ಬೆಳಗಿನಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತ

ಸ್ಪೈಸ್ ಜೆಟ್ ಸಂಸ್ಥೆ ಸರ್ಕಾರಕ್ಕೆ ಈಗಾಗಲೇ 173 ಕೋಟಿ ರೂಪಾಯಿ ಪಾವತಿ ಮಾಡಬೇಕಾಗಿದೆ...

Published: 17th December 2014 02:00 AM  |   Last Updated: 17th December 2014 11:50 AM   |  A+A-


Spice jet Flight operations stopped from morning due to non-supply of jet fuel

ಇಂದು ಬೆಳಗ್ಗಿನಿಂದ ಸ್ಪೈಸ್ ಜೆಟ್ ವಿಮಾನಗಳ ಹಾರಾಟ ಸ್ಥಗಿತ

Posted By : Lakshmi R
ನವದೆಹಲಿ: ತೈಲ ಕಂಪನಿಗಳಿಂದ ಇಂಧನ ಪೂರೈಕೆಯಾಗದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಸ್ಪೈಸ್ ಜೆಟ್ ವಿಮಾನಗಳು ಹಾರಾಟ ಸ್ಥಗಿತಗೊಳಿಸಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಪರದಾಡುವ ಸ್ಥಿತಿ ಎದುರಾಗಿದೆ.

ತೈಲ ಪೂರೈಕೆ ಸಮಸ್ಯೆಯಿಂದಾಗಿ ಬೆಳಗ್ಗಿನಿಂದಲೂ ಸ್ಪೈಸ್ ಜೆಟ್‌ನ ಒಂದೇ ಒಂದು ವಿಮಾನ ಸಹಾ ಟೇಕ್ ಆಫ್‌ಯಾಗದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ತೈಲ ಮಾರಾಟ ಸಂಸ್ಥೆಗಳು ಸ್ಪೈಸ್ ಜೆಟ್ ಸಂಸ್ಥೆಗೆ ಇಂಧನ ಪೂರೈಕೆ ಮಾಡುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ಮಧ್ಯೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಅತಿ ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯುವುದಾಗಿ ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.

ಈ ಸಂಬಂಧ ನಿನ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಮಾನ ಯಾನ ಸಚಿವರು, ಸ್ಪೈಸ್ ಜೆಟ್ ಸಂಸ್ಥೆಯ ಸುಧಾರಣೆಗೆಗಾಗಿ, ಇಂಧನ ಕಂಪನಿಗಳು 2 ವಾರಗಳ ಕಾಲ ಸಾಲದ ರೀತಿಯಲ್ಲಿ ಇಂಧನ ಪೂರೈಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ಭಾರತೀಯ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸ್ಪೈಸ್ ಜೆಟ್ ಸಂಸ್ಥೆಗೆ ನೀಡಿರುವ ಸಾಲದ ಮೊತ್ತವನ್ನು ಹೆಚ್ಚಿಸುವಂತೆಯೂ ವಿನಂತಿಸಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ಈ ಹಿಂದೆ ಸ್ಪೈಸ್ ಜೆಟ್‌ನ ಹಿರಿಯ ಅಧಿಕಾರಿ ಸಂಜೀವ್ ಕಪೂರ್ ಹಾಗೂ ಸನ್ ಗ್ರೂಪ್‌ನ ಎಸ್.ಎಲ್.ನಾರಾಯಣನ್, ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಸರ್ಕಾರ ಮಧ್ಯಪ್ರವೇಶಿಸಿ, ಸಂಸ್ಥೆಯ ಆರ್ಥಿಕ ಸುಧಾರಣೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ ಮಧ್ಯಪ್ರವೇಶಿಸಿದೆ.

ಸರ್ಕಾರಿ ವಿಮಾನ ನಿಲ್ದಾಣ ಬಳಕೆಯ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್ ಸಂಸ್ಥೆ ಸರ್ಕಾರಕ್ಕೆ ಈಗಾಗಲೇ 173 ಕೋಟಿ ರೂಪಾಯಿ ಪಾವತಿ ಮಾಡಬೇಕಾಗಿದೆ.Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp