ವೀರ್ಯಾಣು ವೃದ್ಧಿ, ಬೊಜ್ಜು ನಿರ್ವಹಣೆ: ಆರೋಗ್ಯದ ಮೇಲೆ ಅಶ್ವಗಂಧದ ಚಮತ್ಕಾರಗಳು!!
ಅಶ್ವಗಂಧ ಪರಿಣಾಮಕಾರಿಯಾದ ಮನೆಮದ್ದು. ಪ್ರಾಚೀನ ಕಾಲದಿಂದಲೂ ಅಶ್ವಗಂಧಕ್ಕೆ ಆಯುರ್ವೇದದಲ್ಲಿ ದೊಡ್ಡ ಮಹತ್ವವಿದೆ. ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ. ಇದು ಮನುಷ್ಯನ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಎನರ್ಜಿಯನ್ನು ಬೂಸ್ಟ್ ಮಾಡುವಂತಹ ಸಾಮರ್ಥ್ಯ ಈ ಅಶ್ವಗಂಧಕ್ಕೆ ಇದೆ.
Published: 11th March 2022 04:48 PM | Last Updated: 11th March 2022 04:48 PM | A+A A-

ಅಶ್ವಗಂಧ
ಅಶ್ವಗಂಧ ಎನ್ನುವುದು ಒಂದು ಪರಿಣಾಮಕಾರಿಯಾದ ಮನೆಮದ್ದು. ಪ್ರಾಚೀನ ಕಾಲದಿಂದಲೂ ಅಶ್ವಗಂಧಕ್ಕೆ ಆಯುರ್ವೇದದಲ್ಲಿ ದೊಡ್ಡ ಮಹತ್ವವಿದೆ.ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ. ಇದು ಮನುಷ್ಯನ ದೇಹಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಎನರ್ಜಿಯನ್ನು ಬೂಸ್ಟ್ ಮಾಡುವಂತಹ ಪವರ್ ಈ ಅಶ್ವಗಂಧಕ್ಕೆ ಇದೆ.
ಅಂದಹಾಗಿ ಈ ಮ್ಯಾಜಿಕಲ್ ಅಶ್ವಗಂಧ ಮಾನವನ ಆರೋಗ್ಯದ ಮೇಲೆ ಉಂಟು ಮಾಡುವ ಚಮತ್ಕಾರಿ ಉಪಯೋಗಗಳೇನು ಗೊತ್ತಾ?
ಒತ್ತಡ ಮತ್ತು ಆತಂಕ ಕಡಿಮೆ ಮಾಡುತ್ತದೆ
ಅಶ್ವಗಂಧ ಸತ್ವಗಳು ಮನುಷ್ಯನಲ್ಲಿ ಎನರ್ಜಿ ಬೂಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತವೆ. ಅಶ್ವಗಂಧ ಪೌಡರ್ ಅನ್ನು ದಿನಕ್ಕೆರಡು ಬಾರಿ ತೆಗೆದುಕೊಳ್ಳುವುದರಿಂದ ಮೆದುಳು ಚುರುಕುಗೊಳ್ಳುತ್ತದೆ.ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿ
ಅಶ್ವಗಂಧ ಮತ್ತೊಂದು ಉಪಯೋಗವೆಂದರೆ ಈ ಅಶ್ವಗಂಧವನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲೂ ಉಪಯೋಗಿಸಲಾಗುತ್ತದೆ. ದೇಹದಲ್ಲಿ ಉಂಟಾಗುವ ಕ್ಯಾನ್ಸರ್ ಸೆಲ್ಸ್ ಅನ್ನು ನಾಶಮಾಡುವಂತಹ ಗುಣ ಈ ಅಶ್ವಗಂಧಕ್ಕೆ ಇದೆ.
ನರಗಳು-ಮೂಳೆಗಳು ಬಲಗೊಳ್ಳುತ್ತವೆ
ಅಶ್ವಗಂಧ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.ಒಂದು ಚಮಚ ಅಶ್ವಗಂಧವನ್ನು ಒಂದು ಗ್ಲಾಸ್ ನೀರಿಗೆ ಮಿಕ್ಸ್ ಮಾಡಿಕೊಂಡು ಕುಡಿಯಬೇಕು. ಈ ರೀತಿ ಮಾಡುವುದರಿಂದ ಮೂಳೆಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳು ಕಡಿಮೆ ಆಗುತ್ತದೆ. ಈ ಅಶ್ವಗಂಧದ ಪುಡಿಯನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿಯುವುದರಿಂದ ನರಗಳು ಬಲಗೊಳ್ಳುತ್ತವೆ.
ದೇಹದ ಸಕ್ಕರೆ, ರಕ್ತದೊತ್ತಡ ನಿಯಂತ್ರಣ
ಡಯಾಬಿಟಿಸ್ ಸಮಸ್ಯೆ ಇರುವವರು ಅಶ್ವಗಂಧ ಪೌಡರ್ ಅನ್ನು ತೆಗೆದುಕೊಳ್ಳುವುದರಿಂದ ಶುಗರ್ ಅನ್ನು ನಾರ್ಮಲ್ ಆಗಿ ಇಟ್ಟುಕೊಳ್ಳಬಹುದು. ಬಿಪಿ, ಕೊಲೆಸ್ಟ್ರೇಲ್ ಅನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.ಇದು ಕೆಟ್ಟ ಕೊಲೆಸ್ಟ್ರೇಲ್ ಹೊರಗೆ ಹಾಕಿ ಒಳ್ಳೆಯ ಕೊಲೆಸ್ಟ್ರೇಲ್ ಅನ್ನು ಉತ್ಪತ್ತಿ ಮಾಡುತ್ತದೆ.
ಅಶ್ವಗಂಧ ಪೌಡರ್ ತೆಗೆದುಕೊಳ್ಳುವುದರಿಂದ ಬಂಜೆತನ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಕೂದಲ ಬೆಳವಣಿಗೆಗೆ ಮತ್ತು ಮುಖದ ಸೌಂದರ್ಯಕ್ಕೆ ಇದನ್ನು ಉಪಯೋಗಿಸುತ್ತಾರೆ. ಅಲ್ಲದೆ ದೇಹದ ಮಾಂಸಖಂಡಗಳ ಬೆಳವಣಿಗೆಗೂ ಇದು ಪೂರವಾಗಿ ಕಾರ್ಯ ನಿರ್ವಹಿಸುತ್ತದೆ.
ಅಲ್ಲದೆ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜ್ಞಾಪಕ ಶಕ್ತಿ ವೃದ್ದಿಸಲು ನೆರವಾಗುತ್ತದೆ. ಆದರೆ...
ಅಶ್ವಗಂಧ ಬಳಕೆಗೂ ಮುನ್ನ ವೈದ್ಯರ ಸಲಹೆ ಅತ್ಯಗತ್ಯ.. ಅಶ್ವಗಂಧವನ್ನು ಹೆಚ್ಚಿನ ಜನರಿಗೆ ಸುರಕ್ಷಿತವೆಂದು ಪರಿಗಣಿಸಲಾಗಿದೆಯಾದರೂ, ಗರ್ಭಿಣಿ ಸ್ತ್ರೀಯರು ಅಥವಾ ಹಾಲುಣಿಸುವ ಮಹಿಳೆಯರು, ಹಾಗೆಯೇ ಲೂಪಸ್, ರುಮಟಾಯ್ಡ್ ಸಂಧಿವಾತ, ಟೈಪ್ 1 ಡಯಾಬಿಟಿಸ್ ಮತ್ತು ಹಶಿಮೊಟೊ ಥೈರಾಯ್ಡೈಟಿಸ್‌ನಂತಹ ಸ್ವಯಂ ನಿರೋಧಕ ಕಾಯಿಲೆಗಳಿರುವ ಜನರು ಇದರ ಬಳಕೆಯನ್ನು ತಪ್ಪಿಸಬೇಕು. ಅಶ್ವಗಂಧವು ಥೈರಾಯ್ಡ್, ರಕ್ತದ ಸಕ್ಕರೆ ಮತ್ತು ರಕ್ತದೊತ್ತಡದ ಔಷಧಿಗಳೊಂದಿಗೆ ಸಂಪರ್ಕ ಸಾಧಿಸುವುದರಿಂದ ಮೊದಲು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಬಳಿಕ ಅವರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಒಳಿತು.