ಮೋದಿಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಇಮ್ರಾನ್ ಖಾನ್ ಹೇಳಿಕೆಗೆ ಕಾಂಗ್ರೆಸ್ ಟೀಕೆ

ಪಾಕಿಸ್ಥಾನವು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ, ಹೀಗಿರುವಾಗ ಮೋದಿಗೆ ...
ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್
ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್
ನವದೆಹಲಿ:  ಪಾಕಿಸ್ಥಾನವು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ, ಹೀಗಿರುವಾಗ ಮೋದಿಗೆ ಮತ ಹಾಕಿದರೆ ಪಾಕಿಸ್ಥಾನಕ್ಕೆ ಓಟ್‌ ಹಾಕಿದ ಹಾಗೆ ಅಗುತ್ತದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
ಮೋದಿ ಅವರ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಒದಗುತ್ತದೆ ಮತ್ತು ಕಾಶ್ಮೀರ ಪ್ರಶ್ನೆಯನ್ನು ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ 
ಪಾಕಿಸ್ಥಾನ ಮೋದಿ ಜತೆ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ಮಾಧ್ಯಮ ವರದಿ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಕಾಶ್ಮೀರ ಪ್ರಶ್ನೆಯನ್ನು ಇತ್ಯರ್ಥಪಡಿಸಲು ಭಾರತದ ಇತರ ಪಕ್ಷಗಳು ಯತ್ನಿಸಿದಲ್ಲಿ ಬಲಪಂಥೀಯರ ಟೀಕೆ, ಖಂಡನೆಗಳಿಗೆ ತುತ್ತಾಗಬೇಕಾದೀತೆಂಬ ಭಯ ಅವುಗಳಿಗೆ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಸುರ್‌ಜೇವಾಲಾ ಅವರು ಪಾಕಿಸ್ಥಾನ ಮೋದಿ ಜತೆಗೆ ಅಧಿಕೃತ ಹೊಂದಾಣಿಕೆ ಮಾಡಿಕೊಂಡಿದೆ; ಮೋದಿಗೆ ಓಟ್‌ ಹಾಕಿದರೆ ಪಾಕಿಸ್ಥಾನಕ್ಕೆ ಓಟ್‌ ಹಾಕಿದ ಹಾಗೆ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com