ಹಿನ್ನೋಟ 2022: ನಮ್ಮನ್ನಗಲಿದ ಗಣ್ಯರು, ಪ್ರಮುಖರು
2022ರಲ್ಲಿ ಹಲವು ಗಣ್ಯರು ನಿಧನರಾಗಿದ್ದಾರೆ. ಅದರಲ್ಲೂ ಚಿತ್ರರಂಗದಲ್ಲಿ ಹಿರಿಯ ಕಲಾವಿದರು ಬಣ್ಣದ ಲೋಕದಿಂದ ಮರೆಯಾಗಿದ್ದಾರೆ. ಈ ವರ್ಷ ಕಳೆದುಕೊಂಡ ಕಲಾವಿದರು, ರಾಜಕೀಯ ನಾಯಕರು ಹಾಗೂ ಇತರೆ ಗಣ್ಯರ ಕುರಿತ ಮಾಹಿತಿ ಇಲ್ಲಿದೆ...
Published: 29th December 2022 01:15 PM | Last Updated: 29th December 2022 01:23 PM | A+A A-

ಸಂಗ್ರಹ ಚಿತ್ರ
ಲತಾ ಮಂಗೇಶ್ಕರ್
ಅನಾರೋಗ್ಯದಿಂದ ಬಳಲುತ್ತಿದ್ದ ಭಾರತದ ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ (92) ಫೆಬ್ರವರಿ 6ರಂದು ಇಹಲೋಕ ತ್ಯಜಿಸಿದ್ದರು.
ಮೋಹನ್ ಜುನೇಜ
ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಮೋಹನ್ ಜುನೇಜ ಅವರು ಮೇ 7 ರಂದು ನಿಧನರಾಗಿದ್ದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದರು.
ಕೃಷ್ಣಕುಮಾರ್ ಕುನ್ನತ್
ಕೆಕೆ ಎಂದೇ ಜನಪ್ರಿಯರಾಗಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (55) ಮೇ 31 ರಂದು ಸಾವನ್ನಪ್ಪಿದ್ದರು.
ವೈಶಾಲಿ ಟಕ್ಕರ್
ಹಿಂದಿಯ "ಯೇ ರಿಶ್ತಾ ಕ್ಯಾ ಕೆಹ್ಲಾತಾ" ಮತ್ತು "ಸಸುರಲ್ ಸಿಮಾರ್ ಕಾ"ದಲ್ಲಿ ಕೆಲಸ ಮಾಡಿದ್ದ ಕಿರುತೆರೆ ನಟಿ 30 ವರ್ಷ ವಯಸ್ಸಿನ ವೈಶಾಲಿ ಟಕ್ಕರ್ ಅಕ್ಟೋಬರ್ನಲ್ಲಿ ಇಂದೋರ್‌ನ ತಮ್ಮ ಮನೆಯಲ್ಲಿ ನೇಣುಗೆ ಶರಣಾಗಿದ್ದರು.
ಸಿಧು ಮೂಸೆವಾಲಾ
ಮೇ 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯ ಜವಾಹರ್ಕೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ನಾಯಕನೂ ಆಗಿರುವ ಪಂಜಾಬ್ ಗಾಯಕ ಸಿಧು ಮೂಸೆ ವಾಲಾ ಅವರನ್ನು ಹತ್ಯೆಗೈಯ್ಯಲಾಗಿತ್ತು.
ಬಪ್ಪಿ ಲಹಿರಿ
980 ಮತ್ತು 90ರ ದಶಕಗಳಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತ ಜನಪ್ರಿಯಗೊಳಿಸಿದ್ದ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ಮುಂಬೈನ ಆಸ್ಪತ್ರೆಯಲ್ಲಿ ಫೆಬ್ರವರಿ 16 ರಂದು ನಿಧನರಾದರು.
ಶಿವಮೊಗ್ಗ ಸುಬ್ಬಣ್ಣ
ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರು ಹೃದಯಾಘಾತದಿಂದ ನಿಧನರಾಗಿದ್ದರು.
ಕೃಷ್ಣ
ತೆಲುಗು ಸೂಪರ್ ಸ್ಟಾರ್, ಮಹೇಶ್ ಬಾಬು ತಂದೆ ಕೃಷ್ಣ ನವೆಂಬರ್ 15 ರಂದು ಸಾವನ್ನಪ್ಪಿದ್ದರು.
ಮಂಡ್ಯ ರವಿ
ಬಹು ಅಂಗಾಗ್ಯ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ ನಟ ರವಿ ಪ್ರಸಾದ್. ಎಂ ಸೆಪ್ಟೆಂಬರ್ 14ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ರಾಜೇಶ್
ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ಹಿರಿಯ ನಟ ರಾಜೇಶ್ (87) ಫೆಬ್ರವರಿ 19 ರಂದು ಕೊನೆಯುಸಿರೆಳೆದಿದ್ದರು.
ಲೋಹಿತಾಶ್ವ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್ ಹಿರಿಯ ನಟ ಟಿ.ಎಸ್. ಲೋಹಿತಾಶ್ವ ನವೆಂಬರ್ 9 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ರಾಜು ಶ್ರೀವಾತ್ಸವ್
ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡ್ ಅಪ್ ಕಾಮಿಡಿಯನ್, ಬಾಲಿವುಡ್ ಹಾಸ್ಯ ನಟ ರಾಜು ಶ್ರೀವಾತ್ಸವ (58) ಸೆಪ್ಟೆಂಬರ್ 21 ರಂದು ಕೊನೆಯುಸಿರೆಳೆದಿದ್ದರು.
ಭಾರ್ಗವಿ ನಾರಾಯಣ್
ರಂಗಭೂಮಿ ಹಾಗು ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಹಿರಿಯ ಪೊಷಕ ನಟಿ ಭಾರ್ಗವಿ ನಾರಾಯಣ್ (84) ಫೆಭ್ರವರಿ 14 ರಂದು ಅಸುನೀಗಿದ್ದರು.
ಮುಲಾಯಂ ಸಿಂಗ್ ಯಾದವ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಅಕ್ಟೋಬರ್ 10ರಂದು ನಿಧನರಾದರು.
ಅಶೋಕ್ ರಾವ್
ಸ್ಯಾಂಡಲ್‌ವುಡ್‌ನ ಹಿರಿಯ ಪೋಷಕ ನಟ ಅಶೋಕ್ ರಾವ್ ಅವರು ಫೆಬ್ರವರಿ 02ರಂದು ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಅವರು ಬಳಲುತ್ತಿದ್ದರು.
ಗಂಡಸಿ ನಾಗರಾಜ್
ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಹಾಗೂ ಕೆಲವು ಸಿನಿಮಾಗಳಲ್ಲಿ ಹಾಸ್ಯ ನಟರಾಗಿಯೂ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ಡಿಸೆಂಬರ್ 12 ರಂದು ನಿಧನರಾಗಿದರು.