ನೂತನ ಉಪರಾಷ್ಟ್ರಪತಿ ಚುನಾವಣೆ ಇಂದು: ಸಂಜೆ 7 ಗಂಟೆಗೆ ಫಲಿತಾಂಶ

ದೇಶದ ನೂತನ ಉಪರಾಷ್ಟ್ರಪತಿ ಆಯ್ಕೆಗೆ ಶನಿವಾರ ಚುನಾವಣೆ ನಡೆಯಲಿದ್ದು, ಎನ್'ಡಿಎ ಅಭ್ಯರ್ಥಿಯಾಗಿ ಎಂ.ವೆಂಕಯ್ಯ ನಾಯ್ಡು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯವರು...
ಎನ್'ಡಿಎ ಅಭ್ಯರ್ಥಿ ಎಂ.ವೆಂಕಯ್ಯ ನಾಯ್ಡು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ
ಎನ್'ಡಿಎ ಅಭ್ಯರ್ಥಿ ಎಂ.ವೆಂಕಯ್ಯ ನಾಯ್ಡು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ

ನವದೆಹಲಿ: ದೇಶದ ನೂತನ ಉಪರಾಷ್ಟ್ರಪತಿ ಆಯ್ಕೆಗೆ ಶನಿವಾರ ಚುನಾವಣೆ ನಡೆಯಲಿದ್ದು, ಎನ್'ಡಿಎ ಅಭ್ಯರ್ಥಿಯಾಗಿ ಎಂ.ವೆಂಕಯ್ಯ ನಾಯ್ಡು ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯವರು ಕಣಕ್ಕೆ ಇಳಿದಿದ್ದಾರೆ. 

ಇಂದು ಬೆಳಿಗ್ಗೆ 10 ಗಂಟಿಯಿಂದ ಸಂಜೆ 5 ಗಂಟೆಯವರೆಗೆ ಮತದಾನಾಕ್ಕೆ ಅವಕಾಶವಿದ್ದು, ಸಂಜೆ 7 ಗಂಟೆ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಜೊತೆಗೆ ವಿಧಾನಸಭಾ ಸದಸ್ಯರಿಗೂ ಮತದಾನ ಹಕ್ಕಿರುತ್ತದೆ. ಆದರೆ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ಸದಸ್ಯರಿಗೆ ಮಾತ್ರವೇ ಮತ ಚಲಾವಣೆಯ ಹಕ್ಕಿದೆ. 

ಸಂಸತ್ತಿನ ಉಭಯ ಸದನಗಳ ಒಟ್ಟು ಸದಸ್ಯ ಬಲ 790, ಆದರೆ ಸದ್ಯ 3 ಸ್ಥಾನ ಖಾಲಿಯಿದೆ. ಜೊತೆಗೆ ಓರ್ವ ಬಿಜೆಪಿ ಸಂಸದಗೆ ಮತ ಚಲಾಯಿಸಲು ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ 786 ಜನರಿಗೆ ಮತ ಚಲಾವಣೆಯ ಅವಕಾಶ ಸಿಗಲಿದೆ. ಈ ಪೈಕಿ ಈಗಾಗಲೇ 485 ಸದಸ್ಯರು ನಾಯ್ಡು ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಈ ಚುನಾವಣೆ ಕೇವಲ ಔಪಚಾರಿಕವಾದಂತಾಗಿದೆ. ಸೂಕ್ತ ರೀತಿಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.51 ರಷ್ಟು ಮತ ಪಡೆವರು ವಿಜಯಶಾಲಿಗಳಾಗಿ ಹೊರಹೊಮ್ಮಲಿದ್ದಾರೆ. 

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಜೆಡಿಯು ಮತ್ತು ಬಿಜೆಡಿ ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಯನ್ನು ಬೆಂಬಲಿಸುತ್ತಿವೆ. ಇದರ ಹೊರತಾಗಿ ನಾಯ್ಡು ಸುಲಭವಾಗಿ ಗೆಲುವ ಸಾಧಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಇನ್ನು ಚುನಾವಣೆ ವೇಳೆ ವಿಶೇಷ ಪೆನ್ ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್ ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.

ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಅಧಿಕಾರಾವಧಿ ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ. ಅನ್ಸಾರಿ ಸತತ 2 ಅವಧಿಗೆ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com