Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Australia, England Players

ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ವಿರುದ್ಧ 64 ರನ್ ಗಳ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

We let law take its course and if someone gets bail then they should enjoy, says PM Modi

ಕಾನೂನು ತನ್ನ ಕ್ರಮ ತೆಗೆದುಕೊಳ್ಳಲಿದೆ, ಜಾಮೀನು ಪಡೆದವರು ಖುಷಿಯಾಗಿರಲಿ: ಕಾಂಗ್ರೆಸ್ ಗೆ ಪ್ರಧಾನಿ ಮೋದಿ ಟಾಂಗ್

Release water to TN if rains are normal: Cauvery board to Karnataka

ಮಳೆ ಬಂದರೆ ಮಾತ್ರ ತಮಿಳುನಾಡಿಗೆ ನೀರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ

15th Finance Commission warns Karnataka government over slow development works

ಕೃಷಿ ನೆಲಕಚ್ಚಿದೆ, ತಲಾದಾಯ ಹೆಚ್ಚಿದ್ದರೂ ಬಡತನ ಪ್ರಮಾಣ ತಗ್ಗಿಲ್ಲ: ರಾಜ್ಯಕ್ಕೆ ಹಣಕಾಸು ಆಯೋಗ ತರಾಟೆ

5-year-old mauled to death by dogs in Bengaluru

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5 ವರ್ಷದ ಬಾಲಕ ಬಲಿ

Suspected terrorist from Bangladesh arrested in Doddaballapur near Bengaluru

ದೊಡ್ಡಬಳ್ಳಾಪುರದಲ್ಲಿ ಬಾಂಗ್ಲಾದೇಶ ಮೂಲದ ಶಂಕಿತ ಉಗ್ರನ ಬಂಧನ

Casual photo

ಹತ್ತು ದಿನಗಳಲ್ಲಿ ರಾಷ್ಟ್ರೀಯ ಚಿಲ್ಲರೆ ನೀತಿ ಕರಡು ಬಿಡುಗಡೆ: ಕೇಂದ್ರ ಸರ್ಕಾರ

Haryana BJP ministers

ರೇಪ್- ಕೊಲೆ ಅಪರಾಧಿ ರಾಮ್ ರಹೀಮ್ ಪೆರೋಲ್ ಪರ ಹರ್ಯಾಣ ಬಿಜೆಪಿ ಸಚಿವನ ಹೇಳಿಕೆ!

CM HDKumaraswamy

ಜಿಎಸ್ ಟಿ ನಷ್ಟ ಪರಿಹಾರವನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಬೇಕು- ಎಚ್ ಡಿ ಕುಮಾರಸ್ವಾಮಿ

SalmanKhan

ಪತ್ರಕರ್ತನ ಮೇಲೆ ಸಲ್ಮಾನ್ ಖಾನ್ ಹಲ್ಲೆ ಮಾಡಿದ ಆರೋಪ

India expects US to grant waiver on S-400 deal with Russia

ರಷ್ಯಾ ಜೊತೆಗಿನ ರಕ್ಷಣಾ ಒಪ್ಪಂದಕ್ಕೆ ಯುಎಸ್ ನಿರ್ಬಂಧದ ಕರಿ ನೆರಳು: ವಿನಾಯಿತಿ ವಿಶ್ವಾಸದಲ್ಲಿ ಭಾರತ

Runaway bride found living with lesbian partner in Haryana

ಓಡಿಹೋಗಿದ್ದ ನವವಧು ಸಲಿಂಗಿ ಸಂಗಾತಿಯೊಂದಿಗೆ ಹರಿಯಾಣದಲ್ಲಿ ಪ್ರತ್ಯಕ್ಷ

Prasannananda Swamiji

ರಾಜಿನಾಮೆ ನನ್ನ ಕೈಗೆ ಕೊಡಿ, ಸಿಎಂ ಎಚ್‌ಡಿಕೆ ಅಲ್ಲ, ಅವರಪ್ಪನೂ ನನ್ನ ಮಾತು ಕೇಳ್ತಾರೆ: ಪ್ರಸನ್ನಾನಂದ ಸ್ವಾಮೀಜಿ

ಮುಖಪುಟ >> ಜೀವನಶೈಲಿ

ಕ್ರೂರ, ಹಿಂಸಾತ್ಮಕ ವಿಡಿಯೊ ಗೇಮ್ ಗಳು ಮಕ್ಕಳಿಗೆ ಅಪಾಯಕಾರಿ: ಅಧ್ಯಯನ

Representational image

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಇಂದಿನ ತಂತ್ರಜ್ಞಾನ, ಗ್ಯಾಜೆಟ್ ಯುಗದಲ್ಲಿ ಮಕ್ಕಳು ಬಹುಬೇಗನೆ ವಿಡಿಯೊ ಗೇಮ್ ಗಳಿಗೆ ಮನಸೋಲುತ್ತಾರೆ. ಇಂದು ಮಕ್ಕಳಿಗೆ ಇಷ್ಟವಾಗುವ ಹಲವು ವಿಡಿಯೊ ಗೇಮ್ ಗಳು, ಆಪ್ ಗಳು ಸಿಗುತ್ತವೆ. ಅವುಗಳನ್ನು ಗಂಟೆಗಟ್ಟಲೆ ಆಡುವುದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ.

ಆದರೆ ಕೆಲವು ಹಿಂಸಾತ್ಮಕ, ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಿಡಿಯೊ ಗೇಮ್ ಗಳು ಮಕ್ಕಳನ್ನು ನಿಜ ಜೀವನದಲ್ಲಿ ಸಂಕಷ್ಟಕ್ಕೆ ದೂಡಿದ, ಪ್ರಾಣವನ್ನು ಸಹ ಕಳೆದುಕೊಂಡ ಗೇಮ್ ಗಳ ಉದಾಹರಣೆಗಳಿವೆ.

ಜಾಮಾ ನೆಟ್ ವರ್ಕ್ ಓಪನ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಮಕ್ಕಳು ವಿಡಿಯೊ ಗೇಮ್ ನ ದಾಸರಾಗುವುದರಿಂದ ಅವರ ವರ್ತನೆ ಮತ್ತು ಮನಸ್ಸಿನ ಮೇಲೆ ಯಾವ ರೀತಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.

8ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಸಂಶೋಧಕರು ಅಧ್ಯಯನ ನಡೆಸಿ ಮೈನ್ ಗ್ರಾಫ್ಟ್ ಗೇಮ್ ನ ಮೂರು ವಿವಿಧ ಆವೃತ್ತಿಗಳನ್ನು ಆಡುವಂತೆ ಸೂಚಿಸಿದರು. ಈ ವಿಡಿಯೊ ಗೇಮ್ ನ ಮೊದಲ ಆವೃತ್ತಿ ಕ್ರೂರವಾಗಿತ್ತು. ಅಲ್ಲಿ ಮಕ್ಕಳು ಆಡುವಾಗ ಗನ್ ಗಳಿಂದ ಮಾನ್ಸ್ಟರ್(ರಾಕ್ಷಸರು) ಗಳನ್ನು ಕೊಲ್ಲುವುದಾಗಿತ್ತು. ಎರಡನೇ ಆವೃತ್ತಿಯಲ್ಲಿ ಮಾನ್ಸ್ಟರ್ ಗಳನ್ನು ಗದೆಯಲ್ಲಿ ಕೊಲ್ಲುವುದು ಮತ್ತು ಮೂರನೇ ಆಟದ ವಿಧಾನ ಕ್ರೂರವಾಗಿರದೆ ಯಾವುದೇ ಆಯುಧಗಳಿಲ್ಲದೆ ಸೌಮ್ಯವಾಗಿ ಆಡುವುದಾಗಿತ್ತು.

ಮಕ್ಕಳು 20 ನಿಮಿಷ ಆಟವಾಡಿದ ನಂತರ ಇನ್ನೊಂದು ಕೋಣೆಯಲ್ಲಿ ಬೇರೆ ಆಟದ ಸಾಮಾನುಗಳಲ್ಲಿ ಆಟವಾಡಿದ ಮಕ್ಕಳ ಜೊತೆಗೆ ಹೋಲಿಕೆ ಮಾಡಲಾಯಿತು. ಗನ್ ಗಳನ್ನು ಬಳಸಿ ವಿಡಿಯೊ ಗೇಮ್ ಆಟವಾಡಿದ 76 ಮಕ್ಕಳಲ್ಲಿ ಸುಮಾರು ಶೇಕಡಾ 62ರಷ್ಟು ಮಕ್ಕಳು ಆಟದ ಬಳಿಕ ಸಂಶೋಧಕರು ಪರೀಕ್ಷಿಸಲೆಂದು ಇಟ್ಟಿದ್ದ ಹ್ಯಾಂಡ್ ಗನ್ ಗಳನ್ನು ಮುಟ್ಟಿದ್ದರು. ಗದೆಯಲ್ಲಿ ವಿಡಿಯೊ ಗೇಮ್ ಆಟವಾಡಿದ ಸುಮಾರು ಶೇಕಡಾ 57ರಷ್ಟು ಮಕ್ಕಳು ಸಹ ಗನ್ ಗಳನ್ನು ಮುಟ್ಟಿದ್ದರು. ಯಾವುದೇ ಗನ್, ಗದೆ ಇಲ್ಲದೆ ಅಕ್ರೂರವಾಗಿ ವಿಡಿಯೊ ಗೇಮ್ ಆಡಿದ ಸುಮಾರು ಶೇಕಡಾ 44ರಷ್ಟು ಮಕ್ಕಳು ಗನ್ ಗಳನ್ನು ಮುಟ್ಟಿದ್ದರು. ಅಂದರೆ ಗನ್, ಗದೆ ಮುಟ್ಟಿದ ಮಕ್ಕಳ ಸಂಖ್ಯೆ ಕಡಿಮೆಯಾಗಿತ್ತು.

ಅಮೆರಿಕಾದ ಒಹಿಯೊ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಸುಮಾರು 220 ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಿತ್ತು.

ಮಕ್ಕಳ ಲಿಂಗ, ವಯಸ್ಸು, ವಿಶಿಷ್ಟವಾದ ಆಕ್ರಮಣಶೀಲತೆ, ಬಂದೂಕುಗಳ ಕಡೆಗೆ ಮಕ್ಕಳ ವರ್ತನೆಗಳು, ಮಕ್ಕಳ ಮನೆಯಲ್ಲಿ ಬಂದೂಕುಗಳಿರುವ ಬಗ್ಗೆ, ಬಂದೂಕುಗಳ ಮೇಲಿನ ಆಸಕ್ತಿ ಮತ್ತು ಮಗು ಬಂದೂಕು ಬಳಸುವಾಗ ತೆಗೆದುಕೊಳ್ಳುತ್ತಿದ್ದ ಕಾಳಜಿಗಳೆಲ್ಲವೂ ವಿಡಿಯೊ ಗೇಮ್ ಆಡಿಸಿದಾಗ ಅಧ್ಯಯನಕಾರರಿಗೆ ಕಂಡುಬಂದವು.

ಸಂಶೋಧಕರು ಇದನ್ನು ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಅಧ್ಯಯನಕ್ಕೆ ಸೀಮಿತಗೊಳಿಸಿದರೂ ಕೂಡ ಮತ್ತು ಮೈನ್ ಕ್ರಾಫ್ಟ್ ಅಷ್ಟೊಂದು ಕ್ರೂರ ವಿಡಿಯೊ ಗೇಮ್ ಅಲ್ಲದಿದ್ದರೂ ಸಹ ಗನ್, ಬಂದೂಕು ಹೊಂದಿರುವವರು ಅದನ್ನು ಮಕ್ಕಳಿಗೆ ಎಟುಕದಂತೆ, ಅವರಿಗೆ ಸುಲಭವಾಗಿ ಸಿಗದಂತೆ ದೂರವಿಡಲು ಮತ್ತು ಕ್ರೂರ, ಹಿಂಸಾತ್ಮಕ ವಿಡಿಯೊ ಗೇಮ್ ಗಳಿಗೆ ಮಕ್ಕಳು ಹೆಚ್ಚೆಚ್ಚು ತೆರೆದುಕೊಳ್ಳದಂತೆ ನೋಡಿಕೊಳ್ಳಬೇಕೆಂದು ಅಧ್ಯಯನದ ಬಳಿಕ ಸಲಹೆ ನೀಡಿದರು.

Posted by: SUD | Source: IANS

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Video game, Children, Violent game, ಕ್ರೂರ ವಿಡಿಯೊ ಗೇಮ್, ಮಕ್ಕಳು, ಹಿಂಸಾತ್ಮಕ ಆಟಗಳು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS