ಕರ್ನಾಟಕ ನಗರಸಭೆ ಚುನಾವಣೆ ಫಲಿತಾಂಶ LIVE: ಹಾವೇರಿಯಲ್ಲೇ ಸಿಎಂಗೆ ಹಿನ್ನಡೆ, ಎಂಕೆ ಹುಬ್ಬಳ್ಳಿಯಲ್ಲಿ ಎಲ್ಲ 14 ವಾರ್ಡ್ಗಳಲ್ಲೂ ಪಕ್ಷೇತರರ ಗೆಲುವು

ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಸ್ವಕ್ಷೇತ್ರ ಹಾವೇರಿಯಲ್ಲೇ ಸಿಎಂ ಬೊಮ್ಮಾಯಿಗೆ ಹಿನ್ನಡೆಯಾಗಿದ್ದು,  ಇತ್ತ ಎಂಕೆ ಹುಬ್ಬಳ್ಳಿಯಲ್ಲಿ ಎಲ್ಲ 14 ವಾರ್ಡ್ ಗಳಲ್ಲೂ ಪಕ್ಷೇತರರ ಗೆಲುವು ಸಾಧಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಚಾಟಿ ಏಟು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಸ್ವಕ್ಷೇತ್ರ ಹಾವೇರಿಯಲ್ಲೇ ಸಿಎಂ ಬೊಮ್ಮಾಯಿಗೆ ಹಿನ್ನಡೆಯಾಗಿದ್ದು,  ಇತ್ತ ಬೆಳಗಾವಿಯ ಎಂಕೆ ಹುಬ್ಬಳ್ಳಿಯಲ್ಲಿ ಎಲ್ಲ 14 ವಾರ್ಡ್ ಗಳಲ್ಲೂ ಪಕ್ಷೇತರರ ಗೆಲುವು ಸಾಧಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಚಾಟಿ ಏಟು ನೀಡಿದ್ದಾರೆ.

ಡಿಸೆಂಬರ್ 27ರಂದು ಐದು ನಗರಸಭೆಗಳಿಗೆ ಚುನಾವಣೆ ನಡೆದಿದ್ದು, ಇಂದೇ ಫಲಿತಾಂಶ ಹೊರಬೀಳಲಿದೆ. ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ-ಬೆಟಗೇರಿ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ಹಾಗೂ ವಿಜಯನರ ಜಿಲ್ಲೆಯ ಹೊಸಪೇಟೆ ನಗರಸಭೆಯ ಫಲಿತಾಂಶ ಪ್ರಕಟಗೊಳ್ಳಲಿದೆ.

ಮತ್ತೊಂದ್ಕಡೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಭವಿಷ್ಯಕ್ಕೂ ಕೌಂಟ್ಡೌನ್ ಶುರುವಾಗಿದೆ. ಒಟ್ಟು 1185 ವಾರ್ಡ್‌ಗಳಲ್ಲಿ ಒಟ್ಟು 4ಸಾವಿರದ 961 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕೆಲವೇ ಹೊತ್ತಿನಲ್ಲಿ ಹಣೆಬರಹ ನಿರ್ಧಾರವಾಗಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗಿದ್ದು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com