ಜಮಾತ್-ಇ-ಇಸ್ಲಾಮಿ, ಜೆಕೆಎಲ್ಎಫ್ ನಿಷೇಧ ಪರಿಶೀಲಿಸಲು ನ್ಯಾಯಾಧೀಕರಣ ರಚನೆ

ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಮತ್ತು ಜಮ್ಮು ಮತ್ತು...
ಯಾಸೀನ್ ಮಲಿಕ್
ಯಾಸೀನ್ ಮಲಿಕ್
ನವದೆಹಲಿ: ಕಾಶ್ಮೀರಿ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್ಎಫ್) ಮತ್ತು ಜಮ್ಮು ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ಸಂಘಟನೆಗಳ ಮೇಲಿನ ನಿಷೇಧ ಪರಿಶೀಲಿಸಲು ಕೇಂದ್ರ ಸರ್ಕಾರ ಸೋಮವಾರ ನ್ಯಾಯಾಧೀಕರಣ ರಚನೆ ಮಾಡಿದೆ.
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿ ಈ ಎರಡು ಸಂಘಟನೆಗಳನ್ನು ನಿಷೇಧಿಸಿತ್ತು. ಇದೀಗ ಆ ಸಂಘಟನೆಗಳ ಮೇಲಿನ ನಿಷೇಧ ಪರಿಶೀಲಿಸಲು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಚಂದ್ರಶೇಖರ್ ನೇತೃತ್ವದಲ್ಲಿ ನ್ಯಾಯಾಧೀಕರಣ ರಚಿಸಿದ್ದು, ಜಮಾತ್-ಇ-ಇಸ್ಲಾಮಿ, ಜೆಕೆಎಲ್ಎಫ್ ನಿಷೇಧಕ್ಕೆ ಸಕಾರಣವಿದೆಯೇ ಎಂಬ ಕುರಿತು ನಿರ್ಧರಿಸಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಉಗ್ರ ಸಂಘಟನೆಗಳೊಂದಿಗೆ ಜೆಕೆಎಲ್ ಎಫ್ ನಿಕಟ ಸಂಪರ್ಕ ಹೊಂದಿದ್ದು, ಕಾಶ್ಮೀರ ಹಾಗೂ ಇತರೆ ಕಡೆ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಮಾರ್ಚ್ 22ರಂದು ಯಾಸೀನ್ ಮಲಿಕ್ ಸಂಘಟನೆಗೆ ಐದು ವರ್ಷ ನಿಷೇಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com