ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧೆ?

ಲೋಕಸಭಾ ಚುನಾವಣೆ ಕಾವು ಏರಿಕೆಯಾಗುತ್ತಿದ್ದು ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿರುವ ಕ್ಷೇತ್ರಗಳ ಪೈಕಿ ಗುರುತಿಸಿಕೊಂಡಿದೆ.
ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧೆ?
ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧೆ?
ಭೋಪಾಲ್: ಲೋಕಸಭಾ ಚುನಾವಣೆ ಕಾವು ಏರಿಕೆಯಾಗುತ್ತಿದ್ದು ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿರುವ ಕ್ಷೇತ್ರಗಳ ಪೈಕಿ ಗುರುತಿಸಿಕೊಂಡಿದೆ. 
ಬಿಜೆಪಿ ಭೋಪಾಲ್ ನಿಂದ ಸಾಧ್ವಿ ಪ್ರಜ್ಞಾ  ಸಿಂಗ್ ನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಕಣಕ್ಕಿಳಿಸುವ ಸಾಧ್ಯತೆ ಇದೆ.  ಇದೇ ವೇಳೆ ಬಿಜೆಪಿ ಮಧ್ಯಪ್ರದೇಶದ ಸಾಗರ್, ವಿದಿಶಾ, ಗುನಾ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದೆ. 
ರಮಾಕಾಂತ್ ಭಾರ್ಗವ್ ಗೆ ವಿದಿಶಾದಿಂದ ಟಿಕೆಟ್ ಸಿಗುವ ಸಾಧ್ಯತೆ ಇದ್ದರೆ ಸಾಗರ್ ಹಾಗೂ ಗುನಾ ಲೋಕಸಭಾ ಕ್ಷೇತ್ರದಿಂದ ರಾಜ್ ಬಹದ್ದೂರ್ ಸಿಂಗ್ ಹಾಗೂ ಕೆಪಿ ಯಾದವ್ ಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಕೆಳಿಬರುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ಞಾ  ಸಿಂಗ್ ಬಿಜೆಪಿ ಟಿಕೆಟ್ ನೀಡಿದರೆ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ. 
ದಿಗ್ವಿಜಯ್ ಸಿಂಗ್ ದೇಶದ ವಿರುದ್ಧ ಮಾತನಾಡುತ್ತಾರೆ. ನಾನು ರಾಷ್ಟ್ರೀಯವಾದಿ ಹೀಗಾಗಿ ದಿಗ್ವಿಜಯ್ ಸಿಂಗ್ ಅವರನ್ನು ಎದುರಿಸುವುದು ನನಗೆ ಕಷ್ಟವಾಗುವುದಿಲ್ಲ ಎಂದು ಸಾಧ್ವಿ ಹೇಳಿದ್ದಾರೆ. 
ದಿಗ್ವಿಜಯ್ ಸಿಂಗ್ ನ ನೈಜ ಮುಖ ಎಲ್ಲರಿಗೂ ತಿಳಿದಿದೆ. ಅವರನ್ನು ಎದುರಿಸುವುದು ಕಷ್ಟದ ವಿಷಯವಲ್ಲ ಎಂದು ಸಾಧ್ವಿ ಹೇಳಿದ್ದಾರೆ. 
2008 ರಲ್ಲಿ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ  ಸಿಂಗ್ ಗೆ ಇನ್ನಷ್ಟೇ ಕ್ಲೀನ್ ಚಿಟ್ ಸಿಗಬೇಕಿದೆ. 1989 ರ ನಂತರ ಕಾಂಗ್ರೆಸ್ ಭೋಪಾಲ್ ಲೋಕಸಭಾ ಕ್ಷೇತ್ರವನ್ನು ಗೆದ್ದಿಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 3.7 ಲಕ್ಷ ಮತಗಳಿಂದ ಗೆದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com