ನಮೋ ಆ್ಯಪ್ ಗೆ ಸಂಬಂಧಿಸಿದ 15 ಪೇಜ್​​ ಡಿಲೀಟ್ ಮಾಡಿದ ಫೇಸ್ ಬುಕ್

ಕಾಂಗ್ರೆಸ್ ನಂತರ ಇದೀಗ ಬಿಜೆಪಿಗೂ ಬಿಸಿ ಮುಟ್ಟಿಸಿದ ಸಾಮಾಜಿಕ ಜಾಲತಾಣ, ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್​​’ಗೆ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಕಾಂಗ್ರೆಸ್ ನಂತರ ಇದೀಗ ಬಿಜೆಪಿಗೂ ಬಿಸಿ ಮುಟ್ಟಿಸಿದ ಸಾಮಾಜಿಕ ಜಾಲತಾಣ, ಪ್ರಧಾನಿ ನರೇಂದ್ರ ಮೋದಿ ಅವರ ‘ನಮೋ ಆ್ಯಪ್​​’ಗೆ ಸಂಬಂಧಿಸಿದ ಒಟ್ಟು 15 ಪೇಜ್​​ಗಳನ್ನ ​ಡಿಲೀಟ್​ ಮಾಡಿದೆ.
ಲೋಕಸಭೆ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಫೇಸ್​ಬುಕ್​, ಟ್ವಿಟರ್​, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಚಾರದ ಅಬ್ಬರ, ಆರೋಪ, ಪ್ರತ್ಯಾರೋಪಗಳು ಜೋರಾಗಿವೆ. ಈ ಹಿನ್ನೆಲೆಯಲ್ಲಿ ಫೇಸ್​ಬುಕ್​ ಕೆಲವು ಅನಧಿಕೃತ ಖಾತೆ, ಪೇಜ್ ಗಳನ್ನು ತೆಗೆದುಹಾಕುತ್ತಿದ್ದು, ನಮೋ ಆ್ಯಪ್ ನೊಂದಿಗೆ ​ ನಂಟು ಹೊಂದಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಸಿಲ್ವರ್ ಟಚ್ ಗೆ ಸಂಬಂಧಿಸಿದ 15 ಖಾತೆಗಳನ್ನ ರಿಮೂವ್ ಮಾಡಲಾಗಿದೆ ಎಂದು ಫೇಸ್​ಬುಕ್ ತಿಳಿಸಿರುವುದಾಗಿ ರಾಯಿಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕು ಮುನ್ನ ಕಾಂಗ್ರೆಸ್​ನ ಐಟಿ ಸೆಲ್​​ಗೆ ಸಂಬಂಧಿಸಿದ 687 ಅನಧಿಕೃತ ಪೇಜ್ ಗಳನ್ನು ತೆಗೆದು ಹಾಕಿತ್ತು. ಅಲ್ಲದೇ ಪಾಕಿಸ್ತಾನ ಸೇನೆಗೆ ಸಂಬಂಧಿಸಿದ ಕೆಲ ಖಾತೆಗಳನ್ನೂ ತೆಗೆದು ಹಾಕಿತ್ತು. ಇದೀಗ ನಮೋ ಆ್ಯಪ್​ ಮೇಲೆ ಕಣ್ಣಿಟ್ಟಿರುವ ಫೇಸ್​ಬುಕ್​​, ಸಿಲ್ವರ್​ ಐಟಿ ಸಂಸ್ಥೆಗೆ ಸಂಬಂಧಿಸಿದ 15 ಫೇಸ್​ಬುಕ್​ ಪೇಜ್​ಗಳನ್ನ ಡಿಲೀಟ್ ಮಾಡಿದೆ. ಅಲ್ಲದೇ ಸಿಲ್ವರ್ ಟಚ್​​ ಸಂಸ್ಥೆ ವಿರುದ್ಧ ಕ್ರಮಕಕ್ಕೆ ಮುಂದಾಗಿದೆ ಅಂತಾ ಫೇಸ್​ಬುಕ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com