್ಲಿ ನಾವಿದ್ದು, ಬಹುತೇಕ ಅಸಂಭವ ಅನ್ನೋದು ಕಾಲ ನಂತರದಲ್ಲಿ ವಿಕಸನಗೊಳ್ಳುತ್ತಿದೆ.
ಬಾಡಿಗೆ ತಾಯ್ತನಕ್ಕೆ ಒಳಗಾಗುವವರಿಗೆ ವಿಶೇಷವಾಗಿದ್ದರೂ, ಅನುಭವ ಪ್ರತಿಯೊಬ್ಬರಿಗೂ ವಿಭಿನ್ನವಾಗಿರುತ್ತದೆ. ಇದಕ್ಕೆ ಒಪ್ಪುವಾಗ ಹಲವಾರು ದೈಹಿಕ, ಭಾವನಾತ್ಮಕ, ಆರ್ಥಿಕ ಮತ್ತು ಕಾನೂನಿನ ಸಮಸ್ಯೆಗಳಿವೆ. ಇದು ಪೋಷಕರಿಗೆ ಭರವಸೆಯ ಬೆಳಕಾಗುವುದಲ್ಲದೇ, ಅವರ ಗುರಿಗಳನ್ನು ಅರಿತುಕೊಳ್ಳಲು ಅನುವು ಮಾಡಿಕೊಡುತ್ತದೆ.
1. ಸರೋಗೆಸಿ ಕುಟುಂಬಗಳನ್ನು ಒಟ್ಟುಗೂಡಿಸುತ್ತದೆ: ಬಂಜೆತನ, ಎಲ್ ಜಿಬಿಟಿ ದಂಪತಿಗಳು ಮತ್ತಿತರ ಅನಾರೋಗ್ಯ ಸಮಸ್ಯೆಗಳಿಂದಾಗಿ ಮಕ್ಕಳನ್ನು ಪಡೆಯುವಲ್ಲಿ ಅನೇಕ ವರ್ಷಗಳಿಂದ ಪ್ರಯತ್ನಿಸುವವರಿಗೆ ಬಾಡಿಗೆ ತಾಯ್ತನ ಪ್ರಯೋಜನಕಾರಿಯಾಗಿದೆ.
2. ಆನುವಂಶಿಕ ಸಂಬಂಧಗಳನ್ನು ಸಕ್ರಿಯಗೊಳಿಸುತ್ತದೆ: ಒಬ್ಬರು ಅಥವಾ ಇಬ್ಬರೂ ಪೋಷಕರು ಜೈವಿಕ ಬಂಧವನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.
3. ಉತ್ತಮ ಪಾರದರ್ಶಕತೆ: ಪ್ರತಿಯೊಬ್ಬರ ನಿರೀಕ್ಷೆಗಳ ತಕ್ಕಂತೆ ಕಾನೂನುಬದ್ಧವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಲ್ಲದೇ, ಭ್ರೂಣವನ್ನು ಯಾರಿಗೆ ವರ್ಗಾಯಿಸಬೇಕು ಎಂಬುದರ ಬಗ್ಗೆಯೂ ಸಹಿ ಮಾಡಲಾಗುತ್ತದೆ, ಆದ್ದರಿಂದ ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಪ್ರತಿಯೊಬ್ಬರೂ ನಿಖರವಾಗಿ ಅರ್ಥಮಾಡಿಕೊಳ್ಳುತ್ತಾರೆ.
4. ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ: ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬೇಕೆನ್ನುವ ಪೋಷಕರು ಆಗಾಗ್ಗೆ ತಪಾಸಣೆ ಮತ್ತು ಭ್ರೂಣ ವರ್ಗಾವಣೆ ಮತ್ತು ಜನನದಂತಹ ಪ್ರಮುಖ ಸಂದರ್ಭಗಳಲ್ಲಿ ಭಾಗವಹಿಸಲು ಅನುಮತಿಸಲಾಗುತ್ತದೆ.
5. ಹೆಚ್ಚಿನ ಯಶಸ್ಸಿನ ಪ್ರಮಾಣಗಳು: ಸರೊಗಸಿ ಸಾಮಾನ್ಯವಾಗಿ ಆರೋಗ್ಯಕರ ಗರ್ಭಧಾರಣೆಯ ಡೆಲಿವರಿಯಲ್ಲಿ ನೆರವಾಗುತ್ತದೆ.
ಬಾಡಿಗೆ ತಾಯ್ತನದಲ್ಲಿ ಕೆಲವು ನಕಾರಾತ್ಮಕತೆಗಳು:
1. ಬಾಡಿಗೆ ತಾಯ್ತನ ಕಷ್ಟಕರವಾದ ಪ್ರಕ್ರಿಯೆಯಾಗಿರಬಹುದು: ಈ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಮತ್ತು ಕಾನೂನುಬದ್ಧವಾಗಿ ನಡೆಸಲಾಗುತ್ತದೆ ಎಂದು ಖಚಿತಪಡಿಸಿಕೊಳ್ಳಲು, ವಿಶ್ವಾಸಾರ್ಹ ತಜ್ಞರೊಂದಿಗೆ ನಿಕಟವಾಗಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ.
2. ಕೆಲವು ಅಭ್ಯಾಸಗಳನ್ನು ತೊರೆಯಬೇಕು: ಬಾಡಿಗೆ ತಾಯ್ತನ ಉದ್ದೇಶಿತ ಪೋಷಕರು ಸಾಮಾನ್ಯವಾಗಿ ಹೆಚ್ಚಿನ ನಿಯಂತ್ರಣ ಹೊಂದಬೇಕಾಗುತ್ತದೆ ಮತ್ತು ಕೆಲವು ಪದ್ದತಿಗಳನ್ನು ಅನುಸರಿಸುತ್ತಿದ್ದರೆ ಅದನ್ನು ತ್ಯಜಿಸಬೇಕಾಗುತ್ತದೆ. (ಲೇಖಕರು ಹಿರಿಯ ಸಲಹೆಗಾರರು - ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಸ್ತ್ರೀರೋಗತಜ್ಞ ಮತ್ತು ಸಂತಾನೋತ್ಪತ್ತಿ ಔಷಧ)
ತಿಳಿದುಕೊಳ್ಳಬೇಕಾದ ಕೆಲವು ಕಾನೂನುಬದ್ಧ ಅಂಶಗಳು ಇಲ್ಲಿವೆ:
ಬಾಡಿಗೆ ತಾಯ್ತನ (ನಿಯಂತ್ರಣ) : ಸರೊಗೆಸಿ ಬಿಲ್ ಪ್ರಕಾರ ಇದು ಬಂಜೆತನ ಚಿಕಿತ್ಸೆಯಾಗಿದ್ದು, ಇದರಲ್ಲಿ ಮಹಿಳೆ ಬಾಡಿಗೆ ತಾಯಿಯಾಗಿ ಕಾರ್ಯನಿರ್ವಹಿಸುತ್ತಾಳೆ. ಈ ಕಾಯ್ದೆಯಲ್ಲಿರುವಂತೆ ದಂಪತಿ ಚಿಕಿತ್ಸೆ ಪಡೆಯಬಹುದು ಮತ್ತು ಮೂರನೇ ವ್ಯಕ್ತಿಯ ಅಗತ್ಯತೆ ಇರುವುದಿಲ್ಲ.
* ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ರೆಗ್ಯುಲೇಶನ್ ಬಿಲ್ (ART), 2021, ದೇಶದಲ್ಲಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನದ ಸುರಕ್ಷಿತ ಮತ್ತು ನೈತಿಕ ಬಳಕೆಗಾಗಿ ಮಾರ್ಗಸೂಚಿಗಳನ್ನು ಸ್ಥಾಪಿಸುತ್ತದೆ ಮತ್ತು ವಿವಾಹಿತ ದಂಪತಿಗಳು, ಲೈವ್-ಇನ್ ಪಾಲುದಾರರು ಮತ್ತು ಒಂಟಿ ಮಹಿಳೆಯರೆಲ್ಲರೂ ಆರ್ ಟಿ ಕಾರ್ಯವಿಧಾನಗಳಿಗೆ ಅರ್ಹರಾಗುತ್ತಾರೆ. ಸಲಹೆ, ನಿಯಂತ್ರಣ, ನಿಯಮಗಳ ವಿಮರ್ಶೆಗಳು, ಮಾರ್ಗಸೂಚಿಗಳು ಇತ್ಯಾದಿಗಳಿಗಾಗಿ ಅವುಗಳನ್ನು ರಾಷ್ಟ್ರೀಯ ಮಂಡಳಿಯು ನಿಯಂತ್ರಿಸುತ್ತದೆ.
* ಈ ಕ್ರಮಗಳಲ್ಲಿ ಲಿಂಗ ಆಯ್ಕೆ ಮತ್ತು ಲಿಂಗ ನಿರ್ಣಯವನ್ನು ನಿಷೇಧಿಸಲಾಗಿದೆ.
* ಸರೊಗಸಿ ಬಿಲ್ ಈಗ "ಸಮೀಪ ಸಂಬಂಧಿ'' ಬದಲಿಗೆ "ಇಚ್ಛೆಯ ಮಹಿಳೆ" ಬಾಡಿಗೆ ತಾಯಿಯಾಗಲು ಅನುಮತಿಸುತ್ತದೆ ಮತ್ತು ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರು, ಹಾಗೆಯೇ ಬಂಜೆತನದ ಭಾರತೀಯ ದಂಪತಿಗಳು ಅದರ ನಿಬಂಧನೆಗಳಿಂದ ಪ್ರಯೋಜನ ಪಡೆಯಬಹುದು ಎಂದು ಸೂಚಿಸುತ್ತದೆ.
* ಹೊಸ ಶಾಸನವು ಭಾರತದಲ್ಲಿ ವಾಣಿಜ್ಯ ಬಾಡಿಗೆ ತಾಯ್ತನವನ್ನು ನಿಷೇಧಿಸುತ್ತದೆ ಆದರೆ ಪರಹಿತ ಚಿಂತನೆಯ ಬಾಡಿಗೆ ತಾಯ್ತನವನ್ನು ಅನುಮತಿಸುತ್ತದೆ. ಗರ್ಭಾವಸ್ಥೆಯಲ್ಲಿ ವೈದ್ಯಕೀಯ ವೆಚ್ಚಗಳು ಮತ್ತು ವಿಮಾ ರಕ್ಷಣೆಯನ್ನು ಹೊರತುಪಡಿಸಿ ಬಾಡಿಗೆ ತಾಯಿಗೆ ಯಾವುದೇ ವಿತ್ತೀಯ ಪರಿಹಾರವನ್ನು ಒಳಗೊಂಡಿರುವುದಿಲ್ಲ.
* ಬಾಡಿಗೆ ತಾಯಂದಿರ ಹಕ್ಕುಗಳನ್ನು ರಕ್ಷಿಸಲು, ಹಿಂದೆ ಒದಗಿಸಲಾದ ವಿಮಾ ಅವಧಿಯನ್ನು 16 ತಿಂಗಳಿಂದ 36 ತಿಂಗಳಿಗೆ ಹೆಚ್ಚಳವನ್ನು ಮಸೂದೆಯು ಪ್ರಸ್ತಾಪಿಸುತ್ತದೆ. 2019 ರಲ್ಲಿ ಮಂಡಿಸಲಾದ ಮೊದಲ ಕರಡು ಪ್ರತಿಯಲ್ಲಿ, ಬಾಡಿಗೆದಾರರು ಹತ್ತಿರದ ಸಂಬಂಧಿಯಾಗಿರುವುದರಿಂದ ಪರಹಿತಚಿಂತನೆಯ ಬಾಡಿಗೆ ತಾಯ್ತನವನ್ನು ಮಾತ್ರ ಅನುಮತಿಸಲು ಸರ್ಕಾರ ಉದ್ದೇಶಿಸಿತ್ತು.
ಅನುಮೋದಿತ ಮಸೂದೆಯಲ್ಲಿ ಇದನ್ನು ಬದಲಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
* ಬಾಡಿಗೆ ತಾಯ್ತನ ಪ್ರಕ್ರಿಯೆ ಪೂರ್ಣಗೊಳಿಸಲು, ಇಬ್ಬರೂ ಕೂಡಾ ರಾಷ್ಟ್ರೀಯ/ರಾಜ್ಯ ಎಆರ್ ಟಿ ಮಂಡಳಿಗೆ ಅರ್ಜಿ ಸಲ್ಲಿಸಬೇಕು ಮತ್ತು ಕೇಸ್-ಬೈ-ಕೇಸ್ ಆಧಾರದ ಮೇಲೆ ಅನುಮೋದನೆಯನ್ನು ಪಡೆಯಬೇಕು.
* ಸರೊಗೆಸಿ ನಿಯಂತ್ರಿಸುವ ಮಸೂದೆ ವಾಣಿಜ್ಯ ಬಾಡಿಗೆ ತಾಯ್ತನವನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ವಾಣಿಜ್ಯ ರೀತಿಯಲ್ಲಿ ಬಾಡಿಗೆ ತಾಯ್ತನವನ್ನು ಕೇಳುವುದು ಸಹ ಈಗ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ.