8 ವರ್ಷದಿಂದ ದೂರವಾಗಿದ್ದ ಬಾಲಕನನ್ನು ಪೋಷಕರೊಂದಿಗೆ ಸೇರಿಸಿದ ಫೇಸ್ ಬುಕ್!

ಸಾಮಾಜಿಕ ಜಾಲತಾಣಗಳು ಕುಟುಂಬದಿಂದ ದೂರವಾಗಿರುವವರನ್ನು ಬೆಸೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಇಂಥಹದ್ದೇ ಪ್ರಕರಣವೊಂದು ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

Published: 04th April 2019 12:00 PM  |   Last Updated: 04th April 2019 04:51 AM   |  A+A-


Facebook helps in reuniting Hyderabad boy missing for 8 years with his family

8 ವರ್ಷದಿಂದ ದೂರವಾಗಿದ್ದ ಬಾಲಕನನ್ನು ಪೋಷಕರೊಂದಿಗೆ ಸೇರಿಸಿದ ಫೇಸ್ ಬುಕ್!

Posted By : SBV SBV
Source : Online Desk
ಹೈದರಾಬಾದ್: ಸಾಮಾಜಿಕ ಜಾಲತಾಣಗಳು ಕುಟುಂಬದಿಂದ ದೂರವಾಗಿರುವವರನ್ನು ಬೆಸೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಇಂಥಹದ್ದೇ ಪ್ರಕರಣವೊಂದು ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ. 

ಹೈದರಾಬಾದ್ ನಿಂದ 2011 ರ ಜನವರಿ. 26 ರಂದು ತಪ್ಪಿಸಿಕೊಂಡಿದ್ದ ಬಾಲಕನನ್ನು ಮರಳು ಕುಟುಂಬದೊಂದಿಗೆ ಸೇರಿಸಲು ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನೆರವಾಗಿದೆ. 

ನಾಪತ್ತೆಯಾಗಿದ್ದ ಬಾಲಕ ತಾಯಿ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ನಾಪತ್ತೆಯಾಗಿದ್ದ ಬಾಲಕ 8 ವರ್ಷಗಳಾದರೂ ಪತ್ತೆಯಾಗಲಿಲ್ಲ. ಈ ನಡುವೆ ಮಹಿಳೆಗೆ ಫೇಸ್ ಬುಕ್ ನಲ್ಲಿ ತನ್ನ ಮಗನ ಫೋಟೊ ಇರುವ ಪ್ರೊಫೈಲ್ ಕಂಡಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಪೊಲೀಸರು ಸೈಬರ್ ಕ್ರೈಮ್ ಅಧಿಕಾರಿಗಳ ನೆರವಿನಿಂದ ಯುವನ ಐಪಿ ಅಡ್ರೆಸ್ ಪತ್ತೆ ಮಾಡಿದ್ದಾರೆ. ನಾಪತ್ತೆಯಾಗಿದ್ದ ಬಾಲಕ ಪಂಜಾಬ್ ನಲ್ಲಿರುವುದು ಪತ್ತೆಯಾಗಿದೆ.  ಪಂಜಾಬ್ ನಲ್ಲಿ ಭೂಮಾಲೀಕ ಆಶ್ರಯದಲ್ಲಿದ್ದ ಬಾಲಕನನ್ನು ಫೇಸ್ ಬುಕ್ ಸಹಾಯದಿಂದ ಪೊಲೀಸ್ ಅಧಿಕಾರಿಗಳು ಮರಳಿ ಕುಟುಂಬದೊಂದಿಗೆ ಸೇರಿಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp