ಶಿವಸೇಯ ಸೇನೆಯ ವಿರೋಧ: ಮೈತ್ರಿ ಉಳಿಸಿಕೊಳ್ಳಲು ಹಾಲಿ ಸಂಸದನಿಗೇ ಟಿಕೆಟ್ ನಿರಾಕರಿಸಿದ ಬಿಜೆಪಿ!

ಶಿವಸೇನೆ ಮೈತ್ರಿ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಮುಂಬೈ ಈಶಾನ್ಯ ಭಾಗದ ಹಾಲಿ ಸಂಸದನಿಗೆ ಟಿಕೆಟ್ ನಿರಾಕರಿಸಿದೆ.
ಶಿವಸೇಯ ಸೇನೆಯ ವಿರೋಧ: ಮೈತ್ರಿ ಉಳಿಸಿಕೊಳ್ಳಲು ಹಾಲಿ ಸಂಸದನಿಗೇ ಟಿಕೆಟ್ ನಿರಾಕರಿಸಿದ ಬಿಜೆಪಿ!
ಶಿವಸೇಯ ಸೇನೆಯ ವಿರೋಧ: ಮೈತ್ರಿ ಉಳಿಸಿಕೊಳ್ಳಲು ಹಾಲಿ ಸಂಸದನಿಗೇ ಟಿಕೆಟ್ ನಿರಾಕರಿಸಿದ ಬಿಜೆಪಿ!
ನವದೆಹಲಿ: ಶಿವಸೇನೆ ಮೈತ್ರಿ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಮುಂಬೈ ಈಶಾನ್ಯ ಭಾಗದ ಹಾಲಿ ಸಂಸದನಿಗೆ ಟಿಕೆಟ್ ನಿರಾಕರಿಸಿದೆ. 
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಬಿಜೆಪಿ, ಶಿವಸೇನೆ ಷರತ್ತಿಗೆ ಕಟ್ಟುಬಿದ್ದಿದ್ದು ಹಾಲಿ ಸಂಸದ ಕಿರಿತ್ ಸೋಮಯ್ಯ ಗೆ ಟಿಕೆಟ್ ನಿರಾಕರಿಸಿದೆ. 
ಮುಂಬೈ ಈಶಾನ್ಯ ಕ್ಷೇತ್ರದಿಂದ ಸೋಮಯ್ಯ ಕಣಕ್ಕಿಳಿಯುವುದನ್ನು ಶಿವಸೇನೆ ತೀವ್ರವಾಗಿ ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದಿಂದ ಅಭ್ಯರ್ಥಿಯನ್ನು ಬದಲಾವಣೆ ಮಾಡಿರುವ ಬಿಜೆಪಿ ಮನೋಜ್ ಕೊಟಕ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ನಾಯಕರಾಗಿರುವ ಕಿರಿತ್ ಸೋಮಯ್ಯ ಶಿವಸೇನೆಯ ಟೀಕಾಕಾರಾಗಿ ಗುರುತಿಸಿಕೊಂಡಿದ್ದರು. 
ಇದೇ ವೇಳೆ ಉತ್ತರ ಪ್ರದೇಶದಲ್ಲಿ ಸೋನಿಯಾ ಗಾಂಧಿ ಹಾಗೂ ಅಖಿಲೇಶ್ ಯಾದವ್ ವಿರುದ್ಧ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದೆ. 
ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಆಜಂಘರ್ ನಿಂದ ಭೋಜ್ಪುರಿ ನಟ ಹಾಗೂ ಗಾಯಕ ದಿನೇಶ್ ಲಾಲ್ ಯಾದವ್ ನ್ನು ಬಿಜೆಪಿ ಕಣಕ್ಕಿಳಿಸಿದೆ. ಇನ್ನು ಮುಲಾಯಂ ಸಿಂಗ್ ಯಾದವ್ ವಿರುದ್ಧ ಪ್ರೇಮ್ ಸಿಂಗ್ ಶಕ್ಯಾ ಅವರನ್ನು ಮೇನ್ಪುರಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. 
ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ದಿನೇಶ್ ಪ್ರತಾಪ್ ಸಿಂಗ್ ಅವರ್ನನು ಸೋನಿಯಾ ಗಾಂಧಿ ವಿರುದ್ಧ ರಾಯ್ ಬರೇಲಿ ಕ್ಷೇತ್ರದಿಂದ ಈ ಬಾರಿ ಕಣಕ್ಕಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com