ಎಫ್-16 ಯುದ್ಧ ವಿಮಾನದ ಅಮೆರಿಕಾ ಮ್ಯಾಗಜೀನ್ ವರದಿ ತಳ್ಳಿಹಾಕಿದ ನಿರ್ಮಲಾ ಸೀತಾರಾಮನ್

ಕಳೆದ ತಿಂಗಳು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂಬ ಅಮೆರಿಕಾದ ...
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
ಅಹಮದಾಬಾದ್: ಕಳೆದ ತಿಂಗಳು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ ಎಂಬ ಅಮೆರಿಕಾದ ಫಾರಿನ್ ಪಾಲಿಸಿ ಮ್ಯಾಗಜಿನ್ ಮಾಡಿರುವ ವರದಿಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಳ್ಳಿಹಾಕಿದ್ದಾರೆ.
ರಕ್ಷಣಾ ಇಲಾಖೆ ನೀಡುವ ಹೇಳಿಕೆಯನ್ನು ಕಾಂಗ್ರೆಸ್ ಯಾವಾಗಲೂ ಸಂಶಯದಿಂದ ನೋಡುತ್ತಾ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಟೀಕಿಸಿದರು.
ಎಫ್ -16 ವಿಮಾನದ ಬಗ್ಗೆ ಭಾರತೀಯ ವಾಯುಪಡೆ ಎಲೆಕ್ಟ್ರಾನಿಕ್ ಸಹಿಯ ಮೂಲಕ ಸಾಕ್ಷಿ ನೀಡಿದೆ. ಈ ವರದಿ ಯಾರೇ ಬರೆಯಲಿ ಅದು ಆಧಾರರಹಿತವಾದದ್ದು, ಎಎಮ್-ಆರ್ ಎಎಎಮ್ ಕ್ಷಿಪಣಿ ಎಫ್-16ಗೆ ಮಾತ್ರ ಬಳಸಲಾಗಿದ್ದು ಅದು ಭಾರತದಲ್ಲಿ ಸಿಗಲು ಹೇಗೆ ಸಾಧ್ಯ ಎಂದು ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದರು.
ಫಾರಿನ್ ಮ್ಯಾಗಜಿನ್ ನಲ್ಲಿ ಬಂದಿರುವ ವರದಿ ಆಧಾರರಹಿತ ಎಂದು ಕೆಲವರು ಕರೆಯುತ್ತಾರೆ. ತಾವು ಯಾವುದೇ ತನಿಖೆ ನಡೆಸಿಲ್ಲ ಎಂದು ಅಮೆರಿಕಾದ ಅಧಿಕಾರಿಗಳು ಹೇಳುವುದನ್ನು ನನಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತೋರಿಸಿದ್ದಾರೆ. ಈ ಬಗ್ಗೆ ತಪ್ಪು ಮಾಹಿತಿ ನೀಡುವವರು ಹಲವರಿದ್ದಾರೆ. ಆದರೆ ನಮ್ಮದೇ ದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇರುವವರು ಸರ್ಕಾರದ ರಕ್ಷಣಾ ಇಲಾಖೆ ಬಗ್ಗೆ ಸಂದೇಶ ಪಟ್ಟು ಪ್ರಶ್ನೆಗಳನ್ನು ಮಾಡುತ್ತಾರೆ. ಇವರನ್ನು ಭಜನೆ ಮಂಡಳಿ ಎಂದು ಕರೆಯಲು ಬಯಸುತ್ತೇನೆ ಎಂದರು.
ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ, ಭಾರತೀಯ ವಾಯುಪಡೆ ಸುಳ್ಳು ಹೇಳುತ್ತಿದೆ ಎಂದು ಅಮೆರಿಕಾ ಅಧಿಕಾರಿಗಳು ಹೇಳಿದ್ದಾರೆ ಎಂದು ಅಲ್ಲಿನ ಫಾರಿನ್ ಮ್ಯಾಗಜೀನ್ ಎಂಬ ಪತ್ರಿಕೆಯ ಲಾರಾ ಲೆಲಿಗ್ಮಾನ್ ವರದಿ ಮಾಡಿದ್ದರು. ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮಿಗ್-21 ಬಿಸನ್ ಯುದ್ಧ ವಿಮಾನ ಕೆಡವಿ ಬೀಳುವ ಮುನ್ನ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು ಎಂಬ ಹೇಳಿಕೆಗೆ ಅಮೆರಿಕ ಮ್ಯಾಗಜಿನ್ ವರದಿ ಸಂಪೂರ್ಣವಾಗಿ ವ್ಯತಿರಿಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com