ಕಾಂಗ್ರೆಸ್ ಪಕ್ಷಕ್ಕೆ ಸೇರಿದ 687 ಪೇಜ್, ಖಾತೆಗಳು ಡಿಲೀಟ್: ಫೇಸ್ ಬುಕ್

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಶಾಕ್ ನೀಡಿದೆ.

Published: 01st April 2019 12:00 PM  |   Last Updated: 01st April 2019 05:07 AM   |  A+A-


AICC president Rahul Gandhi

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ

Posted By : SBV SBV
Source : Online Desk
ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಶಾಕ್ ನೀಡಿದೆ. 

ಕಾಂಗ್ರೆಸ್ ನ ಐಟಿ ಸೆಲ್ ನೊಂದಿಗೆ ಗುರುತಿಸಿಕೊಂಡಿದ್ದ ಬರೊಬ್ಬರಿ 687 ಪೇಜ್ ಹಾಗೂ ಖಾತೆಗಳನ್ನು ತೆಗೆದು ಹಾಕಿರುವುದಾಗಿ ಫೇಸ್ ಬುಕ್ ಏ.1 ರಂದು ಘೋಷಿಸಿದೆ. 

ನಕಲಿ ಫೇಸ್ ಬುಕ್ ಖಾತೆಗಳ ವಿರುದ್ಧ ಈಗಾಗಲೇ ಸಂಸ್ಥೆ ಸಮರ ಸಾರಿದ್ದು, ಇಂತಹ ಹಲವು ಖಾತೆಗಳನ್ನು ಫೇಸ್ ಬುಕ್ ಡಿಲೀಟ್ ಮಾಡುತ್ತಿದೆ. ಕಾಂಗ್ರೆಸ್ ನೊಂದಿಗೆ  ಗುರುತಿಸಿಕೊಂಡಿದ್ದ 687 ಖಾತೆಗಳು ಪೇಜ್ ಗಳು ನಕಲಿಯಾಗಿದ್ದರಿಂದ ಅವುಗಳನ್ನು ತೆಗೆದುಹಾಕಲಾಗಿದೆ. 

ಇದಷ್ಟೇ ಅಲ್ಲದೇ ಪಾಕಿಸ್ತಾನ ಮೂಲದ 103 ಪೇಜ್ ಹಾಗೂ ಗ್ರೂಪ್ ಗಳನ್ನು ಫೇಸ್ ಬುಕ್ ಹಾಗೂ ಇನ್ಸ್ಟಾ ಗ್ರಾಮ್ ನಿಂದ ತೆಗೆದುಹಾಕಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp