ಭಾರತದಲ್ಲಿ ಆಪಲ್, ಗೂಗಲ್ ನಿಂದ 'ಟಿಕ್ ಟಾಕ್' ಡೌನ್ ಲೋಡ್ ಬ್ಲಾಕ್!

ಚೀನಾದ ಜನಪ್ರಿಯ ಅಪ್ಲಿಕೇಷನ್ "ಟಿಕ್ ಟಾಕ್" ಡೌನ್ ಲೋಡ್ ವಿರುದ್ಧ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿ ಆದೇಶಿಸಿದ ಹಿನ್ನೆಲೆಯಲ್ಲಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಭಾರತದಲ್ಲಿ "ಟಿಕ್ ಟಾಕ್" ಡೌನ್ ಲೋಡ್ ಅನ್ನು ಬ್ಲಾಕ್ ಮಾಡಿವೆ.
'ಟಿಕ್ ಟಾಕ್
'ಟಿಕ್ ಟಾಕ್
ನವದೆಹಲಿ: ಚೀನಾದ ಜನಪ್ರಿಯ ಅಪ್ಲಿಕೇಷನ್ "ಟಿಕ್ ಟಾಕ್" ಡೌನ್ ಲೋಡ್ ವಿರುದ್ಧ ಮದ್ರಾಸ್ ಹೈಕೋರ್ಟ್ ನಿಷೇಧ ಹೇರಿ ಆದೇಶಿಸಿದ ಹಿನ್ನೆಲೆಯಲ್ಲಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಭಾರತದಲ್ಲಿ "ಟಿಕ್ ಟಾಕ್" ಡೌನ್ ಲೋಡ್ ಅನ್ನು ಬ್ಲಾಕ್ ಮಾಡಿವೆ.

ತಮ್ಮ ಅಪ್ಲಿಕೇಷನ್ ಡೌನ್ ಲೋಡ್ ಗೆ ಹೇರಿದ ನಿಷೇಧವನ್ನು ತೆರವು ಮಾಡಬೇಕೆಂದು ಕೋರಿ ಚೀನಾ ಸಂಸ್ಥೆ ಬೈಟೆಡ್ಯಾನ್ಸ್ ಟೆಕ್ನಾಲಜಿ  ಮಂಗಳವಾರ ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಮದ್ರಾಸ್ ಹೈಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ. ಇದಾದ ಕೆಲವೇ ಗಂಟೆಗಳಲ್ಲಿ ಗೂಗಲ್ ಹಾಗೂ ಆಪಲ್ ಸಂಸ್ಥೆಗಳು ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಹೈಕೋರ್ಟ್ ಆದೇಶದ ನಂತರ ಗೂಗಲ್ ಹಾಗೂ ಆಪಲ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ಟಿಕ್ ಟಾಕ್ ಆಪ್ ನಿಷೇಧಿಸಬೇಕೆಂದು ಕೋರಿದೆ.ಆಪ್ ಬಗ್ಗೆ ಪ್ರತಿಕ್ರಯಿಸಲು ಗೂಗಲ್ ನಿರಾಕರಿಸಿದ್ದು ಭಾರತದಲ್ಲಿ ಸ್ಥಳೀಯ ಕಾನೂನುಗಳಿಗೆ ಗೌರವ ಕೊಡುವುದಾಗಿ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ. ಒಂದು ಮೂಲದ ಪ್ರಕಾರ ಫೆಬ್ರವರಿಯ ಸಮಯಕ್ಕೆ ಭಾರತದಲ್ಲಿ ೨೪ ಕೋಟಿಗೆ ಹೆಚ್ಚು ಬಳಕೆದಾರರು ಟಿಕ್ ಟಾಕ್ ಆಪ್ ಡೌನ್ ಲೋಡ್ ಮಾಡಿದ್ದಾರೆ.

ಟಿಕ್ ಟಾಕ್ ಅಪ್ಲಿಕೇಷನ್ ಮೂಲಕ ಯಾರಾದರೂ ಕಿರು ವೀಡಿಯೋಗಳನ್ನು ರಚಿಸಲು, ಹಂಚಿಕೊಳ್ಳಲು ಅನುಕೂಲವಾಗಿತ್ತು. ಆಪ್ ನ ಈ ಸೌಲಭ್ಯ ಅನುಚಿತವಾದದ್ದು ಎಂದು ಕೆಲ ರಾಜಕಾರಣಿಗಳು ಆರೋಪ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com