ಮೋದಿ ಸೇನೆ ಹೇಳಿಕೆಗೆ ನೌಕಾದಳದ ನಿವೃತ್ತ ಮುಖ್ಯಸ್ಥ ಕೆಂಡಾಮಂಡಲ

ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ನೌಕಾದಳದ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಲ್ ರಾಮ್ ದಾಸ್ ಕೆಂಡಾಮಂಡಲರಾಗಿದ್ದಾರೆ.
ಮೋದಿ ಸೇನೆ ಹೇಳಿಕೆಗೆ ನೌಕಾದಳದ ನಿವೃತ್ತ ಮುಖ್ಯಸ್ಥ ಕೆಂಡಾಮಂಡಲ
ಮೋದಿ ಸೇನೆ ಹೇಳಿಕೆಗೆ ನೌಕಾದಳದ ನಿವೃತ್ತ ಮುಖ್ಯಸ್ಥ ಕೆಂಡಾಮಂಡಲ
ನವದೆಹಲಿ: ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ನೌಕಾದಳದ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಲ್ ರಾಮ್ ದಾಸ್ ಕೆಂಡಾಮಂಡಲರಾಗಿದ್ದಾರೆ. 
ಯೋಗ್;ಇ ಆದಿತ್ಯನಾಥ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೂ ಸಹ ನಿವೃತ್ತ ನೌಕಾ ದಳದ ಮುಖ್ಯಸ್ಥ ಅಡ್ಮಿರಲ್ ಎಲ್ ರಾಮ್ ದಾಸ್ " ಯೋಧರು ದೇಶದ ಸಂವಿಧಾನಕ್ಕೆ ನಿಷ್ಠರಾಗಿದ್ದೇವೆ" ಎಂದು ಹೇಳಿದ್ದಾರೆ. 
ದೇಶದ ಸೇನಾ ಪಡೆಗಳು ದೇಶದ ಸಂವಿಧಾನಕ್ಕೆ ನಿಷ್ಠೆ ಹೊಂದಿವೆ ಎಂಬುದನ್ನು ಸೇನಾ ಪಡೆಗಳ ಅತಿ ಹಿರಿಯ ಮುಖ್ಯಸ್ಥನಾಗಿ ನಿಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 
ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅಡ್ಮಿರಲ್ ರಾಮ್ ದಾಸ್,  ಸೇನೆ ಖಾಸಗಿ ವ್ಯಕ್ತಿ ಅಥವಾ ಪಕ್ಷಕ್ಕೆ ಸೇರಿದ ಖಾಸಗಿ ಪಡೆಯಲ್ಲ, ಒಂದು ವೇಳೆ ಅಂತಹ  ಹೇಳಿಕೆ ಯಾರಾದರೂ ನೀಡಿದರೆ ಅದು ಒಪ್ಪುವಂಥಹದ್ದಲ್ಲ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. 
ಇಂತಹ ಬೇಜವಾಬ್ದಾರಿಯುತ ನಡೆಗಳ ವಿರುದ್ಧ ನೀವು ಸೂಕ್ತ ಕ್ರಮ ಕೈಗೊಳ್ಳಲಿದ್ದೀರಿ ಎಂಬ ವಿಶ್ವಾಸವಿದೆ ಎಂದು ಅಡ್ಮಿರಲ್ ರಾಮ್ ದಾಸ್ ಮುಖ್ಯ ಚುನಾವಣಾಧಿಕಾರಿಗೆ ಹೇಳಿದ್ದಾರೆ. 
ಮಾ.30 ರಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರ ಭಯೋತ್ಪಾದನೆ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ವಿವರಿಸುವ ಭರದಲ್ಲಿ ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿದ್ದರು. 
ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿತ್ತು, ಆದರೆ ಮೋದಿ ಸೇನೆ ಭಯೋತ್ಪಾದಕರಿಗೆ ಗೋಲಿ ಹಾಗೂ ಬಾಂಗ್ ಗಳ ರುಚಿ ತೋರಿಸಿದೆ ಎಂದು ಗಾಜಿಯಾಬಾದ್ ನಲ್ಲಿ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com