ಮಹಾಶಿವರಾತ್ರಿ: ಉಪವಾಸ ವೇಳೆ ಏನು ಮಾಡಬೇಕು, ಏನನ್ನು ಮಾಡಬಾರದು?

ಶಿವನನ್ನು ಆರಾಧಿಸುವ ಮಹಾಶಿವರಾತ್ರಿಯನ್ನು ದೇಶಾದ್ಯಂತ ಅತ್ಯುತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 18 ರಂದು ಈ ಹಬ್ಬ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ.
ಶಿವಲಿಂಗದ ಸಾಂದರ್ಭಿಕ ಚಿತ್ರ
ಶಿವಲಿಂಗದ ಸಾಂದರ್ಭಿಕ ಚಿತ್ರ

ನವದೆಹಲಿ: ಶಿವನನ್ನು ಆರಾಧಿಸುವ ಮಹಾಶಿವರಾತ್ರಿಯನ್ನು ದೇಶಾದ್ಯಂತ ಅತ್ಯುತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 18 ರಂದು ಈ ಹಬ್ಬ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ.

 ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ಚಂದ್ರ ಸೌರ ಮಾಸದಲ್ಲಿ ಶಿವರಾತ್ರಿ ಇದ್ದರೆ, ಮಹಾಶಿವರಾತ್ರಿಯು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ವರ್ಷಕ್ಕೊಮ್ಮೆ ಮಾತ್ರ ಸಂಭವಿಸುತ್ತದೆ. ಚಳಿಗಾಲ ಕೊನೆಗೊಂಡು ವಸಂತ ಮತ್ತು ಬೇಸಿಗೆ ಪ್ರಾರಂಭವಾದಾಗ ಮಹಾಶಿವರಾತ್ರಿಯನ್ನು ಎಲ್ಲೆಡೆ ಆಚರಿಸಲಾಗುತ್ತದೆ.

ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ , ತೆಲಂಗಾಣ , ಉತ್ತರಾಖಂಡ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹಿಮಾಚಲ ಪ್ರದೇಶ, ಬಿಹಾರ ಸೇರಿದಂತೆ ರಾಷ್ಟ್ರದ ಪ್ರತಿಯೊಂದು ರಾಜ್ಯದಲ್ಲಿಯೂ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಶಿವಲಿಂಗಕ್ಕೆ ಹಾಲು, ಬಿಲ್ವಪತ್ರೆ, ಶ್ರೀಗಂಧ, ತುಪ್ಪ, ಸಕ್ಕರೆ ಮತ್ತು ಇತರ ವಸ್ತುಗಳನ್ನು ಅರ್ಪಿಸುವ ಭಕ್ತರು ರಾಷ್ಟ್ರದಾದ್ಯಂತ ಶಿವ ದೇವಾಲಯಗಳಲ್ಲಿ ಶಿವ ನನ್ನು ಆರಾಧಿಸುತ್ತಾರೆ. ಶಿವನ ಭಕ್ತರು 24 ಗಂಟೆಗಳ ಉಪವಾಸಕ್ಕೆ ಒಳಗಾಗುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಅದನ್ನು ಅಂತ್ಯಗೊಳಿಸುತ್ತಾರೆ. ಮಹಾಶಿವರಾತ್ರಿ ಪೂಜೆ, ಇತರ ಅನೇಕ ಹಬ್ಬಗಳಿಗೆ ವಿರುದ್ಧವಾಗಿ  ರಾತ್ರಿಯಲ್ಲಿ ನಡೆಸಲಾಗುತ್ತದೆ.

ಭಕ್ತರು ಉಪವಾಸ ವ್ರತಾಚರಣೆಯಲ್ಲಿದ್ದಾಗ ಸಾತ್ವಿಕ ಆಹಾರಗಳಾದ ರಾಗಿ, ಹಣ್ಣುಗಳು ಮತ್ತು ಕೆಲವು ತರಕಾರಿಗಳನ್ನು ಸೇವಿಸುತ್ತಾರೆ. ಮಹಾಶಿವರಾತ್ರಿಯ ಸಮಯದಲ್ಲಿ ವ್ರತಾಚರಣೆಯಲ್ಲಿರುವ ಭಕ್ತರು ಮಾಡಬೇಕಾದ ಮತ್ತು ಮಾಡಬಾರದ ಸಂಗತಿಗಳು ಇಲ್ಲಿವೆ ನೋಡಿ. 

ಮಹಾಶಿವರಾತ್ರಿಯಂದು ಉಪವಾಸ ಮಾಡುವ ವಿಧಾನಗಳು: ಉಪವಾಸದ ದಿನ, ಸೂರ್ಯೋದಯದ ಸಮಯದಲ್ಲಿ ಬೇಗನೆ ಎದ್ದೇಳಬೇಕು, ಸ್ನಾನ ಮಾಡಿ ಶುಭ್ರವಾದ, ಮೇಲಾಗಿ ಬಿಳಿ ಬಟ್ಟೆಯನ್ನು ಧರಿಸಬೇಕು. ಉಪವಾಸವನ್ನು ಹೆಚ್ಚು ಫಲಪ್ರದವಾಗಿಸಲು "ಓಂ ನಮಃ ಶಿವಾಯ" ಮಂತ್ರವನ್ನು ಹಲವು ಬಾರಿ ಪಠಿಸಬೇಕು.  ರಾತ್ರಿ ಶಿವರಾತ್ರಿ ಪೂಜೆ ನಡೆಯುವುದರಿಂದ ಭಕ್ತರು ಶಿವಪೂಜೆ ಮಾಡುವ ಮುನ್ನ ಸಂಜೆ ಮತ್ತೆ ಸ್ನಾನ ಮಾಡುತ್ತಾರೆ. ಮರುದಿನ ಸಾಮಾನ್ಯವಾಗಿ ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತಾರೆ. 

ಹಾಲು,ಹೂವುಗಳು, ಬಿಲ್ವಪತ್ರೆ, ಶ್ರೀಗಂಧದ ಪೇಸ್ಟ್, ಮೊಸರು, ಜೇನುತುಪ್ಪ, ತುಪ್ಪ ಮತ್ತು ಸಕ್ಕರೆಯು ಶಿವನಿಗೆ ಅರ್ಪಿಸುವ ನೈವೇದ್ಯಗಳಲ್ಲಿ ಸೇರಿವೆ. ವ್ರತದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಭಕ್ತರು ತಮ್ಮ ಉಪವಾಸವನ್ನು ಮುಂಜಾನೆ ಮತ್ತು ಚತುರ್ದಶಿ ತಿಥಿಯ ಅಂತ್ಯದ ನಡುವೆ ಅಂತ್ಯಗೊಳಿಸುತ್ತಾರೆ. 

ಮಹಾಶಿವರಾತ್ರಿ ಉಪವಾಸದಂದು ಏನನ್ನು ಮಾಡಬಾರದು: ಉಪವಾಸ ಸಂದರ್ಭದಲ್ಲಿ  ಅಕ್ಕಿ, ಗೋಧಿ ಅಥವಾ ಬೇಳೆಕಾಳುಗಳಿಂದ ಮಾಡಿದ ಪದಾರ್ಥವನ್ನು ಸೇವಿಸುವಂತಿಲ್ಲ. ಅಲ್ಲದೇ  ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಾಂಸಾಹಾರಿ ಊಟವನ್ನು ಭಕ್ತರು ತ್ಯಜಿಸುತ್ತಾರೆ.  

ಶಿವಲಿಂಗಕ್ಕೆ ತೆಂಗಿನ ನೀರನ್ನು ಅರ್ಪಿಸುವುದು ಸೂಕ್ತವಲ್ಲ. ಪೂಜೆ, ಉಪವಾಸ ಮತ್ತು ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಜನರು ಅದೃಷ್ಟ ಪಡೆಯುತ್ತಾರೆ ಎಂದು ನಂಬಲಾಗಿದೆ. ಅಹಂಕಾರ ಮತ್ತು ಅಸತ್ಯ ಅವನತಿಗೆ ಕಾರಣವಾಗುತ್ತದೆ ಎಂಬುದನ್ನು ಮಹಾ ಶಿವರಾತ್ರಿ ಉಪವಾಸ ಭಕ್ತರಿಗೆ ನೆನಪಿಸುತ್ತದೆ ಎಂದು ಹಲವರು ಭಾವಿಸುತ್ತಾರೆ.

ಮಹಾ ಶಿವರಾತ್ರಿಯ ಶುಭಾಶಯಗಳು! 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com