ನಾವು ಪಾಕ್ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ: ಎಐಎಎಫ್

ಅಮೆರಿಕ ಪಾಕಿಸ್ತಾನಕ್ಕೆ ನೀಡಿದ ಎಲ್ಲಾ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿವೆ ಎಂದು ಅಮೆರಿಕಾದ ಮ್ಯಾಗಜೀನ್ ವರದಿಯನ್ನು ತಳ್ಳಿ ಹಾಕಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಅಮೆರಿಕ ಪಾಕಿಸ್ತಾನಕ್ಕೆ ನೀಡಿದ ಎಲ್ಲಾ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿವೆ ಎಂದು ಅಮೆರಿಕಾದ ಮ್ಯಾಗಜೀನ್ ವರದಿಯನ್ನು ತಳ್ಳಿ ಹಾಕಿರುವ ಭಾರತೀಯ ವಾಯುಸೇನೆ ಇಲ್ಲ ನಾವು ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿದೆ.
ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿ ನಡೆದಿದ್ದ ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಗೆ ಪ್ರತಿಯಾಗಿ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಗಡಿದಾಟಿ ಒಳಗಡೆ ಬಂದಿದ್ದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಾಗಿ ಭಾರತೀಯ ವಾಯುಸೇನೆ ಹೇಳಿತ್ತು. 
ಇದಕ್ಕೆ ಪೂರಕವಾಗಿ ಫೆಬ್ರವರಿ 28ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಸ್ಫೋಟಗೊಳಿಸಿದ ಅಮ್ರಾನ್ ಕ್ಷಿಪಣಿಯ ಚೂರುಗಳನ್ನು ಪ್ರದರ್ಶಿಸಿತ್ತು. ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ವಸಾಹತುಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ವೈಮಾನಿಕ ದಾಳಿಯಲ್ಲಿ ಅಮೆರಿಕಾ ಉತ್ಪಾದನೆಯ ಎಫ್-16 ಯುದ್ಧ ವಿಮಾನವನ್ನು ಪಾಕಿಸ್ತಾನ ಬಳಸಿತ್ತು ಎಂಬ ಹೇಳಿಕೆಗೆ ಸ್ಪಷ್ಟತೆ ನೀಡಲು ಸಾಕ್ಷಿಯಾಗಿ ಭಾರತ ಇದನ್ನು ಪ್ರದರ್ಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com