ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

ಐತಿಹಾಸಿಕ ಕೆಂಪುಕೋಟೆ ಮೇಲೆ ದೇಶದ 14ನೇ ಪ್ರಧಾನಿ...

Published: 15th August 2014 02:00 AM  |   Last Updated: 16th August 2014 09:42 AM   |  A+A-


Posted By : Vishwanath
ನವದೆಹಲಿ: ಐತಿಹಾಸಿಕ ಕೆಂಪುಕೋಟೆ ಮೇಲೆ ದೇಶದ 14ನೇ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಿದರು.

68ನೇ ಸ್ವಾತಂತ್ರ್ಯ ಅಂಗವಾಗಿ ಇದೇ ಮೊದಲ ಬಾರಿಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ ಅವರು, ದೇಶದ ಜನತೆಗೆ ಸ್ವತಂತ್ರ ದಿನೋತ್ಸವದ ಶುಭಾಶಯ ಕೋರಿದರು.

ಧ್ವಜಾರೋಹಣಕ್ಕೂ ಮೊದಲು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಿ ನಂತರ ಕೆಂಪುಕೋಟೆಗೆ ಆಗಮಿಸಿದರು.

ಧ್ವಜಾರೋಹಣ ನಂತರ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ ಅವರು, ನಾನು ಈ ದೇಶದ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸೇವಕ ಈ ಸೇವಕನಿಂದ ದೇಶದ ಜನತೆಗೆ ಶುಭಾಶಯ ಎಂದರು.

ತಮ್ಮ ಭಾಷಣ ಉದ್ದಕ್ಕೂ ಹಿಂದಿನ ನಾಯಕರು, ಸ್ವಾತಂತ್ರ ಹೋರಾಟಗಾರರನ್ನು ನೆನೆಯುತ್ತಾ ಅವರ ಆದರ್ಶದ ನಡೆಯನ್ನು ನಮ್ಮ ಜೀವನದಲ್ಲಿ ಬಳಸಿಕೊಳ್ಳಬೇಕು ಎಂದರು. ಅಲ್ಲದೆ ಭಾರತ ದೇಶವನ್ನು ಗಡಿಯಲ್ಲಿ ನಿಂತು ಕಾಯುತ್ತಿರುವ ಯೋಧರು ನಿರಂತರವಾಗಿ ಕಾಪಾಡುತ್ತಿದ್ದಾರೆ ಅವರ ತ್ಯಾಗ ಬಲಿದಾನವನ್ನು ಸ್ಮರಿಸಿದರು.

ಯುವ ಜನತೆ ದೇಶದ ಅಭಿವೃದ್ಧಿಯ ಪತದಲ್ಲಿ ಕಾರ್ಯನಿರ್ವಹಿಸಬೇಕಿದೆ. ನಮ್ಮ ದೇಶ ಎನ್ನನ್ನ ಕೊಟ್ಟಿಲ್ಲ ಎಲ್ಲವನ್ನು ಕೊಟ್ಟಿದೆ ಅದನ್ನು ನಾವು ಸಮರ್ಥವಾಗಿ ಬಳಸಿಕೊಳ್ಳಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಸಾಧಿಸಿದಂತಾಗುತ್ತದೆ ಎಂದರು.

ದೇಶದ ಪ್ರಧಾನಿಗಳ ಹೆಸರಲ್ಲಿ ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದ್ದ ಸರ್ಕಾರಗಳ ಜಾಯಮಾನಕ್ಕೆ ತಿಲಾಂಜಲಿ ಹಾಡಿದ ಮೋದಿ ಅವರು, ಇದೇ ಮೊದಲ ಬಾರಿಗೆ ಸಂಸದರ ಹೆಸರಲ್ಲಿ ಆದರ್ಶ ಗ್ರಾಮ ಯೋಜನೆ ಜಾರಿ ಮಾಡಿದರು. ಸಂಸದರು ತಮ್ಮ ಗ್ರಾಮಗಳನ್ನು ಪ್ರೀತಿಸಬೇಕು ಮತ್ತು ಅದರ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಜನ್ ಧನ್ ಯೋಜನೆ ಘೋಷಣೆ ಮಾಡಿದ ಮೋದಿ ದೇಶದ ಪ್ರತಿ ಕುಟುಂಬಕ್ಕೂ 1 ಲಕ್ಷ ರು. ಜೀವ ವಿಮೆಯ ಭರವಸೆ ನೀಡಿದ್ದಾರೆ.

ಭಾರತ ಯುವಕರ ದೇಶ ಪ್ರತಿಭಾನ್ವಿತ ಯುವಕರು ನಮ್ಮ ದೇಶದಲ್ಲಿ ಇದ್ದರು ಅವರಿಂದ ಈ ದೇಶಕ್ಕೆ ಉಪಯೋಗವಾಗುತ್ತಿಲ್ಲ ಇಂತಹ ಯುವಕರ ಪ್ರಯೋಜನ ಪಡೆಯಲು ನಾವು ಯೋಜನೆ ರೂಪಿಸಬೇಕಿದೆ. ಹೀಗಾಗಿ ದೇಶದಲ್ಲಿ ಹೆಚ್ಚು ಹೆಚ್ಚು ಕಾರ್ಖಾನೆಗಳ ಅಭಿವೃದ್ಧಿ ಮಾಡಬೇಕಿದೆ. ಇಂತಹ ಕಾರ್ಯಗಳನ್ನು ಕೈಗೊಂಡರೇ ಮಾತ್ರ ಮುಂದೇ ಎಲ್ಲಾ ಉತ್ಪಾದನೆಗಳು "ಮೇಡ್ ಇನ್ ಇಂಡಿಯಾ" ಆಗಿ ಪರಿವರ್ತನೆಗೊಳ್ಳುತ್ತದೆ ಎಂದು ಮೋದಿ ಹೇಳಿದರು.

ತಮ್ಮ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲೇ ಪ್ರಧಾನಿ ಮೋದಿ ಹೊಸ ದಾಖಲೆ ಮಾಡಿದ್ದಾರೆ. ಯಾವುದೇ ಚೀಟಿಯ ಸಹಾಯ ಪಡೆಯದೇ ನಿರಂತರವಾಗಿ ಭಾಷಣ ಮಾಡಿದ್ದಾರೆ. ದೇಶದ ಇತಿಹಾಸದಲ್ಲೇ ಭಾಷಣದ ಪ್ರತಿ ಇರದೇ ಪ್ರಧಾನಿಯೊಬ್ಬರು ಮಾತನಾಡಿದ್ದು ಇದೇ ಮೊದಲು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp