
ಆರ್ ಬಿಐ ನೌಕರರು ಸರ್ಕಾರಿ ಸೇವಕರಲ್ಲ!
Source : IANS
ಚೆನ್ನೈ: ರಿಸರ್ವ್ ಬ್ಯಾಂಕ್ ನ ನೌಕರರು ಸರ್ಕಾರಿ ಸೇವಕರಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ನ್ಯಾ.ಕೆ.ಕೆ ಶಶಿಧರನ್ ಹಾಗೂ ಪಿ.ಡಿ ಆದಿಕೇಶವುಲು ಅವರಿದ್ದ ವಿಭಾಗೀಯ ಪೀಠ, ಈ ತೀರ್ಪು ನೀಡಿದೆ. " ಆರ್ ಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದ ಮಾತ್ರಕ್ಕೆ ಆರ್ ಬಿಐ ನ ನೌಕರರು ಕೇಂದ್ರ ಸರ್ಕಾರದ ನೌಕರರಾಗಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿದ್ದ ಆರ್ ಬಿಐ ನೌಕರರಾಗಿದ್ದ ಇ.ಮನೋಜ್ ಕುಮಾರ್ ಡಿವೈಎಸ್ ಪಿ ಹುದ್ದೆಗೆ ಆಯ್ಕೆಗೊಂಡಿದ್ದರು. ಆದರೆ ಅವರು ಅರ್ಜಿಯಲ್ಲಿ ತಾನು ಸರ್ಕಾರೇತರ ನೌಕರನೆಂದು ನಮೂದಿಸಿದ್ದರು. ಆರ್ ಬಿಐ ನೌಕರರಾಗಿದ್ದುಕೊಂಡು ಸರ್ಕಾರೇತರ ನೌಕರ ಎಂದು ನಮೂದಿಸಿದ್ದ ಹಿನ್ನೆಲೆಯಲ್ಲಿ ಅವರ ಪರೀಕ್ಷಾ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಫಲಿತಾಂಶ ತಡೆಹಿಡಿದಿರುವುದನ್ನು ಪ್ರಶ್ನಿಸಿ ಮನೋಜ್ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು.
ಈಗ ಕೋರ್ಟ್ ಆರ್ ಬಿಐ ನೌಕರರು ಸರ್ಕಾರಿ ಸೇವಕರಲ್ಲ ಎಂದು ತೀರ್ಪು ನೀಡಿದೆ.
Stay up to date on all the latest ರಾಷ್ಟ್ರೀಯ news