ಸುರೇಶ್ ಪ್ರಭು, ಶರದ್ ಯಾದವ್, ಚಿದಂಬರಂ, ರಾಮ್ ಜೇಠ್ಮಲಾನಿ ರಾಜ್ಯಸಭೆಗೆ ಅವಿರೋಧ ಆಯ್ಕೆ

ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಶುಕ್ರವಾರ...

Published: 03rd June 2016 02:00 AM  |   Last Updated: 03rd June 2016 07:14 AM   |  A+A-


Suresh Prabhu, Chidambaram, Sharad Yadav, Ram Jethmalani

ಸುರೇಶ್ ಪ್ರಭು, ಪಿ.ಚಿದಂಬರಂ, ಶರದ್ ಯಾದವ್, ರಾಮ್ ಜೇಠ್ಮಲಾನಿ

Posted By : SUD
Source : PTI
ಮುಂಬೈ: ರೈಲ್ವೆ ಸಚಿವ ಸುರೇಶ್ ಪ್ರಭು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ವೈ.ಸತ್ಯನಾರಾಯಣ ಚೌಧರಿ ಶುಕ್ರವಾರ ಅವಿರೋಧವಾಗಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪಿ.ಚಿದಂಬರಂ ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಅಪರಾಹ್ನ ಅಭ್ಯರ್ಥಿಗಳ ನಾಮಪತ್ರ ವಾಪಸಾತಿಗೆ ಕೊನೆಯ ದಿನವಾಗಿತ್ತು.

ಮಾಜಿ ಸಚಿವ ಪ್ರಫುಲ್ ಪಟೇಲ್, ಬಿಜೆಪಿಯ ವಿನಯ್ ಸಹಸ್ರಬುದ್ದೆ ಮತ್ತು ವಿಕಾಸ್ ಮಹಾತ್ಮೆ ಮತ್ತು ಶಿವಸೇನೆಯ ಸಂಜಯ್ ರಾವತ್ ಸಹ ಇಂದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಬಿಹಾರದಿಂದ ಜೆಡಿಯು ಶರದ್ ಯಾದವ್, ಖ್ಯಾತ ವಕೀಲ ರಾಮ್ ಜೇಠ್ಮಲಾನಿ, ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮಿಸ ಭಾರ್ತಿ, ಬಿಜೆಪಿಯ ಗೋಪಾಲ್ ನಾರಾಯಣ್ ಸಿಂಗ್ ಕೂಡ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp