ನನ್ನನ್ನು ಬ್ಲಾಕ್ ಮಾಡಿದ್ದಕ್ಕೆ ಸಂತೋಷ: ಟ್ವಿಟ್ಟರ್ ನಲ್ಲಿ ಮೆಹಬೂಬಾಗೆ ಗೌತಮ್ ಗಂಭೀರ್ ಟಾಂಗ್

ಕ್ರಿಕೆಟಿಗ, ರಾಜಕಾರಣಿ ಗೌತಮ್ ಗಂಭೀರ್ ಅವರ ಟ್ವಿಟ್ಟರ್ ಖಾತೆಯನ್ನು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಬ್ಲಾಕ್ ಮಾಡಿದ್ದಾರೆ ....
ಗೌತಮ್ ಗಂಭೀರ್
ಗೌತಮ್ ಗಂಭೀರ್
ನವದೆಹಲಿ: ಕ್ರಿಕೆಟಿಗ, ರಾಜಕಾರಣಿ ಗೌತಮ್ ಗಂಭೀರ್ ಅವರ ಟ್ವಿಟ್ಟರ್ ಖಾತೆಯನ್ನು ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಬ್ಲಾಕ್ ಮಾಡಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ಕಾಶ್ಮೀರಕ್ಕೆ ಪ್ರತ್ಯೇಕ ಪಿಎಂ ಹೇಳಿಕೆಯನ್ನು ಟೀಕಿಸಿದ್ದ ಗಂಭಿರ್ ಆರ್ಟಿಕಲ್ 370ರದ್ದುಪಡಿಸುವುದರ ಪರವಾಗಿ ನಿಂತ ಬೆನ್ನಲ್ಲೇ ಮುಫ್ತಿ ಕ್ರಿಕೆಟಿಗರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.
ಪಿಡಿಪಿ ಮುಖ್ಯಸ್ಥೆ ಮುಫ್ತಿ ಬಿಜೆಪಿ ದೆಹಲಿ ಹ್ಗೈಕೋರ್ಟ್ ಗೆ ಅಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ.ಜಮ್ಮು ಕಾಶ್ಮೀರದ ರಾಜಕಾರಣಿಗಳಾದ ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ದೇಶದ್ರೋಹದ ಹೇಳಿಕೆಗಳನ್ನು ನೀಡಿದ್ದು ಅವರು ಲೋಕಸಭೆಗೆ ಸ್ಪರ್ಧಿಸಲು ತಡೆ ಕೋರಿ ಬಿಜೆಪಿ ದೆಹಲಿ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದೆ. ಈ ವಿಚ್ರದಲ್ಲಿ ಮುಫ್ತಿ ಹಾಗೂ ಗಂಭೀರ್ ನಡುವೆ ಟ್ವಿಟ್ಟರ್ ನಲ್ಲಿ ಚಕಮಕಿ ನಡೆದಿದೆ. ಈಗ ಮುಫ್ತಿ ಗಂಬೀರ್ ಅವರ ಅಕೌಂಟ್ ಬ್ಲಾಕ್ ಮಾಡಿದ್ದಾರೆ.
"ನೀವೇಕೆ ನ್ಯಾಯಾಲಯದಲ್ಲಿ ಸಮಾಅ ವ್ಯರ್ಥ ಮಾಡುತ್ತೀರಿ? ಬಿಜೆಪಿ ಅಧಿಕಾರಕ್ಕೆ ಬಂದು ಅದು ಆರ್ಟಿಕಲ್ 370ನ್ನು ತೆಗೆದುಹಾಕುವವರೆಗೆ ತಾಳ್ಮೆ ವಹಿಸಿ. ಒಮ್ಮೆ ಈ 370 ನೇ ವಿಧಿ ತೆಗೆಯಲ್ಪಟ್ಟ ಬಳಿಕ ನಮಗೂ ಭಾರತದ ಸಂವಿಧಾನಕ್ಕೂ ಯಾವ ಸಂಬಂಧವಿರಲಾರದು. ನಾವು ಲೋಕಸಭೆಗೆ ಸ್ಪರ್ಧಿಸುವ ಮಾತೇ ಬರುವುದಿಲ್ಲ " ಮುಫ್ತಿ ಸೋಮವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಯಾಗಿ ಗಂಭೀರ್ "ಇದು ಭಾರತ, ನೀವೆಂದುಕೊಷ್ಟು ಸರಳವಾಗಿ ಅಳಿಸಿ ಹಾಕುವುದಕ್ಕೆ ಸಾಧ್ಯವಿಲ್ಲ" ಎಂದಿದ್ದರು. ಇದಾಗಿ ಹತ್ತು ಗಂಟೆಗಳ ನಂತರ ಮುಫ್ತಿ ಮತ್ತೆ ಟ್ವೀಟ್ ಮಾಡಿ ನೀವು ಕ್ರಿಕೆಟ್ ಆಡುವುದ್ರಲ್ಲಿ ಉತ್ತಮವಿರಬಹುದು, ಆದರೆ ರಾಜಕೀಯ ಕ್ರಿಕೆಟ್ ನಂತಿಲ್ಲ. ನಿಮ್ಮ ಮಾನಸಿಕ ಆರೋಗ್ಯದ ಕುರಿತು ನನಗೆ ಚಿಂತೆ ಇದೆ. ನೀವು ಕಾಶ್ಮೀರದ ಬಗ್ಗೆ ಏನನ್ನೂ ತಿಳಿದಿಲ್ಲದಿರುವುದು ಉತ್ತಮವಾಗಿದೆ. ನಾನೀಗ ನಿಮ್ಮನ್ನು ಬ್ಲಾಕ್ ಮಾಡುವುದರಿಂದ ನೀವು ಪ್ರತಿ ಟ್ವೀಟ್ ಗೆ ಎರಡು ರು. ಖರ್ಚು ಮಾಡಿ ಬೇರೆಯವರನ್ನು ಟ್ರೋಲ್ ಮಾಡಬಹುದು ಎಂದಿದ್ದಾರೆ.
ಆಕೆಯ ಪ್ರತಿಕ್ರಿಯೆ ಅವರ ವ್ಯಕ್ತಿತ್ವದ ಆಳದಲ್ಲಿರುವ ಕೊರತೆಯನ್ನು ಬಿಂಬಿಸಿದೆ ಎಂದು ಗಂಭಿರ್ ಪ್ರತಿಕ್ರಯಿಸಿದ್ದಾರೆ.
ಓಹ್! ಆದ್ದರಿಂದ ನೀವು ನನ್ನ ಟ್ವಿಟರ್ ಹ್ಯಾಂಡಲ್ ಅನ್ನು ನಿರ್ಬಂಧಿಸಿದ್ದೀರಿ! ನನ್ನಂತಹಾ ಯುವಕನ ಟ್ವೀಟ್ ಗೆ ಪ್ರತಿಕ್ರಯಿಸಲು ನಿಮಗೆ ಹತ್ತು ಗಂಟೆಗಳು ಬೇಕಾದವು!ಇಷ್ತೋಂದು ನಿಧಾನ, ಇದು ನಿಮ್ಮ ವ್ಯಕ್ತಿತ್ವದ ಆಳದಲ್ಲಿರುವ ಕೊರತೆಯನ್ನು ತೋರಿಸುತ್ತಿದೆ.ನೀವು ನಿಮ್ಮ ಕೈಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಹೆಣಗುತ್ತಿದ್ದೀರಿ ಎನ್ನುವುದು ಅಚ್ಚರಿಯೇನಲ್ಲ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com