ಯುಪಿಎಸ್ ಸಿ ಫಲಿತಾಂಶ ಪ್ರಕಟ: ಐಐಟಿ ಬಾಂಬೆ ಇಂಜಿನಿಯರ್ ಟಾಪರ್, 24 ಕನ್ನಡಿಗರು ತೇರ್ಗಡೆ

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ....

Published: 05th April 2019 12:00 PM  |   Last Updated: 05th April 2019 10:13 AM   |  A+A-


UPSC civil services exam results out: IIT Bombay engineer declared topper

ರಾಹುಲ್ - ಕನಿಷ್ಕ್ ಕಟಾರಿಯಾ

Posted By : LSB
Source : PTI
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಿಸಿದ್ದು, ಐಐಟಿ ಬಾಂಬೆ ಇಂಜಿನಿಯರ್ ಕನಿಷ್ಕ್ ಕಟಾರಿಯಾ ಅವರು ಪ್ರಥಮ ರ್ಯಾಂಕ್ ಪಡೆದಿದ್ದಾರೆ. 

ಪರಿಶಿಷ್ಟ ಜಾತಿಗೆ ಸೇರಿರುವ ಕಟಾರಿಯಾ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಗಣಿತವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪ್ರಥಮ ರ್ಯಾಂಕ್ ಗಳಿಸಿದ್ದಾರೆ.

ಐದನೇ ರ್ಯಾಂಕ್ ಪಡೆದಿರುವ ಸೃಷ್ಠಿ ಜಯಂತ್ ದೇಶಮುಖ್ ಅವರು ಮಹಿಳಾ ಅಭ್ಯರ್ಥಿಗಳಲ್ಲಿ ಪ್ರಥಮರಾಗಿದ್ದಾರೆ. ಬಿ.ಇ.(ಕೆಮಿಕಲ್​ ಇಂಜಿನಿಯರ್​) ಪದವೀಧರೆಯಾಗಿರುವ ದೇಶಮುಖ್, ಭೂಪಾಲ್​ನ ರಾಜೀವ್ ಗಾಂಧಿ ಪ್ರೌದ್ಯೋಗಿಕ ವಿಶ್ವವಿದ್ಯಾಲಯ ವಿದ್ಯಾರ್ಥಿಯಾಗಿದ್ದಾರೆ

17ನೇ ರ‍್ಯಾಂಕ್​ ಪಡೆದ​ ಹುಬ್ಬಳ್ಳಿಯ ರಾಹುಲ್ ಶರಣಪ್ಪ ಸಂಕನೂರ್ ಸೇರಿದಂತೆ ರಾಜ್ಯದ 24 ಅಭ್ಯರ್ಥಿಗಳು ನಾಗರಿಕ ಸೇವೆಗೆ ಅರ್ಹತೆ ಪಡೆದಿದ್ದಾರೆ.

ಒಟ್ಟು 25 ಅಭ್ಯರ್ಥಿಗಳ ಟಾಪರ್ಸ್​ ಪಟ್ಟಿಯಲ್ಲಿ 15 ಪುರುಷ ಹಾಗೂ 10 ಮಹಿಳಾ ಅಭ್ಯರ್ಥಿಗಳಿದ್ದಾರೆ. 

ಈ ಬಾರಿ ಒಟ್ಟು 759 ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ 577 ಪುರುಷರು ಹಾಗೂ 182 ಮಹಿಳಾ ಅಭ್ಯರ್ಥಿಗಳಿದ್ದಾರೆ. ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್​ ಸೇವೆ ಮತ್ತು ಕೇಂದ್ರ ಸೇವೆಯ ಗ್ರೂಪ್​ ಎ ಹಾಗೂ ಬಿ ಹುದ್ದೆಗಳಿಗೆ ಶಿಫಾರಸು ಮಾಡಲಾಗಿದೆ.

ನಾಗರಿಕ ಸೇವೆ ಪೂರ್ವಭಾವಿ ಪರೀಕ್ಷೆಯನ್ನು ಜೂನ್​ ತಿಂಗಳಿನಲ್ಲಿ ನಡೆಸಲಾಗಿತ್ತು. ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 5 ಲಕ್ಷ ಜನರು ಮಾತ್ರ ಪರೀಕ್ಷೆಯನ್ನು ಎದುರಿಸಿದ್ದರು. ಇವರಲ್ಲಿ 10,468 ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆಯನ್ನು ಪಡೆದಿದ್ದರು. ಮುಖ್ಯ ಪರೀಕ್ಷೆ ಸೆಪ್ಟೆಂಬರ್​ ಹಾಗೂ ಅಕ್ಟೋಬರ್​ 2018 ರಲ್ಲಿ ನಡೆದಿತ್ತು.

ನಾಗರಿಕ ಸೇವೆಗೆ ಅರ್ಹತೆ ಪಡೆದ ಕನ್ನಡಿಗರು 
ರಾಹುಲ್​​ ಶರಣಪ್ಪ ಶಂಕನೂರ -17ನೇ ರ‍್ಯಾಂಕ್
ಲಕ್ಷ್ಮೀ ಎನ್​​ -45ನೇ ರ‍್ಯಾಂಕ್
ಆಕಾಶ್​​​​ ಎಸ್​​ -78ನೇ ರ‍್ಯಾಂಕ್
ಕೃತುಕಕಾ -100ನೇ ರ‍್ಯಾಂಕ್
ಕೌಶಿಕ್​​​​ ಎಚ್​​​ಆರ್​​​ -240ನೇರ‍್ಯಾಂಕ್
ವಿವೇಕ್​​ ಎಚ್​​​​ಬಿ -257ನೇ ರ‍್ಯಾಂಕ್
ನಿವೇದಿತಾ -303ನೇ ರ‍್ಯಾಂಕ್
ಗಿರೀಶ್​​ ಧರ್ಮರಾಜ್​​​ ಕಲಗೊಂಡ್​​​ -307ನೇ ರ‍್ಯಾಂಕ್
ಮಿರ್ಜಾ ಖಾದರ್​​​ ಬೈಗಿ -336ನೇ ರ‍್ಯಾಂಕ್
ತೇಜಸ್​​​​ ಯುಪಿ -338ನೇ ರ‍್ಯಾಂಕ್
.ಹರ್ಷವರ್ಧನ್​​ ಬಿಜೆ -352ನೇ ರ‍್ಯಾಂಕ್
ಪಕೀರೆಶ್​​​ ಕಲ್ಲಪ್ಪ ಬಾದಾಮಿ -372ನೇರ‍್ಯಾಂಕ್
ಡಾ. ನಾಗಾರ್ಜುನ ಗೌಡ -418ನೇ ರ‍್ಯಾಂಕ್
ಅಶ್ವಿಜಾ ಬಿವಿ -423ನೇ ರ‍್ಯಾಂಕ್
ಮಂಜುನಾಥ್​​ ಆರ್​ -495ನೇ ರ‍್ಯಾಂಕ್
ಬ್ರಿಂದಾ ಎಸ್​​ -496ನೇ ರ‍್ಯಾಂಕ್
ಹೇಮಂಥ್​​​ -612ನೇ ರ‍್ಯಾಂಕ್
ಶೃತಿ ಎಂಕೆ -637ನೇ ರ‍್ಯಾಂಕ್
ವೆಂಕಟ್​​​ರಾಮ್​​​ -694ನೇ ರ‍್ಯಾಂಕ್
ಸಂತೋಷ ಹೆಚ್​​​ -753ನೇ ರ‍್ಯಾಂಕ್
ಅಶೋಕ್​​ ಕುಮಾರ್​ ಎಸ್​​ -711ನೇ ರ‍್ಯಾಂಕ್
ರಾಘವೇಂದ್ರ ಎನ್​​ -739ನೇ ರ‍್ಯಾಂಕ್
ಶಶಿಕಿರಣ್​​​ -754ನೇ ರ‍್ಯಾಂಕ್

Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp