ನರಭಕ್ಷಕ ಹುಲಿ ಹತ್ಯೆಯ ಟೀಕೆ ಬೇಡ, ಹುಲಿಗೆ ಬಲಿಯಾದ ಮಹಿಳೆಯ ಪ್ರಾಣವನ್ನೂ ಪರಿಗಣಿಸಿ: ಮನೇಕಾ ಗಾಂಧಿಗೆ ಸಚಿವ

ಮಹಾರಾಷ್ಟ್ರದಲ್ಲಿ ನರಭಕ್ಷಕ ಹುಲಿಯನ್ನು ಹತ್ಯೆ ಮಾಡಿರುವುದಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿಯ ಟೀಕೆಗೆ ಮಹಾರಾಷ್ಟ್ರ ಅರಣ್ಯ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಮನೇಕಾ ಗಾಂಧಿಯ ನರಭಕ್ಷಕ ಹುಲಿ ಹತ್ಯೆಯನ್ನು ಟೀಕೆ ಮಾಡಬೇಡಿ, ಹುಲಿಗೆ ಬಲಿಯಾದ ಮಹಿಳೆಯ ಪ್ರಾಣವನ್ನೂ ಪರಿಗಣಿಸಲಿ!
ಮನೇಕಾ ಗಾಂಧಿಯ ನರಭಕ್ಷಕ ಹುಲಿ ಹತ್ಯೆಯನ್ನು ಟೀಕೆ ಮಾಡಬೇಡಿ, ಹುಲಿಗೆ ಬಲಿಯಾದ ಮಹಿಳೆಯ ಪ್ರಾಣವನ್ನೂ ಪರಿಗಣಿಸಲಿ!
ಮುಂಬೈ: ಮಹಾರಾಷ್ಟ್ರದಲ್ಲಿ ನರಭಕ್ಷಕ ಹುಲಿಯನ್ನು ಹತ್ಯೆ ಮಾಡಿರುವುದಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿಯ ಟೀಕೆಗೆ ಮಹಾರಾಷ್ಟ್ರ ಅರಣ್ಯ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. 
ನರಭಕ್ಷಕ ಹುಲಿ ಅವನಿಯನ್ನು ಹತ್ಯೆ ಮಾಡಿರುವುದನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಮನೇಕಾ ಗಾಂಧಿ ಖಂಡಿಸಿ ಟೀಕಿಸಿದ್ದರು.  ಕೇಂದ್ರ ಸಚಿವರ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮನುಗಂಟಿವರ್, ನರಭಕ್ಷಕ ಹಲಿಯನ್ನು ಕೊಂದಿದ್ದನ್ನು ಮನೇಕಾ ಗಾಂಧಿ ಅಪರಾಧದ ಸ್ಪಷ್ಟ ಪ್ರಕರಣ ಅಂತ ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನರಭಕ್ಷಕ ಹುಲಿ ಬಗ್ಗೆ ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎನಿಸುತ್ತದೆ. ಮನೇಕಾ ಗಾಂಧಿ ಪ್ರಾಣಿಗಳನ್ನು ಇಷ್ಟಪಡುತ್ತಾರೆ. ಈಗ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವರು, ನರಭಕ್ಷಕ ಹುಲಿಯ ಹತ್ಯೆಯನ್ನು ಟೀಕಿಸುವುದಷ್ಟೇ ಅಲ್ಲದೇ ಹುಲಿಗೆ ಬಲಿಯಾದ ಮಹಿಳೆಯ ಪ್ರಾಣವನ್ನೂ ಪರಿಗಣಿಸಬೇಕಿದೆ ಎಂದು  ಸುಧೀರ್ ಮನುಗಂಟಿವರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com