ಹಿನ್ನೋಟ 2022: 2022ರಲ್ಲಿ ಪೋಷಕರಾದ ಸೆಲೆಬ್ರಿಟಿಗಳು ಇವರೇ ನೋಡಿ...
ಸಿನಿಮಾದಲ್ಲಿ ಮಿಂಚಿದ ಸಾಕಷ್ಟು ನಟಿಯರು ಈ ವರ್ಷ ತಾಯಿಯಾಗಿ ಮುದ್ದಾದ ಪುಟಾಣಿಗಳನ್ನು ತಮ್ಮ ಮಡಿಲಿಗೆ ಬರಮಾಡಿಕೊಂಡಿದ್ದಾರೆ. ಅಂತಹ ಕೆಲವು ಸೆಲೆಬ್ರಿಟಿಗಳು ಇವರೇ ನೋಡಿ...
Published: 29th December 2022 12:30 PM | Last Updated: 29th December 2022 01:57 PM | A+A A-

ಸಂಗ್ರಹ ಚಿತ್ರ
ಪ್ರಣಿತಾ ಸುಭಾಶ್- ನಿತಿನ್ ರಾಜು (ಹೆಣ್ಣು ಮಗು)
ಕನ್ನಡ ನಟಿ ಪ್ರಣೀತಾ ಸುಭಾಷ್ ಅವರು ಜೂನ್ 10 ರಂದು ಮುದ್ದಾದ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ತಮ್ಮ ಮುದ್ದು ಮಗಳಿಗೆ ಪ್ರಣೀತಾ ಅವರು ʻಅರ್ನಾʼ ಎಂದು ಹೆಸರಿಟ್ಟಿದ್ದಾರೆ.
ಬಿಪಾಶಾ ಬಸು- ಕರಣ್ ಸಿಂಗ್ ಗ್ರೋವರ್ (ಹೆಣ್ಣು ಮಗು)
ಬಾಲಿವುಡ್ ಸ್ಟಾರ್ ಕಪಲ್ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಬಿಪಾಶಾ ಬಸು ಅವರು ನವೆಂಬರ್ 12ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಕ್ಯೂಟ್ ದಂಪತಿ ತಮ್ಮ ಪುಟ್ಟ ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ. ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ಬಾಲಿವುಡ್‌ನ ಪವರ್ ಜೋಡಿಗಳಲ್ಲಿ ಒಬ್ಬರು. ಮದುವೆಯಾದ ಆರು ವರ್ಷಗಳ ನಂತರ ದಂಪತಿಗಳು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.
ನಯನತಾರಾ-ವಿಘ್ನೇಶ್ (ಅವಳಿ ಜವಳಿ ಗಂಡು ಮಕ್ಕಳು)
ಸೌತ್ ಸ್ಟಾರ್ ನಯನತಾರಾ ಜೂನ್ ತಿಂಗಳಲ್ಲಿ ಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯಾಗಿದ್ದರು. ದಂಪತಿಗಳು ಮದುವೆಯಾದ ನಾಲ್ಕು ತಿಂಗಳಿಗೆ ಮುದ್ದಾದ ಅವಳಿ ಗಂಡು ಮಗುವನ್ನು ಸ್ವಾಗತಿಸಿದ್ದರು. ಬಾಡಿಗೆ ತಾಯ್ತನದ ಮೂಲಕ ದಂಪತಿಗಳು ಅವಳಿ ಜವಳಿ ಗಂಡು ಮಕ್ಕಳನ್ನು ಪಡೆದುಕೊಂಡಿದ್ದಾರೆ.
ಕಾಜಲ್ ಅಗರ್‌ವಾಲ್-ಗೌತಮ್ ಕಿಚ್ಲು (ಗಂಡು ಮಗು)
ನಟಿ ಕಾಜಲ್ ಅಗರ್‌ವಾಲ್ ಏಪ್ರಿಲ್ 19 ರಂದು ಗಂಡು ಮಗುವಿಗೆ ತಾಯಿ ಆದರು. ನಟಿ ಕಾಜಲ್ ಅಗರ್‌ವಾಲ್ 2020ರ ಅಕ್ಟೋಬರ್ ತಿಂಗಳಲ್ಲಿ ಮದುವೆ ಆದರು. ತಮ್ಮ ಬಾಯ್ಫ್ರೆಂಡ್ ಗೌತಮ್ ಕಿಚ್ಲು ಅವರನ್ನು ವಿವಾಹ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.
ಆಲಿಯಾ ಭಟ್-ರಣಬೀರ್ ಕಪೂರ್ (ಹೆಣ್ಣು ಮಗು)
ನವೆಂಬರ್ 6 ರಂದು ಆಲಿಯಾ ಭಟ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೇ ವರ್ಷ ಏಪ್ರಿಲ್‌ನಲ್ಲಿ ಮದುವೆಯಾಗಿದ್ದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ತಾವು ಅಪ್ಪ-ಅಮ್ಮನಾಗುತ್ತಿರುವ ವಿಚಾರವನ್ನು ಕಳೆದ ಜೂನ್ 27 ರಂದು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್ (ಹೆಣ್ಣು ಮಗು)
ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ವಿದೇಶದಲ್ಲಿ ನಲೆಸಿದ್ದು, ಅಮೆರಿಕಾದ ಗಾಯಕ ನಿಕ್ ಜೋನಸ್ ಮದುವೆಯಾದ ಬಳಿಕ ಪ್ರಿಯಾಂಕಾ ಅಲ್ಲಿಯೇ ನೆಲೆಸಿದ್ದಾರೆ. ಬಾಲಿವುಡ್ ನಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ-ನಿಕ್ ಜೋನಸ್ ದಂಪತಿ ಈ ವರ್ಷದ ಆರಂಭದಲ್ಲಿ ಹೆಣ್ಣು ಮಗುವನ್ನು ಸ್ವಾಗತಿಸಿದರು. ಬಾಡಿಗೆ ತಾಯಿ ಮೂಲಕ ದಂಪತಿಗಳು ಹೆಣ್ಣು ಮಗು ಪಡೆದುಕೊಂಡರು.
ಸಂಜನಾ ಗಲ್ರಾನಿ- ಅಜೀಜ್ ಪಾಷಾ (ಗಂಡು ಮಗು)
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿಯವರು ಮೇ.19 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮುದ್ದು ಮಗನಿಗೆ ಅಲಾರಿಕ್ ಎಂದು ಹೆಸರಿಟ್ಟಿದ್ದಾರೆ. ನಟಿ ಸಂಜನಾ ಕಳೆದ 2020ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅಜೀಜ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸೋನಮ್ ಕಪೂರ್-ಆನಂದ್ ಅಹುಜಾ (ಗಂಡು ಮಗು)
ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ದಂಪತಿ ಆಗಸ್ಟ್ 20ರಂದು ಗಂಡು ಮಗುವಿಗೆ ಪೋಷಕರಾದರು. 2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಪೂರ್ ಅವರು ಗಂಡುವಿಗೆ ಜನ್ಮ ನೀಡಿದ್ದರು.
ಯುವರಾಜ್ ಸಿಂಗ್-ಹೇಝಲ್ ಕೀಜ್ (ಗಂಡು ಮಗು)
ಭಾರತದ ಮಾಜಿ ಕ್ರಿಕೆಟರ್ ಯುವರಾಜ್ ಸಿಂಗ್ ಮತ್ತು ನಟಿ ಹಜೆಲ್ ಕೀಚ್ ಜ.26ರಂದು ಗಂಡು ಮಗುವನ್ನು ಸ್ವಾಗತಿಸಿದರು. 2011ರ ವಿಶ್ವಕಪ್ ವಿಜೇತ ಯುವರಾಜ್ ಸಿಂಗ್ ಅವರು ತಮ್ಮ ಮಗನಿಗೆ ಓರಿಯನ್ ಕೀಚ್ ಸಿಂಗ್ ಎಂದು ಹೆಸರಿಟ್ಟಿದ್ದಾರೆ
ಅಮೂಲ್ಯ-ಜಗದೀಶ್ (ಅವಳಿ ಜವಳಿ ಗಂಡು ಮಕ್ಕಳು)
ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವರು ಮಾರ್ಚ್ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಮುದ್ದು ಮಕ್ಕಳಿಗೆ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಅವರು ಅಥರ್ವ ಹಾಗೂ ಅಧವ್ ಎಂದು ಹೆಸರಿಟ್ಟಿದ್ದಾರೆ.