ಪಾಕ್ ಪ್ರಧಾನಿಯ ಮೋದಿ ಕುರಿತ ಹೇಳಿಕೆ ಕಾಂಗ್ರೆಸ್‌ನ ಷಡ್ಯಂತ್ರ: ನಿರ್ಮಲಾ ಸೀತಾರಾಮನ್

'ಭಾರತ-ಪಾಕ್ ಶಾಂತಿ ಮಾತುಕತೆಗಳು ಮತ್ತು ಕಾಶ್ಮೀರ ವಿವಾದ ಬಗೆಹರಿಯಲು ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದರೆ ಒಳಿತು’ ಎಂದ್ಬ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಹೇಳಿಕೆಗೆ....
ನಿರ್ಮಲಾ ಸೀತಾರಾಮನ್ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಕಾನ್
ನಿರ್ಮಲಾ ಸೀತಾರಾಮನ್ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಕಾನ್
ನವದೆಹಲಿ: 'ಭಾರತ-ಪಾಕ್ ಶಾಂತಿ ಮಾತುಕತೆಗಳು ಮತ್ತು ಕಾಶ್ಮೀರ ವಿವಾದ ಬಗೆಹರಿಯಲು  ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದರೆ ಒಳಿತು’ ಎಂದ್ಬ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಕಾಂಗ್ರೆಸ್ ನ ಷಡ್ಯಂತ್ರ ಎಂದಿದ್ದಾರೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ  ತೊಡೆದು ಹಾಕುವುದು ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಇರಾದೆಯಾಗಿದೆ ಎಂದು ಸಚಿವರು ಹೇಳಿದರು. 
ಸುದ್ದಿಸಂಸ್ಥೆ ಎ.ಎನ್.ಐ. ಜತೆ ಮಾತನಾಡಿದ ನಿರ್ಮಲಾ ಸೀತಾರಾಮನ್ "ಅಂತಹ ಹೇಳಿಕೆಗಳನ್ನು ಪಾಕ್ ಪ್ರಧಾನಿ ಏಕೆ ನೀಡಿದ್ದಾರೆಂದು ನಾನು ತಿಳಿದಿಲ್ಲ. ಯಾರು ಇಂತಹಾ ಹೇಳಿಕೆಗಳನ್ನು ನೀಡಲು ಅವರಿಗೆ ಸಲಹೆ ನಿಡುತ್ತಾರೋ ಗೊತ್ತಿಲ್ಲ, ಆದರೆ ನನ್ನ ವೈಯುಕ್ತಿಕ ಅಭಿಪ್ರಾಯದ ಅನುಸಾರ ಹೇಳುವುದಾದಾಲ್ಲಿ .ಕಾಂಗ್ರೆಸ್ ನ ಹಲವು ಪ್ರಮುಖ ನಾಯಕರು ಪಾಕಿಸ್ತಾನಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಸಹಾಯ ಕೋರಿದ್ದಾರೆ. ಇದು ಕಾಂಗ್ರೆಸ್ ಪಕ್ಷ ರಚಿಸಿದ್ದ ಕುತರ್ಕದ ಯೋಜನೆಯಲ್ಲೊಂದು. ಎಂದು ನಾನು ಭಾವಿಸುತ್ತೇನೆ. ಆದರೆ ಈ ಬಗ್ಗೆ ನಾವೇನು ಮಾಡಬಹುದೆಂದು ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ತಿಳಿದಿಲ್ಲ. ಹಾಗೆಯೇ ಈ ಮಾತುಗಳು ನನ್ನ ವೈಯುಕ್ತಿಕ ಅಭಿಪ್ರಾಯವೇ ಹೊರತು ನಮ್ಮ ಪಕ್ಷ ಅಥವಾ ಸರ್ಕಾರದ ಪರವಾಗಿ ಆಡಿದ ಮಾತಲ್ಲ ಎಂದು ಮತ್ತೆ ಹೇಳುತ್ತಿದ್ದೇನೆ" ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
ಇಸ್ಲಾಮಾಬಾದ್ ನಲ್ಲಿರುವ ವಿದೇಶೀ ಪತ್ರಕರ್ತರ ಸಣ್ಣ ಗುಂಪಿನೊಡನೆ ನಡೆದ ಸಂವಾದದಲ್ಲಿ, ಮೋದಿ ಪಕ್ಷವಾದ ಬಿಜೆಪಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಲ್ಲಿ  ಆಶಾವಾದವಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಅವರು ಏಪ್ರಿಲ್ 16-20ರ ನಡುವೆ ಭಾರತ ಪಾಕ್ ಮೇಲೆ ಮತ್ತೆ ದಾಳಿ ನಡೆಸಲಿದೆ ಎಂದು ಹೇಳಿಕೆ ನಿಡಿದ್ದು ಈ ಸಂಬಂಧ ಮಾತನಾಡಿದ ಸಚಿವರು "ಅವರು ಆ ದಿನಾಂಕಗಳ ಮಾಹಿತಿಯನ್ನು ಯಾರಿಂದ, ಯಾವಾಗ ಪಡೆದರೆಂದು ತಿಳಿದಿಲ್ಲ. ಆದರೆ ಇದು ಕೇವಲ ಕಾಲ್ಪನಿಕ ಹಾಗೂ ಹಾಸ್ಯವನ್ನು ಸೃಷ್ಟಿಸುವ ಹೇಳಿಕೆಯಾಗಿದೆ" ಎಂದಿದ್ದಾರೆ.
ರಾಫೆಲ್ ಪ್ರಕರಣದಲ್ಲಿ ಸುಳ್ಳು ದಾಖಲೆಗಳು ಅಥವಾ ಸ್ವಾಧೀನಪಡಿಸಿಕೊಂಡಿರುವ ದಾಖಲೆಗಳನ್ನು ತನಿಖೆ ಮಾಡಲು ಸರ್ವೋಚ್ಛ ನ್ಯಾಯಾಲಯದ ನಿರ್ಧಾರವು ಕೇಂದ್ರಕ್ಕೆ ಹಿನ್ನೆಡೆಯಾಗಿದೆಯೆ ಎಂದು ಪ್ರಶ್ನಿಸಿದಾಗ "ನಮಗೆ ಹಿನ್ನೆಡೆ ಎಂದು ನಾವು ಭಾವಿಸುವುದಿಲ್ಲ, ನಮ್ಮ ನಿಲುವನ್ನು ನಾವು ದೃಢೀಕರಿಸುತ್ತೇವೆ. ಅಟಾರ್ನಿ ಜನರಲ್ ಮರುದಿನ ವಿವರಣೆಯನ್ನು ನೀಡಲಿದ್ದಾರೆ. ಣಾ ಇಲಾಖೆಯಿಂದ  ದಾಖಲೆಗಳು ಕಳ್ಳತನವಾಗಿದೆ, ಇದು ಹೇಗೆ ಸಾಧ್ಯವೆಂದು ಸಹ ಸಧ್ಯವೇ ತಿಳಿದುಬರಲಿದೆ" ಸಚಿವರು ಹೇಳಿದ್ದಾರೆ.
ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವುದು ಕಾನೂನುಬಾಹಿರ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ಇಂತಹಾ ದಾಖಲೆಗಳನ್ನು ಪಡೆಯಲು ಕಾನೂನುಬದ್ದ ಮಾರ್ಗಗಳಿದೆ.ಹಾಗೆ ಕಾನೂನು ರೀತ್ಯಾ ಪಡೆಯದೆ ಹೋದರೆ ಅದನ್ನು ಕಳವು ಎಂದೇ ಪರಿಗಣಿಸಬೇಕು.ಈಗ ಆಗಿರುವುದು ಅದುವೆ. ಆದರೆ ಈ ದಾಖಲೆಗಳ ಬಹಿರಂಗದಿಂಡ ರಾಫೆಲ್ ಒಪ್ಪಂದ ನಿಯಮಬಾಹಿರವೆನ್ನಲು ಬರುವುದಿಲ್ಲ.ಈ ಅಕ್ರಮವಾಗಿ ಪಡೆದ ಪುಟಗಳಲ್ಲಿ  ಇರುವ ಮಾಹಿತಿಗಳು ಒಪ್ಪಂದಕ್ಕೆ ಯಾವ ಹಾನಿ ತರುವುದಿಲ್ಲ. ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರ 'ಚೌಕಿದಾರ್ ಚೋರ್ ಹೈ' ಟೀಕೆಗೆ ಸೀತಾರಾಮನ್ ಸುಪ್ರೀಂ ಕೋರ್ಟ್ ಉತ್ತರಿಸಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com