ಅಮಾನತ್ತಾದ ಬನಾರಸ್ ವಿವಿಯ ವಿದ್ಯಾರ್ಥಿಯ ಗುಂಡು ಹಾರಿಸಿ ಕೊಲೆಗೈದ ದುಷ್ಕರ್ಮಿಗಳು!

ಉತ್ತರಪ್ರದೇಶದ ಪ್ರತಿಷ್ಠಿತ ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ಅಮಾನತ್ತಾದ ವಿದ್ಯಾರ್ಥಿ ಗೌರವ್ ಸಿಂಗ್ (20) ಮೇಲೆ ನೆನ್ನೆ ತಡರಾತ್ರಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾರಣಾಸಿ: ಉತ್ತರಪ್ರದೇಶದ ಪ್ರತಿಷ್ಠಿತ ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ಅಮಾನತ್ತಾದ ವಿದ್ಯಾರ್ಥಿ ಗೌರವ್ ಸಿಂಗ್ (20) ಮೇಲೆ ನೆನ್ನೆ ತಡರಾತ್ರಿ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 
ಮೂಲಗಳ ಪ್ರಕಾರ ಬನಾರಸ್ ವಿವಿಯ ಕ್ಯಾಂಪಸ್ ಒಳಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಹಾಸ್ಟೆಲ್ ನ ಗೇಟ್​ ಬಳಿ ನಿಂತಿದ್ದ ಗೌರವ್​ ಮೇಲೆ ಅನಾಮಿಕ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ತಕ್ಷಣವೇ ಅವರನ್ನು ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಗೌರವ್ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ 1.30ರ ಸಮಯದಲ್ಲಿ ಗೌರವ್​ ಸಿಂಗ್​ ಬಿರ್ಲಾ ಹಾಸ್ಟೆಲ್​ ಮುಂಭಾಗದ ಗೇಟ್​ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಗೌರವ್ ಮೇಲೆ ಗುಂಡು ಹಾರಿಸಿದ್ದಾರೆ. ಮೂರು ಗುಂಡುಗಳು ಗೌರವ್ ರ ಹೊಟ್ಟೆ ಮತ್ತು ಎದೆಗೆ ತಗುಲಿ, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಕ್ಯಾಂಪಸ್​ ಆವರಣದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು.
ಒಟ್ಟು ಹತ್ತು ಗುಂಡುಗಳನ್ನು ಹಾರಿಸಲಾಗಿದೆ ಎಂದು ವಾರಣಾಸಿ ಪೊಲೀಸರು ತಿಳಿಸಿದ್ದು, ಘಟನೆ ಸಂಬಂಧ ವಿವಿಯ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ವಿದ್ಯಾರ್ಥಿಗಳ ಭದ್ರತೆ ವಿಷಯವಾಗಿ ಕ್ಯಾಂಪಸ್ ನಲ್ಲಿ ಸೃಷ್ಟಿಯಾದ ಗಲಭೆಯಲ್ಲಿ ಗೌರವ್​ ಕೂಡ ಪಾತ್ರಧಾರಿ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಳೆದ ವರ್ಷ ಗೌರವ್​ ಸಿಂಗ್ ನನ್ನು ಅಮಾನತ್ತು ಮಾಡಿತ್ತು. ಈ ಹಿಂಸಾಚಾರದಲ್ಲಿ ಗೌರವ್ ಬಸ್​ ಸುಡಲು ಸಹಕರಿಸಿದ್ದರು ಎಂಬ ಗಂಭೀರ ಆರೋಪ ಅವರ ಮೇಲಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com