ನೀತಿ ಸಂಹಿತೆ ಉಲ್ಲಂಘನೆ: ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಪ್ಪಿತಸ್ಥ ಎಂದ ಚುನಾವಣಾ ಆಯೋಗ

ಕಾಂಗ್ರೆಸ್ ನ ಕನಿಷ್ಠ ಆದಾಯ ಖಾತ್ರಿ ಯೋಜನೆ 'ನ್ಯಾಯ್' ಟೀಕಿಸಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಚುನಾವಣಾ ನೀತಿ ಸಂಹಿತೆ...
ರಾಜೀವ್ ಕುಮಾರ್
ರಾಜೀವ್ ಕುಮಾರ್
ನವದೆಹಲಿ: ಕಾಂಗ್ರೆಸ್ ನ ಕನಿಷ್ಠ ಆದಾಯ ಖಾತ್ರಿ ಯೋಜನೆ 'ನ್ಯಾಯ್' ಟೀಕಿಸಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು ಸ್ಪಷ್ಟವಾಗಿದ್ದು, ಮುಂದೆ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಚುನಾವಣಾ ಆಯೋಗ ಸೂಚಿಸಿದೆ.
ನಿಮ್ಮ ಹೇಳಿಕೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂಬ ತೀರ್ಮಾನಕ್ಕೆ ಚುನಾವಣಾ ಆಯೋಗ ಬಂದಿದೆ. ನಿಮ್ಮ ಅಭಿಪ್ರಾಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ನಿರ್ಧರಿಸಲಾಗಿದೆ ಮತ್ತು ಭವಿಷ್ಯದಲ್ಲಿ ನೀವು ಎಚ್ಚರವಹಿಸಬೇಕೆಂದು ನಿರೀಕ್ಷಿಸುವುದಾಗಿ ಚುನಾವಣಾ ಆಯೋಗ, ನೀತಿ ಆಯೋಗದ ಉಪಾಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಿಸಿದ 'ಕನಿಷ್ಠ ಆದಾಯ ಖಾತ್ರಿ ಯೋಜನೆ' ವಿರುದ್ಧ ಹೇಳಿಕೆ ನೀಡಿದ್ದ ನೀತಿ ರಾಜೀವ್‌ ಕುಮಾರ್‌ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ಸಹ ಜಾರಿ ಮಾಡಿತ್ತು.
ನೀತಿ ಸಂಹಿತೆಯ ಪ್ರಕಾರ ಅಧಿಕಾರಿಗಳು ಸರ್ಕಾರವನ್ನು ಬೆಂಬಲಿಸಿ ಹೇಳಿಕೆ ನೀಡುವುದಕ್ಕೆ ನಿರ್ಬಂಧವಿದೆ. ಕುಮಾರ್‌ ಅವರು ಹೇಳಿಕೆಯು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಚುನಾವಣಾ ಆಯೋಗ ಹೇಳಿದೆ.
ಬಡವರಿಗೆ ವರ್ಷಕ್ಕೆ 72 ಸಾವಿರ ನೀಡುವ 'ರಾಹುಲ್‌ ಅವರ ಈ ಯೋಜನೆ ಹಣಕಾಸು ಬಿಕ್ಕಟ್ಟಿನ ಯೋಜನೆ. ಸೋಮಾರಿತನಕ್ಕೆ ಉತ್ತೇಜನ. ಹಾಗಾಗಿ ಇದನ್ನು ಜಾರಿಗೆ ತರಲಾಗುವುದಿಲ್ಲ ಮತ್ತು ಆರ್ಥಿಕತೆ ಮೇಲೆಯೂ ಭಾರಿ ವ್ಯತಿರಿಕ್ತ ಪರಿಣಾಮವನ್ನು ಈ ಯೋಜನೆ ಬೀರಲಿದೆ ಎಂದು ರಾಜೀವ್‌ ಕುಮಾರ್ ಟ್ವೀಟ್‌ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com