ದೇಶಿ ನಿರ್ಮಿತ ಧನುಷ್​ ಆರ್ಟಿಲರಿ ಗನ್​ ಭಾರತೀಯ ಸೇನೆಗೆ ಸೇರ್ಪಡೆ

ಮೇಕ್​ ಇನ್​ ಇಂಡಿಯಾ ಯೋಜನೆಯಡಿ ಸಿದ್ಧವಾಗಿರುವ ಮೊದಲ ದೇಶಿಯ ಬೋಫೋರ್ಸ್​ ಎಂಬ ಹೆಗ್ಗಳಿಕೆ ಹೊಂದಿರುವ ಧನುಷ್​ ಆರ್ಟಿಲರಿ ಗನ್​ ಸೋಮವಾರ....
ಧನುಷ್
ಧನುಷ್
ಜಬಲ್ಪುರ: ಮೇಕ್​ ಇನ್​ ಇಂಡಿಯಾ ಯೋಜನೆಯಡಿ ಸಿದ್ಧವಾಗಿರುವ ಮೊದಲ ದೇಶಿಯ ಬೋಫೋರ್ಸ್​ ಎಂಬ ಹೆಗ್ಗಳಿಕೆ ಹೊಂದಿರುವ ಧನುಷ್​ ಆರ್ಟಿಲರಿ ಗನ್​ ಸೋಮವಾರ ಭಾರತೀಯ ಸೇನಾಪಡೆ ಸೇರಿಕೊಂಡಿದೆ.
ಇಂದು ಜಬಲ್ಪುರದಲ್ಲಿ ನಡೆದ ಸಮಾರಂಭದಲ್ಲಿ ಆರ್ಡನನ್ಸ್ ​ಫ್ಯಾಕ್ಟರೀಸ್​ ಆಫ್​ ಬೋರ್ಡ್​ನ ಅಧಿಕಾರಿಗಳು ಧನುಷ್​ ಆರ್ಟಿಲರಿ ಗನ್​ಗಳನ್ನು ಸೇನೆಗೆ ಹಸ್ತಾಂತರಿಸಿದರು.
ಧನುಷ್​ 155ಎಂಎಂ/45 ಕ್ಯಾಲಬರ್​ ಟೋಡ್​ ಗನ್​ ಸಿಸ್ಟಂ ಆಗಿದ್ದು, ಅಂದಾಜು 38 ಕಿ.ಮೀ.ವರೆಗೆ ನಿಖರವಾಗಿ ಗುರಿಸಾಧಿಸುವ ಸಾಮರ್ಥ್ಯ ಹೊಂದಿವೆ. 
ವಿದೇಶದಿಂದ ಆಮದು ಮಾಡಿಕೊಳ್ಳಲಾಗಿರುವ ಬೋಫೋರ್ಸ್​ ಗನ್​ಗಳಿಗೆ ಹೋಲಿಸಿದರೆ ಧನುಷ್​ ಆರ್ಟಿಲರಿ ಗನ್​ಗಳು 11 ಕಿ.ಮೀ. ಹೆಚ್ಚಿನ ಅಂತರದ ಗುರಿ ಸಾಧಿಸುವ ಸಾಮರ್ಥ್ಯ ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com