ಛತ್ತೀಸ್ ಘಡದಲ್ಲಿ ಎನ್ಕೌಂಟರ್; ಇಬ್ಬರು ನಕ್ಸಲರನ್ನು ಕೊಂದ ಭದ್ರತಾ ಪಡೆಗಳು!

ಲೋಕಸಭೆ ಚುನಾವಣೆ ನಿಮಿತ್ತ ದೇಶದ 96 ಲೋಕಸಭಾ ಕ್ಷೇತ್ರಗಳಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿರುವಂತೆಯೇ ಅತ್ತ ಛತ್ತೀಸ್ ಘಡದಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ ನಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಲಾಗಿದೆ.

Published: 18th April 2019 12:00 PM  |   Last Updated: 18th April 2019 09:47 AM   |  A+A-


Chhattisgarh: 2 naxals have been killed in an encounter

ಸಂಗ್ರಹ ಚಿತ್ರ

Posted By : SVN SVN
Source : ANI
ರಾಯ್ ಪುರ: ಲೋಕಸಭೆ ಚುನಾವಣೆ ನಿಮಿತ್ತ ದೇಶದ 96 ಲೋಕಸಭಾ ಕ್ಷೇತ್ರಗಳಲ್ಲಿ ಇಂದು 2ನೇ ಹಂತದ ಮತದಾನ ನಡೆಯುತ್ತಿರುವಂತೆಯೇ ಅತ್ತ ಛತ್ತೀಸ್ ಘಡದಲ್ಲಿ ಭದ್ರತಾ ಪಡೆಗಳ ಎನ್ಕೌಂಟರ್ ನಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಲಾಗಿದೆ.

ಛತ್ತೀಸ್ ಘಡದ ಧನಿಕರ್ಕಾ ಪ್ರಾಂತ್ಯದ ಕಾವ್ಕೊಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್ಕೌಂಟರ್ ನಡೆದಿದ್ದು, ಈ ವೇಲೆ ಭದ್ರತಾ ಪಡೆಗಳ ಗುಂಡೇಟಿಗೆ ಇಬ್ಬರು ನಕ್ಸಲರು ಹತರಾಗಿದ್ದಾರೆ. ಧನಿಕರ್ಕಾ ಪ್ರಾಂತ್ಯದಲ್ಲಿ ನಕ್ಸಲರು ಅಡಗಿರುವ ಕುರಿತು ಮಾಹಿತಿ ಪಡೆದ ಜಿಲ್ಲಾ ಮೀಸಲು ಪಡೆಯ ಭದ್ರತಾ ಸಿಬ್ಬಂದಿಗಳು ಕೂಡಲೇ ಸ್ಖಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ತೀವ್ರ ಗುಂಡಿನ ಚಕಮಕಿಯಾಗಿದೆ. ಈ ವೇಳೆ ಹಲವು ಸಿಬ್ಬಂದಿಗಳಿಗೂ ಗಾಯಗಳಾಗಿದ್ದು, ಈ ಕುರಿತು ಇನ್ನಷ್ಟೇ ಮಾಹಿತಿ ಬರಬೇಕಿದೆ.

ಇನ್ನು ಹಾಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಛತ್ತೀಸ್ ಘಡದ ಕಾಂಕರ್, ರಾಜ್ನಾಂದಗಾವ್ ಮತ್ತು ಮಹಾಸಮುಂದ್ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಇದೇ ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಇದೇ ಏಪ್ರಿಲ್ 11ರಂದು ನಡೆದಿದ್ದ ಮೊದಲ ಹಂತದ ಮತದಾನದ ವೇಳೆ ಇದೇ ಛತ್ತೀಸ್ ಗಡದ 11 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗಿತ್ತು. 
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp