ಬೈಕ್ ಗೆ ಬೆಂಕಿ, ಗಮನಿಸದೆ ವೇಗವಾಗಿ ಚಲಿಸುತ್ತಿದ್ದ ದಂಪತಿಯ ಚೇಸ್ ಮಾಡಿ ರಕ್ಷಿಸಿದ ಪೊಲೀಸರು, ವಿಡಿಯೋ ವೈರಲ್!

ಬೈಕಿಗೆ ಬೆಂಕಿ ಹೊತ್ತಿರುವುದನ್ನೂ ಗಮನಿಸದೇ ವೇಗವಾಗಿ ಚಲಿಸುತ್ತಿದ್ದ ದಂಪತಿಯನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಹರಸಾಹಸ ಪಟ್ಟು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Published: 17th April 2019 12:00 PM  |   Last Updated: 17th April 2019 12:41 PM   |  A+A-


Uttar Pradesh Police's heroic act saves couple from burning bike moving at 112 km hour

ಅಪಾಯಕ್ಕೆ ಸಿಲುಕಿದ್ದ ದಂಪತಿಯ ರಕ್ಷಿಸಿದ ಉತ್ತರ ಪ್ರದೇಶ ಪೊಲೀಸರು

Posted By : SVN
Source : Online Desk
ಲಖನೌ: ಬೈಕಿಗೆ ಬೆಂಕಿ ಹೊತ್ತಿರುವುದನ್ನೂ ಗಮನಿಸದೇ ವೇಗವಾಗಿ ಚಲಿಸುತ್ತಿದ್ದ ದಂಪತಿಯನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಹರಸಾಹಸ ಪಟ್ಟು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಇದೇ ಏಪ್ರಿಲ್ 14ರಂದು ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಹೆದ್ದಾರಿಯಲ್ಲಿ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಅಪಾಚೆ ಬೈಕ್ ಒಂದು ವೇಗವಾಗಿ ಅವರ ಮುಂದೆ ಹೋಗಿದೆ. ಈ ವೇಳೆ ಬೈಕ್ ಗಮನಿಸಿದ ಪೊಲೀಸರಿದೆ ಬೈಕ್ ಹಿಂದೆ ಬೆಂಕಿ ಹೊತ್ತಿರುವುದು ತಿಳಿದಿದೆ.

ಕೂಡಲೇ ಕ್ಷಣಮಾತ್ರವೂ ತಡಮಾಡದ ಪೊಲೀಸರು ಬೈಕ್ ನ ಬೆನ್ನು ಬಿದ್ದಿದ್ದಾರೆ. ಸುಮಾರು 4 ಕಿ.ಮೀ ವರೆಗೂ ಬೈಕ್ ಅನ್ನು ಹಿಂಬಾಲಿಸಿದ್ದಾರೆ. ಬೈಕ್ ಸವಾರ ತುಂಬಾ ವೇಗವಾಗಿ ಬೈಕ್ ಚಲಾಯಿಸುತ್ತಿದ್ದ. ಹೀಗಾಗಿ ಪೊಲೀಸರು ಕೂಡ ಆ ಬೈಕ್ ಹಿಡಿಯಲು ಪ್ರತೀ ಗಂಟೆಗೆ 108ರಿಂದ 112 ಕಿಮೀ ವೇಗದಲ್ಲಿ ತಮ್ಮ ಗಾಡಿಯನ್ನು ಚಲಾಯಿಸಿ ಕೊನೆಗೂ ಬೈಕ್ ಸವಾರನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್ ಸಮೀಪ ಬರುತ್ತಿದ್ದಂತೆಯೇ ಕೂಗಿದ ಪೊಲೀಸರು ಬೈಕ್ ಗೆ ಬೆಂಕಿ ಹೊತ್ತಿರುವುದನ್ನು ಬೈಕ್ ಚಾಲಕರ ಗಮನಕ್ಕೆ ತಂದಿದ್ದು, ಆತ ಕೂಡಲೇ ಬೈಕ್ ನಿಲ್ಲಿಸಿದ್ದಾನೆ. ಬಳಿಕ ಪೊಲೀಸರೇ ಅವರನ್ನು ಇಳಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಅಲ್ಲದೆ ಬೈಕ್ ನಲ್ಲಿ ದಂಪತಿ ಮಾತ್ರವಲ್ಲದೇ ಸುಮಾರು 7 ವರ್ಷದ ಪುಟ್ಟ ಮಗು ಕೂಡ ಜೊತೆಯಲ್ಲಿತ್ತು. ಮಗುವಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.

ಈ  ರೋಚಕ ವಿಡಿಯೋವನ್ನು ಯುಪಿ ಪೊಲೀಸರು ತಮ್ಮ ಟ್ವಿಟರ್ ಖಾತೆ (@UP100)ಯಲ್ಲಿ ಅಪ್ಲೋಡ್ ಮಾಡಿದ್ದು, ಪೊಲೀಸರ ಸಾಹಸಕ್ಕೆ ಎಲ್ಲಡೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಅಲ್ಲದೆ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು 20 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 6 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp