ತಮಿಳುನಾಡು : ವಿಜಯ್ 'ನನ್ಬನ್ ' ಶೈಲಿಯಲ್ಲಿ 80 ವರ್ಷದ ವೃದ್ದೆಯನ್ನು ರಕ್ಷಿಸಿದ ಯುವಕರು !

ನಟ ವಿಜಯ್ ಅಭಿನಯದ 'ನನ್ಬನ್ ' ಚಿತ್ರದಲ್ಲಿ ಅಂಬ್ಯೂಲೆನ್ಸ್ ಬರುವುದು ತಡವಾದ ಕಾರಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿವಾ ತಂದೆಯನ್ನು ಮತ್ತೊಬ್ಬ ಸ್ನೇಹಿತನ ನೆರವಿನಿಂದ ನಟ ವಿಜಯ್ ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ.

Published: 02nd November 2018 12:00 PM  |   Last Updated: 02nd November 2018 08:03 AM   |  A+A-


Two youths in Tamil Nadu saving the life of an old woman

ವೃದ್ದ ಮಹಿಳೆಯನ್ನು ಸ್ಕೂಟರ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ಯುವಕರು

Posted By : ABN
Source : The New Indian Express
ಚೆನ್ನೈ: 2012ರಲ್ಲಿ ತೆರೆ ಕಂಡ  ನಟ ವಿಜಯ್ ಅಭಿನಯದ 'ನನ್ಬನ್ ' ಚಿತ್ರದಿಂದ ಪ್ರೇರಣೆಗೊಂಡ  ಯುವಕರಿಬ್ಬರು ಇದೇ ರೀತಿಯಲ್ಲಿ ವೃದ್ದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.

'ನನ್ಬನ್  ಚಿತ್ರದಲ್ಲಿ ಅಂಬ್ಯೂಲೆನ್ಸ್ ಬರುವುದು ತಡವಾದ ಕಾರಣ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಜಿವಾ ತಂದೆಯನ್ನು  ಮತ್ತೊಬ್ಬ ಸ್ನೇಹಿತನ ನೆರವಿನಿಂದ ನಟ ವಿಜಯ್  ಸ್ಕೂಟರ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಾರೆ.

ಸ್ಕೂಟಿಯನ್ನು ಆಸ್ಪತ್ರೆಯೊಳಗೆ ನುಗ್ಗಿಸಿ  ಜಿವಾ ತಂದೆಯನ್ನು ದಾಖಲಿಸುತ್ತಾರೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಬದುಕುಳಿಯುತ್ತಾರೆ , ವಿಜಯ್ ಅವರ ಸೇವೆಗೆ ವೈದ್ಯರು ಹಾಗೂ ಸ್ನೇಹಿತರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತದೆ.

ಇದೇ ರೀತಿಯ ಘಟನೆಯೊಂದು ತಂಜಾವೂರು ಜಿಲ್ಲೆಯ ಪುಟ್ಟುಕೊಟೈ ಬಳಿಯ ಕಾಸಂಕುಲಂ ಬಳಿ   ನಡೆದಿರುವ ಬಗ್ಗೆ ವರದಿಯಾಗಿದೆ.


ಕಾಸಾನ್ ಕುಲಂ ಬಳಿಯ ಶಿವ ದೇವಾಲಯದ ಬಳಿ ಚಿನ್ನಪೊನ್ನು ಎಂಬ 80 ವರ್ಷದ ವೃದ್ದೆ  ಕುಸಿದು ಬಿದ್ದಿದರು. ಅವರು ಯಾವುದೇ ಚಲನವಲನ ಮಾಡದೇ ಇದುದ್ದರಿಂದ  ಸತ್ತೇ ಹೋದರು ಎಂದು ಅಲ್ಲಿದ್ದ ಭಕ್ತರು ಭಾವಿಸಿದ್ದರು.

ಆದರೆ, ಕೆಲ ಯುವಕರು  ಕ್ಷಣಾರ್ಧದಲ್ಲಿ ತಮ್ಮ ಬೈಕ್ ನಲ್ಲಿ  ಆ ವೃದ್ದ ಮಹಿಳೆಯನ್ನು ಕೂರಿಸಿಕೊಂಡು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸಾಗಿಸಿ ಆಕೆಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp