ಎಲ್ ಕೆ ಅಡ್ವಾಣಿ
ಎಲ್ ಕೆ ಅಡ್ವಾಣಿ

ಬಿಜೆಪಿ ತನ್ನ ವಿರೋಧಿಗಳನ್ನು 'ರಾಷ್ಟ್ರ-ವಿರೋಧಿ, ಶತ್ರುಗಳೆಂದು' ಎಂದೂ ಭಾವಿಸಿಲ್ಲ: ಎಲ್.ಕೆ. ಅಡ್ವಾಣಿ

ಬಿಜೆಪಿ ತನ್ನನ್ನು ರಾಜಕೀಯವಾಗಿ ಒಪ್ಪದವರನ್ನು ರಾಷ್ಟ್ರದ ವಿರೋಧಿಗಳೆಂದು, ಶತ್ರುಗಳೆಂದು ಎಂದಿಗೂ ಪರಿಗಣಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹೇಳಿದ್ದಾರೆ.
ನವದೆಹಲಿ: ಬಿಜೆಪಿ ತನ್ನನ್ನು ರಾಜಕೀಯವಾಗಿ ಒಪ್ಪದವರನ್ನು ರಾಷ್ಟ್ರದ ವಿರೋಧಿಗಳೆಂದು, ಶತ್ರುಗಳೆಂದು ಎಂದಿಗೂ ಪರಿಗಣಿಸಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹೇಳಿದ್ದಾರೆ. 
ಏ.06 ರಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಇರುವ ಹಿನ್ನೆಲೆಯಲ್ಲಿ ಬ್ಲಾಗ್ ಬರೆದಿರುವ ಎಲ್ ಕೆ ಅಡ್ವಾಣಿ, "  ವೈವಿಧ್ಯತೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಗೌರವಿಸುವುದು ಭಾರತೀಯ ಪ್ರಜಾಪ್ರಭುತ್ವದ ಸಾರ, ಬಿಜೆಪಿ ಸ್ಥಾಪನೆಯಾದ ದಿನದಿಂದಲೂ, ತನ್ನ ರಾಜಕೀಯ ವಿರೋಧಿಗಳನ್ನು ಶತ್ರುಗಳೆಂದು ಭಾವಿಸಿಲ್ಲ, ಬದಲಾಗಿ ಎದುರಾಳಿಗಳೆಂದಷ್ಟೇ ಪರಿಗಣಿಸಿದೆ ಎಂದು ಹೇಳಿದ್ದಾರೆ. 
5 ವರ್ಷಗಳ ನಂತರ ಬ್ಲಾಗ್ ಬರೆದಿರುವ ಅಡ್ವಾಣಿ, ಭಾರತೀಯ ರಾಷ್ಟ್ರೀಯತೆಯ ಕಲ್ಪನೆಯಲ್ಲಿಯೂ ಸಹ ರಾಜಕೀಯ ವಿರೋಧಿಗಳನ್ನು ದೇಶ ವಿರೋಧಿಗಳೆಂದು ಎಂದಿಗೂ ಪರಿಗಣಿಸಲಾಗಿಲ್ಲ. ರಾಜಕೀಯವಾಗಿ ಹಾಗೂ ವೈಯಕ್ತಿವಾಗಿ ಪ್ರತಿ ಪ್ರಜೆಯ ಆಯ್ಕೆಯ ಸ್ವಾತಂತ್ರ್ಯಕ್ಕೆ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ. 
ರಾಷ್ಟ್ರದ ಭದ್ರತೆಯನ್ನು ಚುನಾವಣೆಯ ವಿಷಯವಾಗಿರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿಪಕ್ಷಗಳನ್ನು ದೇಶ ವಿರೋಧಿಗಳೆಂದು ಆರೋಪಿಸುತ್ತಿರುವ ಸಂದರ್ಭದಲ್ಲೇ ಅಡ್ವಾಣಿ ಅವರ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. 

Related Stories

No stories found.

Advertisement

X
Kannada Prabha
www.kannadaprabha.com