
ರೈತ
Source : Online Desk
ಜಾರ್ಖಂಡ್: ಮಳೆಗಾಗಿ ಕತ್ತೆ ಹಾಗೂ ಕಪ್ಪೆಗಳಿಗೆ ಮದುವೆ ಮಾಡುವುದು ಒಂದು ರೀತಿಯ ಅಂಧ ಆಚರಣೆ ಎನಿಸಿಕೊಂಡರೇ, ಜಾರ್ಖಂಡ್ ನಲ್ಲಿ ನರಬಲಿ ಕ್ರೌರ್ಯ ನಡೆದಿದೆ. ಉತ್ತಮ ಸುಗ್ಗಿ ಮತ್ತು ಮಳೆಗಾಗಿ ಇಲ್ಲಿನ ಒರ್ಕಾಸ್ ವಾಮಾಚಾರಿಗಳ ತಂಡವೊಂದು ವ್ಯಕ್ತಿಯೊರ್ವನ ರುಂಡು ಕತ್ತರಿಸಿವನ್ನು ಕತ್ತರಿಸಿದ್ದಾರೆ.
55 ವರ್ಷದ ಕಾರಿಯಾ ಒಬ್ಬಂಟಿಯಾಗಿದ್ದು ತನ್ನ ಮನೆಯಲ್ಲಿ ಒಬ್ಬನೆ ಇದ್ದ ಸಮಯದಲ್ಲಿ ಮನೆಗೆ ನುಗಿದ್ದ ವಾಮಾಚಾರಿಗಳ ತಂಡ ಆತನ ರುಂಡವನ್ನು ಕತ್ತರಿಸಿ ರುಂಡದೊಂದಿಗೆ ಪರಾರಿಯಾಗಿದ್ದಾರೆ.
ಭಾನುವಾರ ಮಾರುಕಟ್ಟೆಯಲ್ಲಿ ಕಾರಿಯಾನ ಅನುಪಸ್ಥಿತಿಯನ್ನು ಗಮನಿಸಿದ ಸ್ಥಳೀಯರು ಆತನ ಮನೆಯನ್ನು ಬಾಗಿಲನ್ನು ಹೊಡೆದು ಒಳ ಹೋಗಿದ್ದಾರೆ. ಅಲ್ಲಿ ಸ್ಥಳೀಯರಿಗೆ ಭಯಾನಂಕ ದೃಶ್ಯ ಕಂಡಿದೆ. ರುಂಡವಿಲ್ಲ ಮುಂಡ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಠಾಕೂರ್ ಹೇಳಿದ್ದಾರೆ.
ಮಾನ್ಸೂನ್ಗೂ ಮುನ್ನ ಒರ್ಕಾಸ್ ವಾಮಾಚಾರಿಗಳು ಗ್ರಾಮದಲ್ಲಿ ಸುತ್ತಾಡುತ್ತಿದ್ದರು. ಈ ಘಟನೆಯ ಬಳಿಕ ವಾಮಾಚಾರಿಗಳು ಗ್ರಾಮ ತೋರಿದಿದ್ದು, ಅವರ ವಿರುದ್ಧ ಗ್ರಾಮಸ್ಥರು ದೂರು ನೀಡಿದ್ದಾರೆ.
ಉತ್ತಮ ಸುಗ್ಗಿಯ ಮತ್ತು ಮಳೆಗಾಗಿ ನರಬಲಿ ನೀಡುವ ಹಳೆಯ ಧಾರ್ಮಿಕ ಕಂದಾಚಾರ ಇನ್ನೂ ರಾಜ್ಯದಲ್ಲಿ ಪ್ರಚಲಿತದಲ್ಲಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ.
ಬಿಸಿಗಾಳಿಗೆ ತತ್ತರಿಸಿರುವ ಜಾರ್ಖಂಡ್ ನಲ್ಲಿ ಮಳೆಗಾಗಿ ಜನರು ಪರಿತಪಿಸುತ್ತಿದ್ದಾರೆ. ಜಾರ್ಖಂಡ್ ನಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ಇದೆ.
Stay up to date on all the latest ರಾಷ್ಟ್ರೀಯ news