ದೆಹಲಿ: ಟಿಕ್​ಟಾಕ್​ ವಿಡಿಯೋ ಮಾಡುತ್ತಿದ್ದ ವೇಳೆ ಗುಂಡು ಹಾರಿ ಯುವಕ ಸಾವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟಿಕ್ ಟಾಕ್ ಆ್ಯಪ್ ಗೆ ಯುವಕನೊಬ್ಬ ಬಲಿಯಾಗಿದ್ದು, ಗನ್​ ಹಿಡಿದು ಟಿಕ್​ಟಾಕ್​ ವಿಡಿಯೋ ಮಾಡುತ್ತಿದ್ದ ವೇಳೆ....

Published: 15th April 2019 12:00 PM  |   Last Updated: 15th April 2019 08:37 AM   |  A+A-


Delhi teen shot dead as pistol goes off while filming TikTok video: Police

ಸಾಂದರ್ಭಿಕ ಚಿತ್ರ

Posted By : LSB LSB
Source : PTI
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟಿಕ್ ಟಾಕ್ ಆ್ಯಪ್ ಗೆ ಯುವಕನೊಬ್ಬ ಬಲಿಯಾಗಿದ್ದು, ಗನ್​ ಹಿಡಿದು ಟಿಕ್​ಟಾಕ್​ ವಿಡಿಯೋ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ 19 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಸಲ್ಮಾನ್​, ಸೋಹಾಲಿ ಹಾಗೂ ಅಮೀರ್​ ಎಂಬುವವರು ಇಂಡಿಯಾ​ ಗೇಟ್​ಗೆ ಕಾರು ಚಲಾಯಿಸಿಕೊಂಡು ಹೋಗಿದ್ದರು. ಅಲ್ಲಿಗೆ ಭೇಟಿ ನೀಡಿ ವಾಪಾಸಾಗುವಾಗ ಸೋಹಾಲಿ ಗನ್​ ಹೊರತೆಗೆದಿದ್ದ. ಈ ವೇಳೆ ಸಲ್ಮಾನ್​ ತಲೆಗೆ ಗುರಿ ಇಟ್ಟು ಸೋಹಾಲಿ ಟಿಕ್ ​ಟಾಕ್​ ವಿಡಿಯೋ ಮಾಡಲು ಮುಂದಾಗಿದ್ದ. ಈ ವೇಳೆ ಅಚಾನಕ್ಕಾಗಿ ಗುಂಡು ಹಾರಿದೆ.

ಇದರಿಂದ ಆತಂಕಕ್ಕೆ ಒಳಗಾದ ಸೋಹಾಲಿ ಹಾಗೂ ಅಮೀರ್​ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ಅಲ್ಲಿ ಬಟ್ಟೆ ಬದಲಾಯಿಸಿಕೊಂಡು ಸಲ್ಮಾನ್​ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಗಲೇ ಸಲ್ಮಾನ್​ ಕೊನೆಯುಸಿರೆಳೆದಿದ್ದ.

ಸೋಹಾಲಿ ಹಾಗೂ ಅಮೀರ್​ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಚಾನಕ್ಕಾಗಿ ನಡೆದ ಘಟನೆಯೋ ಅಥವಾ ಸಲ್ಮಾನ್​ನನ್ನು ಹತ್ಯೆಗೈಯ್ಯುವ ಉದ್ದೇಶ ಇವರಿಗೆ ಇತ್ತೋ ಎನ್ನುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಇಬ್ಬರು ಯುವಕರು ಪೊಲೀಸರ ವಶದಲ್ಲಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp