ಹಿನ್ನೋಟ 2022: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳು!
ಹಳೆಯ ವರ್ಷ ಕಳೆದು ಹೊಸ ವರ್ಷ ಕಾಲಿಟ್ಟಿದೆ. ಈ ಒಂದು ವರ್ಷದ ಅವಧಿಯಲ್ಲಿ ಬಹುತೇಕ ಜನರ ಬಾಳಿನಲ್ಲಿ ಹಲವು ಏರಿಳಿತಗಳಾಗಿವೆ. ಇದರ ನಡುವೆಯೇ ಕೆಲವು ಕಲಾವಿದರು ಸರಳವಾಗಿ ಹಸಮೆಣೆ ಏರಿದ್ದಾರೆ.
Published: 28th December 2022 02:00 PM | Last Updated: 29th December 2022 01:24 PM | A+A A-

ಸಂಗ್ರಹ ಚಿತ್ರ
ಅದಿತಿ ಪ್ರಭುದೇವ
ಕಳೆದ ನವೆಂಬರ್‌ನಲ್ಲಿ ನಟಿ ಅದಿತಿ ಪ್ರಭುದೇವ ಅವರು ಚಿಕ್ಕಮಗಳೂರು ಮೂಲದ ಯಶಸ್ ಪಟ್ಲಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಶುಭಾ ಪೂಂಜಾ
ಮಂಗಳೂರು ಮೂಲದ ಹುಡುಗ ಸುಮಂತ್ ಮಹಾಬಲ ಅವರನ್ನು ಶುಭಾ ಪೂಂಜಾ ಮದುವೆಯಾಗಿದ್ದಾರೆ. ಕಳೆದ ಜನವರಿ 5ರಂದು ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಶುಭಾ ಪೂಂಜಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸುಷ್ಮಿತಾ ಗೌಡ
2022ರ ಫೆಬ್ರವರಿಯಲ್ಲಿ ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಅಭಿನಯಿಸಿದ್ದ ಸುಷ್ಮಿತಾ ಗೌಡ ಅವರು ಅಶ್ವಿನ್ ಗೌಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ರಶ್ಮಿ ಪ್ರಭಾಕರ್
ಬೆಂಗಳೂರಿನಲ್ಲಿ ಏಪ್ರಿಲ್ 25 ರಂದು ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ ಅವರ ವಿವಾಹ ಮಹೋತ್ಸವ ನಡೆಯಿತು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ನಿಖಿಲ್ ಅವರನ್ನು ರಶ್ಮಿ ಪ್ರೀತಿಸಿ ಮದುವೆಯಾದರು.
ನಿಕ್ಕಿ ಗಲ್ರಾನಿ
'ಅಜಿತ್', 'ಜಂಬೂ ಸವಾರಿ' ಮುಂತಾದ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಿಕ್ಕಿ ಗಲ್ರಾನಿ ಅವರ ವಿವಾಹವು ನಟ ಆದಿ ಪಿನಿಸೆಟ್ಟಿ ಜೊತೆ ಮೇ 19ರಂದು ಅದ್ದೂರಿಯಾಗಿ ನಡೆಯಿತು.
ಶಶಿ ಹೆಗಡೆ
ಕಳೆದ ಮೇ ತಿಂಗಳಿನಲ್ಲಿ ಕಿರುತೆರೆ ನಟ ಶಶಿ ಹೆಗಡೆ (ಶಶಿಧರ್ ಹೆಗಡೆ) ಅವರ ಜೊತೆ ‘ದಾಸಪುರಂದರ’ ಸೀರಿಯಲ್ ನಟಿ ಲಾವಣ್ಯಾ ಅವರ ವಿವಾಹ ನೆರವೇರಿತು.
ಕಾವ್ಯಾ ಶಾ
ಕಳೆದ ಜೂನ್ ತಿಂಗಳಲ್ಲಿ ಬಹುಕಾಲದ ಗೆಳೆಯ ವರುಣ್ ಕುಮಾರ್ ಗೌಡ ಅವರನ್ನು ನಟಿ ಕಾವ್ಯಾ ಶಾ ಅವರು ವಿವಾಹವಾದರು.
ಮನೋರಂಜನ್
ಕಳೆದ ಆಗಸ್ಟ್ ತಿಂಗಳಲ್ಲಿ ಮನೋರಂಜನ್ ರವಿಚಂದ್ರನ್, ಸಂಗೀತಾ ದೀಪಕ್ ಅವರ ಮದುವೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿರುವ ವೈಟ್ ಪೆಟಲ್ಸ್‌ನಲ್ಲಿ (ತ್ರಿಪುರ ವಾಸಿನಿ) ನಡೆಯಿತು.
ಬಿಗ್ ಬಾಸ್ ಶಶಿ
ಕಳೆದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ ‘ಬಿಗ್ ಬಾಸ್ ಕನ್ನಡ 6’ ವಿನ್ನರ್, ಸ್ಯಾಂಡಲ್‌ವುಡ್ ನಟ ಶಶಿ ಕುಮಾರ್ ಅವರು ಸ್ವಾತಿ ಎನ್ನುವವರ ಜೊತೆ ಮದುವೆಯಾಗಿದರು.
ಗೇಬ್ರಿಯೆಲಾ
'ಕಮಲಿ' ಧಾರಾವಾಹಿ ಖ್ಯಾತಿಯ ಗೇಬ್ರಿಯೆಲಾ, ಸುಹಾಸ್ ಜೋಡಿ ಕಳೆದ ಅಕ್ಟೋಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ತೇಜಸ್ವಿನಿ ಪ್ರಕಾಶ್
ಮಾರ್ಚ್ 20ರಂದು ಗೆಳೆಯ ಫಲಿವರ್ಮಾ ನದೀಮ್‌ಪಳ್ಳಿ ಜೊತೆ ನಟಿ ತೇಜಸ್ವಿನಿ ಪ್ರಕಾಶ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.