3ಡಿಯಲ್ಲಿ ಹಂಪಿ ಗತವೈಭವ

ಕರ್ನಾಟಕದ ಹಂಪಿಯಲ್ಲಿ ನಾಶವಾಗಿ ಹೋಗಿರುವ ವಿಠ್ಠಲ ದೇಗುಲ...
ಹಂಪಿ ವಿಠ್ಠಲ ದೇಗುಲ
ಹಂಪಿ ವಿಠ್ಠಲ ದೇಗುಲ

ನವದೆಹಲಿ: ಕರ್ನಾಟಕದ ಹಂಪಿಯಲ್ಲಿ ನಾಶವಾಗಿ ಹೋಗಿರುವ ವಿಠ್ಠಲ ದೇಗುಲ ಮತ್ತು ಇತರ ಅಮೂಲ್ಯ ಶಿಲ್ಪಕಲೆಗಳನ್ನು ನೋಡಬೇಕೇ? ನಿರಾಶೆಯಾಗುವ ಅಗತ್ಯವಿಲ್ಲ. ನೈಜವಾದ ದೃಶ್ಯದಂತೆಯೇ ಅವುಗಳನ್ನು ಮತ್ತೆ ತೋರಿಸುವ ಯತ್ನ ನಡೆದಿದೆ. ಆದರೆ ಅದು ತಾಂತ್ರಿಕವಾಗಿ.

ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಐತಿಹಾಸಿಕ ಸ್ಥಳದ ಗತವೈಭವವನ್ನು ತಾಂತ್ರಿಕವಾಗಿ ಮರು ಸೃಷ್ಟಿಸುವ ಕೆಲಸ ಮಾಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಅದಕ್ಕಾಗಿ ತಂತ್ರಜ್ಞರು ಮೊಬೈಲ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಅದಕ್ಕೆ ನೆರವು ನೀಡಿದ್ದು ದೆಹಲಿ, ಮುಂಬೈನಲ್ಲಿರುವ ಐಐಟಿ, ಇಂಡಿಯನ್ ಸ್ಪಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ. 3ಡಿ ತಂತ್ರಜ್ಞಾನದ ಮೂಲಕ ಕರ್ನಾಟಕದ ಐತಿಹಾಸಿಕ ನಗರಿ ಹಂಪಿಯ ಶ್ರೀಮಂತ ಶಿಲ್ಪಕಲೆಯ ಗತವೈಭವವನ್ನು ಮರುಸೃಷ್ಟಿಸುವಂಥ ಕೆಲಸ ಇದೇ ಮೊದಲ ಬಾರಿಗೆ ನಡೆಯುತ್ತಿದೆ.

ನೋಡುವುದು ಹೇಗೆ?


ಹಂಪಿಯ ವಿಠ್ಠಲ ದೇಗುಲದ ರಥ ಈ ಹಿಂದೆ ಇದ್ದ ದಿಕ್ಕಿನಲ್ಲಿ ಮೊಬೈಲ್ ಇಟ್ಟರೆ ಸಾಕು. ಆ ರಥದ ಮೂಲ ವಿನ್ಯಾಸ ನೋಡಬಹುದು. ಅಂದರೆ ಅಸ್ಥಿತ್ವದಲ್ಲೇ ಇರದ ಆ ರಥವನ್ನು ಮತ್ತೆ ಮೊದಲಿನ ರೂಪದಲ್ಲಿ ಕಣ್ತುಂಬಿಕೊಳ್ಳಬಹುದು. ಈ ತಂತ್ರಜ್ಞಾನದ ಪ್ರದರ್ಶನಕ್ಕೆ ದೆಹಲಿಯ ಇಂಡಿಯಾ ಹ್ಯಾಬಿಟ್ ಕೇಂದ್ರದಲ್ಲಿ ನ.18. 19 ರಂದು ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು,
ಅಂದು ಡಿಜಿಟಲ್ ಹಂಪಿಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ವೈ.ಎಸ್.ಚೌದರಿ ಅನಾವರಣ ಗೊಳಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com