ಅಸ್ಸಾಂ: ಗೋಮಾಂಸ ಮಾರಿದ ಮುಸ್ಲಿಂ ವ್ಯಕ್ತಿಗೆ ಥಳಿತ, ಹಂದಿ ಮಾಂಸ ತಿನ್ನುವಂತೆ ಒತ್ತಾಯ

ಗೋಮಾಂಸ ಮಾರಾಟ ಮಾಡಿದ್ದಕ್ಕಾಗಿ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಥಳಿಸಿರುವ ಘಟನೆ ಅಸ್ಸಾಂ ರಾಜ್ಯದ ಬಿಸ್ವಾನಾಥ್ ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮುಸ್ಲಿಂ ವ್ಯಾಪಾರಿ
ಹಲ್ಲೆಗೊಳಗಾದ ಮುಸ್ಲಿಂ ವ್ಯಾಪಾರಿ

ಬಿಸ್ವಾನಾಥ್ :  ಗೋಮಾಂಸ ಮಾರಾಟ ಮಾಡಿದ್ದಕ್ಕಾಗಿ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಥಳಿಸಿರುವ ಘಟನೆ ಅಸ್ಸಾಂ ರಾಜ್ಯದ ಬಿಸ್ವಾನಾಥ್ ಜಿಲ್ಲೆಯಲ್ಲಿ ನಡೆದಿದೆ.

ಶೌಕತ್ ಆಲಿ ಎಂಬ 68 ವರ್ಷದ ವ್ಯಕ್ತಿಯನ್ನು ಮೊಳಕಾಲಲ್ಲಿ ಕೂರಿಸಿ ಥಳಿಸುತ್ತಿದ್ದಾಗ ಬಿಟ್ಟುಬಿಡುವಂತೆ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ದುಷ್ಕರ್ಮಿಗಳ ಗುಂಪೂಂದು ಅನಧಿಕೃತವಾಗಿ ಗೋಮಾಂಸ ಮಾರಾಟ ಮಾಡುತ್ತಿರುವುದಾಗಿ ಆರೋಪಿಸಿ ಶೌಕತ್ ಆಲಿ ಮೇಲೆ ನಡುರಸ್ತೆಯಲ್ಲೇ  ಹಲ್ಲೆ ನಡೆಸಿದ್ದಲ್ಲದೇ, ಶಿಕ್ಷೆಯಾಗಿ ಹಂದಿ ಮಾಂಸ ತಿನ್ನುವಂತೆ ತಾಕೀತು ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಶೌಕತ್ ಆಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೌಕತ್ ಆಲಿ ಸಹೋದರ ಸೇರಿದಂತೆ ಇಬ್ಬರು ಸಲ್ಲಿಸಿದ ದೂರಿನಡಿ ಎರಡು ಪ್ರತ್ಯೇಕ ಎಫ್ ಐಆರ್ ದಾಖಲಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com