ಹಣ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು

ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಅವರ ಅಪ್ತ ಮನೋಜ್ ಅರೋರಾ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Published: 01st April 2019 12:00 PM  |   Last Updated: 01st April 2019 05:05 AM   |  A+A-


Robert Vadra

ರಾಬರ್ಟ್ ವಾದ್ರಾ

Posted By : ABN ABN
Source : The New Indian Express
ನವದೆಹಲಿ: ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಅವರ ಅಪ್ತ  ಮನೋಜ್ ಅರೋರಾ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ರಾಬರ್ಟ್ ವಾದ್ರಾ ಹಾಗೂ ಮನೋಜ್ ಅರೋರಾ  ತಲಾ 5 ಲಕ್ಷ ರೂಪಾಯಿ ಶ್ಯೂರಿಟಿಯ ಬಾಂಡ್  ನೀಡಬೇಕು ಹಾಗೂ ಯಾವುದೇ ಮಾಹಿತಿ ನೀಡಿದೆ ದೇಶದಿಂದ ಬೇರೆಡೆ ಹೋಗದಂತೆ  ನಿರ್ದೇಶಿಸಿ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್   ಜಾಮೀನು ಮಂಜೂರು ಮಾಡಿದ್ದಾರೆ.

ಈ ಪ್ರಕರಣದಲ್ಲಿ ಸಾಕ್ಷಿದಾರರ ಮೇಲೆ ಯಾವುದೇ ಪ್ರಭಾವ ಬೀರುವಂತಿಲ್ಲ, ಸಾಕ್ಷ್ಯಾಧಾರಗಳನ್ನು ತಿರುಚಬಾರದು ಎಂದು ನ್ಯಾಯಾಲಯ ಇಬ್ಬರಿಗೂ ಸೂಚಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ಆಗಿರುವ ರಾಬರ್ಟ್ ವಾದ್ರಾ ಲಂಡನ್  ಮೂಲದ ಸುಮಾರು 1.9 ಮಿಲಿಯನ್ ಪೌಂಡ್ ಮೊತ್ತದ ಆಸ್ತಿ ಖರೀದಿಯಲ್ಲಿ ಹಣ ವರ್ಗಾವಣೆಯ ಆರೋಪ ಎದುರಿಸುತ್ತಿದ್ದಾರೆ.

ರಾಬಾರ್ಟ್ ವಾದ್ರಾ ಅವರ  ಮಧ್ಯಂತರ ಜಾಮೀನು ಅವಧಿ ಫೆಬ್ರವರಿ 2 ರಿಂದಲೂ ವಿಸ್ತರಣೆಯಾಗುತ್ತಾ ಬಂದಿತ್ತು. ವಿಚಾರಣೆಗಾಗಿ ರಾಬರ್ಟ್ ವಾದ್ರಾ ಅವರನ್ನು ತಮ್ಮ  ವಶಕ್ಕೆ ನೀಡುವಂತೆ ಇಡಿ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿತ್ತು.
Stay up to date on all the latest ರಾಷ್ಟ್ರೀಯ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp