ಹಿನ್ನೋಟ 2022: ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದ ಬೆಂಗಳೂರಿಗರು

2022ಕ್ಕೆ ಅಂತ್ಯ ಹಾಡಿ, ನೂತನ ವರ್ಷ 2023ಕ್ಕೆ ಆಹ್ವಾನ ನೀಡುವ ಗಳಿಗೆ ಸನಿಹವಾಗಿದ್ದು, ಕಳೆದೊಂದು ವರ್ಷದಲ್ಲಿ ಸುದ್ದಿಗಳಿಂದ ಹಿಡಿದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳವರೆಗೆ, ತಮ್ಮ ಕಠಿಣ ಪರಿಶ್ರಮದ ಮೂಲಕ ಜಾಗತಿಕ ವೇದಿಕೆಗಳ ಮೇಲೆ ಪ್ರಭಾವ ಬೀರಿದ ಬೆಂಗಳೂರಿಗರ ಮಾಹಿತಿ ಇಲ್ಲಿದೆ.
ಹಿನ್ನೋಟ 2022: ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದ ಬೆಂಗಳೂರಿಗರು

ಬೆಂಗಳೂರು: 2022ಕ್ಕೆ ಅಂತ್ಯ ಹಾಡಿ, ನೂತನ ವರ್ಷ 2023ಕ್ಕೆ ಆಹ್ವಾನ ನೀಡುವ ಗಳಿಗೆ ಸನಿಹವಾಗಿದ್ದು, ಕಳೆದೊಂದು ವರ್ಷದಲ್ಲಿ ಸುದ್ದಿಗಳಿಂದ ಹಿಡಿದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳವರೆಗೆ, ತಮ್ಮ ಕಠಿಣ ಪರಿಶ್ರಮದ ಮೂಲಕ ಜಾಗತಿಕ ವೇದಿಕೆಗಳ ಮೇಲೆ ಪ್ರಭಾವ ಬೀರಿದ ಬೆಂಗಳೂರಿಗರ ಮಾಹಿತಿ ಇಲ್ಲಿದೆ.

ದೀಪಿಕಾ ಪಡುಕೋಣೆ
ಖ್ಯಾತ ಬಾಲಿವುಡ್ ನಟಿ ಹಾಗೂ ಬೆಂಗಳೂರು ಮೂಲದ ಡಿಂಪಲ್ ಬ್ಯೂಟಿ ದೀಪಿಕಾ ಪಡುಕೋಣೆ ಕಳೆದ ವರ್ಷ ಸಾಕಷ್ಟು ವಿಚಾರಗಳಿಗೆ ಸುದ್ದಿಯಲ್ಲಿದ್ದರು. ದೀಪಿಕಾ ಪಡುಕೋಣೆ ಈ ವರ್ಷ ಭಾರತದ ಪಟ್ಟಿಗೆ ಹಲವು ಪ್ರಥಮಗಳನ್ನು ಸೇರಿಸಿದ್ದಾರೆ. ಇಟಾಲಿಯನ್ ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್‌ಗೆ ಮೊದಲ ಭಾರತೀಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು ಪ್ರಮುಖವಾಗಿದ್ದು, ಇದಲ್ಲದೆ ಕತಾರ್‌ನಲ್ಲಿ ನಡೆದ FIFA ವರ್ಲ್ಡ್ ಕಪ್ 2022 ಅನ್ನು ಡಿಪ್ಸ್ ಅನಾವರಣಗೊಳಿಸಿದರು, ಅಂತೆಯೇ ತಮ್ಮದೇ ಆದ ತ್ವಚೆಯ ಬ್ರಾಂಡ್ ಅನ್ನು ಪ್ರಾರಂಭಿಸಿದರು. ಅಂತೆಯೇ ಕೇನ್ಸ್ ಚಲನಚಿತ್ರೋತ್ಸವ 2022 ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ನಡೆದಿದ್ದು ಮಾತ್ರವಲ್ಲದೇ ಅವರು ತೀರ್ಪುಗಾರರ ಸದಸ್ಯರಾಗಿದ್ದರು.

ರಿಕ್ಕಿ ಕೇಜ್ ಗೆ 2ನೇ ಗ್ರಾಮಿ ಪ್ರಶಸ್ತಿ
ಡಿವೈನ್ ಟೈಡ್ಸ್‌ಗಾಗಿ ಖ್ಯಾತ ಸಂಗೀತ ನಿರ್ದೇಶಕ ರಿಕಿ ಕೇಜ್ ಅವರು ತಮ್ಮ ಎರಡನೇ ಗ್ರ್ಯಾಮಿ ಪ್ರಶಸ್ತಿಗೆ ಪಾತ್ರರಾದರು. ರಾಕ್ ಲೆಜೆಂಡ್ ಸ್ಟೀವರ್ಟ್ ಕೋಪ್‌ಲ್ಯಾಂಡ್ ಜೊತೆಗೆ ಅತ್ಯುತ್ತಮ ಹೊಸ ಯುಗದ ಆಲ್ಬಂ ವಿಭಾಗದಲ್ಲಿ ರಿಕಿ ಕೇಜ್ ಈ ಪ್ರಶಸ್ತಿ ಗೆದ್ದರು. ಈ ಅಸ್ಕರ್ ಸಂಗೀತ ಪ್ರಶಸ್ತಿ ಸಮಾರಂಭದಲ್ಲಿ ಈಗಾಗಲೇ ರಿಕ್ಕಿ ಕೇಜ್ ಪರಿಚಿತ ಮುಖವಾಗಿದ್ದು, ಈ ಹಿಂದೆ ಕೂಡ ರಿಕ್ಕಿ ಕೇಜ್ ಗ್ರಾಮಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಿಕ್ಕಿ ಕೇಜ್ ಗೌರವಾರ್ಥವಾಗಿ ಕೋಪ್ಲ್ಯಾಂಡ್ ರ ಪಾದ ಸ್ಪರ್ಶಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಮುಂಚೂಣಿಗೆ ತಂದು ನೆರೆದಿದ್ದವರ ಹೃದಯ ಮುಟ್ಟಿದರು. 

ಫ್ರಾನ್ಸ್ ನಲ್ಲಿ ಸದ್ದು ಮಾಡಿದ ಬೆಂಗಳೂರು ಮೂಲದ ಶೆಫ್ ಮನು ಚಂದ್ರ
ಫ್ರೆಂಚ್ ರಿವೇರಿಯಾದಲ್ಲಿ ಬೆಂಗಳೂರಿಗರು ಹೆಜ್ಜೆ ಹಾಕುವುದರೊಂದಿಗೆ ಈ ವರ್ಷ ಕ್ಯಾನೆಸ್ ಚಲನಚಿತ್ರೋತ್ಸವವು ಹೆಚ್ಚು ಸುದ್ದಿಯಾಯಿತು. ಭಾರತವು ಕೇನ್ಸ್‌ನಲ್ಲಿ ಕೇಂದ್ರೀಕೃತ ರಾಷ್ಟ್ರವಾಗಿದ್ದರೂ, ನಗರ ಮೂಲದ ಬಾಣಸಿಗ ಮನು ಚಂದ್ರ ಅವರು ಜಗತ್ತು ಭಾರತೀಯ ರುಚಿಗಳ ಪರಿಚಯ ಮಾಡಿಕೊಳ್ಳಲು ನೆರವಾದರು. ಖಿಚಡಿಯಿಂದ ಪಣಿಯಾರಂಗೆ (ಪಡ್ಡು), ಪೋಡಿ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ, ಚಂದ್ರ ಅವರ ಎಲ್ಲ ಖಾದ್ಯಗಳು ಚಿತ್ರೋತ್ಸವದ ಗಣ್ಯರಿಗೆ ಅಚ್ಚುಮೆಚ್ಚಾದವು. ಇನ್ನು ಈ ಸಮಾರಂಭದಲ್ಲಿ, ಕನ್ನಡದ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ಕೆಲವು ಮಧುರ ಗೀತೆಗಳನ್ನು ತಮ್ಮ ಸಿಗ್ನೇಚರ್ ಶೈಲಿ ಜಾನಪದ ಧ್ವನಿಯನ್ನು ಅಂತರಾಷ್ಟ್ರೀಯ ವೇದಿಕೆಗೆ ಪರಿಚಯಿಸಿದರು. ಸ್ಯಾಂಡಲ್‌ವುಡ್ ನಟರು ಉತ್ಸವದಲ್ಲಿ ಉಪಸ್ಥಿತರಿದ್ದರು ಮತ್ತು ನಿರ್ದೇಶಕಿ ಶ್ರುತಿ ರಾಜು ಅವರು ತಮ್ಮ ಚಿತ್ರ ವಾಟ್ಸ್ ಅಪ್ ವಿತ್ ಇಂಡಿಯನ್ ಮೆನ್? ಚಿತ್ರದ ಪ್ರದರ್ಶನದಲ್ಲಿ ಪಾಲ್ಗೊಂಡರು.

ಹೆಣ್ಣುಮಗುವಿಗೆ ಜನ್ಮ ನೀಡಿದ ನಟಿ ಪ್ರಣಿತಾಗೂ ಬಿಡದ ವಿವಾದ
ಇನ್ನು ಈ ವರ್ಷ ದಕ್ಷಿಣದ ಖ್ಯಾತ ನಟಿ ಪ್ರಣಿತಾ ಸುಭಾಷ್ ಎರಡು ವಿಚಾರಕ್ಕೆ ವ್ಯಾಪಕ ಸುದ್ದಿಗೆ ಗ್ರಾಸವಾದರು. ತಮ್ಮ ಅಭಿಮಾನಿಗಳಿಗೆ ಮದುವೆ ಶಾಕ್ ನೀಡಿದ್ದ ಪ್ರಣಿತಾ ಇದೇ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿ ಸಿಹಿ ಸುದ್ದಿ ಕೊಟ್ಟರು. ಆ ಮಗುವಿಗೆ ಅರ್ನಾ ಎಂಬ ಸುಂದರವಾದ ಹೆಸರಿಟ್ಟು ಮತ್ತೆ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ನಟಿ ಪ್ರಣಿತಾ ಮತ್ತೊಂದು ವಿಚಾರವಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಭೀಮನ ಅಮಾವಸ್ಯೆಯ ದಿನದಂದು ತಮ್ಮ ಪತಿಯ ಪಾದಪೂಜೆ ಮಾಡಿದ್ದ ಪ್ರಣಿತಾ ಅವರ ಫೋಟೋ ವ್ಯಾಪಕ ಟ್ರೋಲ್ ಗೆ ತುತ್ತಾಗಿತ್ತು. ಭೀಮನ ಅಮಾವಾಸ್ಯೆಯ ಆಚರಣೆಯನ್ನು ಮಾಡುವಾಗ ಅವಳು ತನ್ನ ಪತಿಯ ಪಾದ ಬಳಿ ಕುಳಿತಿರುವ ಚಿತ್ರಕ್ಕಾಗಿ ವ್ಯಾಪಕ ಟ್ರೋಲ್ ಗೆ ತುತ್ತಾಗಿದ್ದರು. ಇವುಗಳ ಬೆನ್ನಲ್ಲೇ ಪ್ರಣಿತಾ ಅವರು  ಹಂಗಾಮಾ 2 ಮತ್ತು ಭುಜ್: ದಿ ಪ್ರೈಡ್ ಆಫ್ ಇಂಡಿಯಾದಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.


 
ದೇಶಾದ್ಯಂತ ಸದ್ದು ಮಾಡಿದ ಕಾಂತಾರ
ಈ ವರ್ಷ ಸ್ಯಾಂಡಲ್ ವುಡ್ ನ ಸಾಕಷ್ಟು ಚಿತ್ರಗಳು ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾದವು. ಕೆಜಿಎಫ್ ನಿಂದ ಆರಂಭವಾದ ಈ ಟ್ರೆಂಡ್ ಕಾಂತಾರವರೆಗೂ ಮುಂದುವರೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರವು ಸ್ಯಾಂಡಲ್‌ವುಡ್ ಅನ್ನು ಜಾಗತಿಕ ಭೂಪಟದಲ್ಲಿ ಮತ್ತೆ ಸದ್ದು ಮಾಡುವಂತೆ ಮಾಡಿತು. ಕರಾವಳಿ ಕರ್ನಾಟಕದ ಭೂತ ಕೋಲದ ಆಚರಣೆಗಳನ್ನು ಆಧರಿಸಿದ ಚಲನಚಿತ್ರವು ಹೆಚ್ಚು ದೊಡ್ಡ-ಬಜೆಟ್ ಗಳ ಚಿತ್ರಗಳನ್ನೂ ಹಿಂದಿಕ್ಕಿ ಪ್ರೇಕ್ಷಕರ ಮನ್ನಣೆ ಪಡೆದಿತ್ತು.

ಎಂಗೇಜ್ ಆದ ಅಭಿಷೇಕ್ ಅಂಬರೀಷ್
ನಾಲ್ಕು ವರ್ಷಗಳ ನಿಶ್ಯಬ್ದ ಪ್ರಣಯದ ನಂತರ, ಫ್ಯಾಶನ್ ಗುರು ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಫ್ಯಾಷನ್ ಡಿಸೈನರ್ ಅವಿವಾ ಬಿದ್ದಪ್ಪ ಮತ್ತು ದಿವಂಗತ ರೆಬೆಲ್ ನಟ ಅಂಬರೀಶ್ ಮತ್ತು ಸಂಸದೆ ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಅವರು ಆತ್ಮೀಯ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. 2023 ರ ಮೊದಲಾರ್ಧದಲ್ಲಿ ಈ ಜೋಡಿ ಹಸೆಮಣೆ ಏರಿದೆ ಎನ್ನಲಾಗಿದೆ.

ಕ್ರಿಕೆಟ್ ಖುಷಿ
ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರು ಈ ಡಿಸೆಂಬರ್‌ನಲ್ಲಿ ಗಂಡು ಮಗುವಿಗೆ ತಂದೆಯಾದರು. ಮಗುವಿಗೆ ಆಯನ್ಶ್‌ ಎಂದು ನಾಮಕರಣ ಮಾಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನು ಇತ್ತೀಚೆಗೆ ನಡೆದ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಆಯ್ಕೆ ಮಾಡಿದೆ.

ಬೆಂಗಳೂರಿನ ರುಚಿ ಸವಿದ ಸ್ಟಾರ್ ಬಕ್ಸ್ ಮುಖ್ಯಸ್ಥ
ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ (Starbucks co founder) ಜೆವ್ ಸೀಗಲ್ ಬೆಂಗಳೂರಿನ ಪ್ರಸಿದ್ಧ ವಿದ್ಯಾರ್ಥಿ ಭವನ ಹೊಟೇಲ್ ಗೆ (Vidyarthi Bhavan) ಹೋಗಿ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸವಿದರು.  ವಿಶ್ವದ ಅತಿದೊಡ್ಡ ಕಾಫಿ ಸರಪಳಿ ಸಂಸ್ಥೆಯಾದ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರು ನಿನ್ನೆ ವಿದ್ಯಾರ್ಥಿ ಭವನ ಉಪಾಹಾರ ಗೃಹಕ್ಕೆ ಭೇಟಿ ನೀಡಿದ್ದು ಜಾಗತಿಕ ಹೂಡಿಕೆದಾರರ ಸಮಾವೇಶದ ಒಂದು ಪ್ರಮುಖ ಸನ್ನಿವೇಶವಾಗಿತ್ತು. ಸಾಂಪ್ರದಾಯಿಕ ದೋಸೆಗೆ ಹೆಸರುವಾಸಿಯಾದ ಈ ತಿನಿಸು ಯಾವಾಗಲೂ ನಗರಕ್ಕೆ ಭೇಟಿ ನೀಡಿದ ಅನೇಕ ಗಣ್ಯರಿಗೆ ಪಿಟ್ ಸ್ಟಾಪ್‌ಗಳಲ್ಲಿ ಒಂದಾಗಿದೆ ಎಂದು ಜೆವ್ ಸೀಗಲ್ ಹೇಳಿದ್ದರು. ಬೆಂಗಳೂರಿನ ಸಂಪರ್ಕವನ್ನು ಹೊಂದಿರುವ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡುತ್ತಿರುವ ಚಿತ್ರವನ್ನು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com