ಟ್ಯಾನ್ ತೆಗೆಯಬೇಕಾ? ದುಬಾರಿ ಫೇಶಿಯಲ್ ಬಿಡಿ, ಈ ಮನೆಮದ್ದುಗಳ ಅನುಸರಿಸಿ...

ನಾವು ತುಂಬಾ ಹೊತ್ತು ಹೊರಗೆ ಸೂರ್ಯನ ಬಿಸಿಲಿನಲ್ಲಿ ಇದ್ದಾಗ, ಚರ್ಮದ ಹೊಳಪು ಕಡಿಮೆ ಆಗುವುದು ಅಥವಾ ಕಪ್ಪಾಗುವುದು ಸಾಮಾನ್ಯ. ಕೆಲವೊಮ್ಮೆ ಚರ್ಮದಲ್ಲಿ ಹೈಪರ್‍ಪಿಗ್ಮೆಂಟೇಶನ್ ಮತ್ತು ಸನ್ ಟ್ಯಾನ್ ಕೂಡ ಉಂಟಾಗುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಾವು ತುಂಬಾ ಹೊತ್ತು ಹೊರಗೆ ಸೂರ್ಯನ ಬಿಸಿಲಿನಲ್ಲಿ ಇದ್ದಾಗ, ಚರ್ಮದ ಹೊಳಪು ಕಡಿಮೆ ಆಗುವುದು ಅಥವಾ ಕಪ್ಪಾಗುವುದು ಸಾಮಾನ್ಯ. ಕೆಲವೊಮ್ಮೆ ಚರ್ಮದಲ್ಲಿ ಹೈಪರ್‍ಪಿಗ್ಮೆಂಟೇಶನ್ ಮತ್ತು ಸನ್ ಟ್ಯಾನ್ ಕೂಡ ಉಂಟಾಗುತ್ತದೆ.

ಆದರೆ, ಈ ಸಮಸ್ಯೆ ದೂರಾಗಿಸಲು ದುಬಾರಿ ಫೇಶಿಯಲ್‍ಗಳನ್ನು ಮಾಡುವುದಕ್ಕಿಂತ, ಮನೆಯಲ್ಲೇ ಇರುವ ಸಾಮಾಗ್ರಿಗಳಿಂದ ಪರಿಹಾರ ಕಂಡುಕೊಳ್ಳಬಹುದು. ಈ ಮನೆಮದ್ದುಗಳು ಚರ್ಮದ ಟ್ಯಾನ್ ತೆಗೆಯುವುದು ಮಾತ್ರವಲ್ಲದೆ, ಚರ್ಮಕ್ಕೆ ಹೊಳಪನ್ನು ಮತ್ತು ಮೃದುತ್ವವನ್ನೂ ನೀಡುತ್ತವೆ.

ನಿಂಬೆ ರಸ ಮತ್ತು ಜೇನು ತುಪ್ಪ


ಲಿಂಬೆ ರಸ, ಸನ್ ಟ್ಯಾನ್ ತೆಗೆಯುವ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿದೆ. ಅದಕ್ಕಾಗಿ ನೀವು ಮಾಡಬೇಕಾದದ್ದಿಷ್ಟೆ, ತಾಜಾ ನಿಂಬೆ ಹಣ್ಣಿನ ರಸ ತೆಗೆದುಕೊಂಡು, ಅದಕ್ಕೆ ಒಂದು ಟೇಬಲ್ ಚಮಚ ಜೇನು ತುಪ್ಪ ಸೇರಿಸಿ. ಬೇಕಿದ್ದರೆ, ಈ ಮಿಶ್ರಣಕ್ಕೆ ಸಕ್ಕರೆಯನ್ನು ಸೇರಿಸಿ, ಚರ್ಮದ ಮೇಲೆ ನಿಧಾನಕ್ಕೆ ಸ್ಕ್ರಬ್ ಕೂಡ ಮಾಡಬಹುದು. 20-30 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಹಾಗೆಯೇ ಒಣಗಲು ಬಿಡಿ, ಬಳಿಕ ತೊಳೆದು ತೆಗೆಯಿರಿ.

ಕಡಲೇಹಿಟ್ಟು , ಅರಶಿಣ ಮತ್ತು ಮೊಸರು


ಕಡಲೇ ಹಿಟ್ಟು, ಚರ್ಮದ ಬಣ್ಣಕ್ಕೆ ಕಾಂತಿ ನೀಡುತ್ತದೆ ಮತ್ತು ಅರಶಿಣ ಚರ್ಮಕ್ಕೆ ಹೊಳಪು ನೀಡುವ ಗುಣವನ್ನು ಹೊಂದಿದೆ. ಮೊಸರಿನಲ್ಲಿ ಇರುವ ಲ್ಯಾಕ್ಟಿಕ್ ಏಜೆಂಟ್ ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಮೊಸರು, ಅರಶಿಣ ಮತ್ತು ಮೊಸರನ್ನು ಸೇರಿಸಿ ಒಂದು ಮಿಶ್ರಣವನ್ನು ತಯಾರಿಸಿ ಮತ್ತು ಅದನ್ನು ನಿಮ್ಮ ಚರ್ಮದ ಮೇಲೆ ಹಚ್ಚಿರಿ. 15 ನಿಮಿಷ ಒಣಗಲು ಬಿಡಿ, ಅದನ್ನು ತೊಳೆದು ತೆಗೆಯುವಾಗ ನಿಧಾನಕ್ಕೆ ಸ್ಕ್ರಬ್ ಮಾಡಿ.

ಪಪ್ಪಾಯ, ಟೊಮ್ಯಾಟೋ, ಕಲ್ಲಂಗಡಿ ಹಣ್ಣು, ಆಲೂಗಡ್ಡೆ ಮತ್ತು ಸೌತೆಕಾಯಿ


ಪಪ್ಪಾಯದಲ್ಲಿ, ಎಕ್ಸ್‌‌‌‌‌ಫೋಲಿಯೇಟಿಂಗ್ ಅಂಶಗಳು ಹೇರಳವಾಗಿವೆ ಮತ್ತು ನೈಸರ್ಗಿಕ ಕಿಣ್ವಗಳಿವೆ. ಅದು ಒಂದು ಉತ್ತಮ ನೈಸರ್ಗಿಕ ಬ್ಲೀಚಿಂಗ್ ಕೂಡ ಹೌದು. ಆಲೂಗಡ್ಡೆ ರಸವು ಕೂಡ ಬ್ಲೀಚಿಂಗ್ ಏಜೆಂಟ್ ಆಗಿದ್ದು, ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲಗಳನ್ನು ಮಂದಗೊಳಿಸುತ್ತದೆ. ಟೊಮ್ಯಾಟೋ ಆ್ಯಂಟಿ ಆಕ್ಸಿಡೆಂಟ್‍ಗಳನ್ನು ಗುಣಗಳನ್ನು ಹೊಂದಿದೆ ಮತ್ತು ಅದು ಚರ್ಮಕ್ಕೆ ಉತ್ತಮ ಕಾಂತಿ ನೀಡಬಲ್ಲದು. ಸೌತೆಕಾಯಿ ಒಂದು ಸೇನ್ಸೆಶನಲ್ ಕೂಲಿಂಗ್ ಏಜೆಂಟ್ ಆಗಿದ್ದು, ಟ್ಯಾನ್ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

ಪಪ್ಪಯಾ ಹಣ್ಣು, ಕಲ್ಲಂಗಡಿ ಹಣ್ಣು, ಆಲೂಗಡ್ಡೆ, ಟೊಮ್ಯಾಟೋ ಮತ್ತು ಸೌತೆಕಾಯಿಯ 4-5 ತುಂಡುಗಳನ್ನು ತೆಗೆದುಕೊಂಡು, ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಆ ಪೇಸ್ಟ್ ಅನ್ನು 15 ನಿಮಿಷಗಳ ಕಾಲ ಫ್ರಿಡ್ಜ್‍ನಲ್ಲಿ ಇಡಿ. ಬಳಿಕ ಅದನ್ನು ಚರ್ಮದ ಮೇಲೆ ಹಚ್ಚಿ ಮತ್ತು ಚರ್ಮ ಅದನ್ನು ಹೀರಿಕೊಳ್ಳುವ ವರೆಗೆ ಉಜ್ಜುತ್ತಿರಿ.

ಬೇಳೆ, ಅರಶಿಣ ಮತ್ತು ಹಾಲು


ಬೇಳೆ (ಮೈಸೂರು ಬೇಳೆ)ಯನ್ನು ರಾತ್ರಿ ಇಡೀ ಹಸಿ ಹಾಲಿನಲ್ಲಿ ನೆನೆಸಿಡಿ. ನೆನೆಸಿಟ್ಟ ಬೆಳೆಯನ್ನು ಅರಶಿಣ ಹಾಕಿ ರುಬ್ಬಿಕೊಳ್ಳಿ. ಅದನ್ನು ಚರ್ಮಕ್ಕೆ ಹಾಕಿ ಒಣಗುವ ವರೆಗೆ ಬಿಡಿ. ಬಳಿಕ ಮುಖವನ್ನು ತೊಳೆಯಿರಿ.

ಕಾಫಿ , ತೆಂಗಿನ ಎಣ್ಣೆ ಮತ್ತು ಸಕ್ಕರೆ


ಕೆಫಿನ್‍ನ ಉತ್ತಮ ಗುಣಗಳನ್ನು ಹೊಂದಿರುವ, ಕಾಫಿಯಲ್ಲಿ ಚರ್ಮಕ್ಕೆ ಉಪಯೋಗ ಆಗುವ ಅನೇಕ ಅಂಶಗಳಿವೆ. ಅದು ಚರ್ಮದ ಟ್ಯಾನ್ ತೆಗೆಯಲು ಸಹಾಯ ಮಾಡುವುದು ಮಾತ್ರವಲ್ಲ, ಮೊಡವೆಗಳನ್ನು ಕೂಡ ನಿವಾರಣೆ ಮಾಡುತ್ತದೆ. ತೆಂಗಿನ ಎಣ್ಣೆ ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ. ಕಾಫಿ ಪೌಡರ್, ತೆಂಗಿನ ಎಣ್ಣೆ ಮತ್ತು ಸಕ್ಕರೆ ಸೇರಿಸಿ ಒಂದು ದಪ್ಪ ಪೇಸ್ಟ್ ತಯಾರಿಸಿ. ಆ ಪೇಸ್ಟ್ ನಿಂದ ಚರ್ಮದ ಮೇಲೆ 10 ನಿಮಿಷ ಸ್ಕ್ರಬ್ ಮಾಡಿ. 10 ನಿಮಿಷ ಒಣಗಲು ಬಿಟ್ಟು, ಬಳಿಕ ತೊಳೆದು ತೆಗೆಯಿರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com