ಕಾಂಗ್ರೆಸ್ ಮುಖಂಡರು ಸರ್ದಾರ್ ಪಟೇಲರ ಏಕತಾ ಪ್ರತಿಮೆ ದರ್ಶಿಸಿಲ್ಲವೇಕೆ: ಪ್ರಧಾನಿ ಮೋದಿ

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು, ಸ್ವತಂತ್ರ ಭಾರತದ ಮೊದಲ ಗೃಹ ಸಚಿವ, ದೇಶಭಕ್ತ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಈವರೆಗೂ ಸಂದರ್ಶಿಸಿಲ್ಲವೇಕೆ ಎಂದು ಪ್ರಧಾನಿ
ಕಾಂಗ್ರೆಸ್ ಮುಖಂಡರು ಸರ್ದಾರ್ ಪಟೇಲರ ಏಕತಾ ಪ್ರತಿಮೆ ದರ್ಶಿಸಿಲ್ಲವೇಕೆ: ಪ್ರಧಾನಿ ಮೋದಿ
ಕಾಂಗ್ರೆಸ್ ಮುಖಂಡರು ಸರ್ದಾರ್ ಪಟೇಲರ ಏಕತಾ ಪ್ರತಿಮೆ ದರ್ಶಿಸಿಲ್ಲವೇಕೆ: ಪ್ರಧಾನಿ ಮೋದಿ
ಅಮ್ರೇಲಿ: ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು, ಸ್ವತಂತ್ರ ಭಾರತದ ಮೊದಲ ಗೃಹ ಸಚಿವ, ದೇಶಭಕ್ತ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನು ಈವರೆಗೂ ಸಂದರ್ಶಿಸಿಲ್ಲವೇಕೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ತವರು ರಾಜ್ಯ ಗುಜರಾತ್ ನ ಅಮ್ರೇಲಿಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, “ಈವರೆಗೂ 12 ಲಕ್ಷಕ್ಕೂ ಹೆಚ್ಚು ಜನರು ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ಏಕತಾ ಪ್ರತಿಮೆಯನ್ನು ವೀಕ್ಷಿಸಿದ್ದಾರೆ.  ಆದರೆ ಸರ್ದಾರ್ ಪಟೇಲರು ತಮ್ಮ ನಾಯಕರೆಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರು ಮಾತ್ರ ಪ್ರತಿಮಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಶ್ರದ್ಧಾಂಜಲಿ ಸಲ್ಲಿಸಿಲ್ಲ” ಎಂದರು.
“ಈವರೆಗೂ ಶ್ರದ್ಧಾಂಜಲಿ ಸಲ್ಲಿಸದ ಮಂದಿ ವಲ್ಲಭ್ ಭಾಯಿ ಪಟೇಲರಿಗೆ ಶಿರ ಬಾಗಿದರೆ ಮತ್ತಷ್ಟು ಸಂಸ್ಕಾರವಂತರಾಗುತ್ತಾರೆ” ಎಂದು ಹೇಳಿದರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ಅವರನ್ನು ಅಪಮಾನಿಸುವ ಸಲುವಾಗಿಯೇ ಏಕತಾ ಪ್ರತಿಮೆ ನಿರ್ಮಿಸಲಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪವನ್ನು ತಳ್ಳಿಹಾಕಿದ ಪ್ರಧಾನಿ ಮೋದಿ, “ಈ ಪ್ರತಿಮೆಯು ನನ್ನನ್ನೂ ಸೇರಿದಂತೆ ದೇಶದ ಕೋಟ್ಯಂತರ ಜನರ ಗೌರವದ ಪ್ರತೀಕವೇ ಹೊರತು ಯಾರೊಬ್ಬರಿಗೂ ಅಪಮಾನ ಮಾಡುವ ಉದ್ದೇಶವಲ್ಲ. ಬ್ರಿಟಿಷರು ದೇಶ ಬಿಟ್ಟು ತೊಲಗಿದ ನಂತರ ನಮ್ಮೆಲ್ಲರನ್ನೂ ಒಗ್ಗೂಡಿಸಿದ್ದು ಸರ್ದಾರ್ ಪಟೇಲರು” ಎಂದು ಸ್ಪಷ್ಟಪಡಿಸಿದರು.
“ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಕಾಶ್ಮೀರ ಸಮಸ್ಯೆಯನ್ನು ತಮ್ಮ ಬಳಿಯೇ ಇಟ್ಟುಕೊಂಡು ಉಳಿದ ಸಂಸ್ಥಾನಗಳ ಏಕೀಕರಣದ ವಿಷಯವನ್ನು ಸರ್ದಾರ್ ಪಟೇಲವ ಜವಾಬ್ದಾರಿಗೆ ಬಿಟ್ಟರು.  ಹೀಗಾಗಿ 70 ವರ್ಷಗಳಾದರೂ ಸಮಸ್ಯೆ ಬಗೆಹರಿಯದೆ ಉಳಿದಿದೆ.ರಾಜಕೀಯ ಲಾಭಕ್ಕಾಗಿ ಇಂತಹ ವಿಷಯಗಳನ್ನು ಜೀವಂತವಾಗಿಡುವುದು ಕಾಂಗ್ರೆಸ್ ನೀತಿ” ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.  
ಅಮ್ರೇಲಿಯ ಕಾಂಗ್ರೆಸ್ ಅಭ್ಯರ್ಥಿ ಪರೇಶ್ ಧನನ್, ಈ ವರ್ಷದ ಆರಂಭದಲ್ಲಿ ಏಕತಾ ಪ್ರತಿಮೆಯ ಬಗ್ಗೆ ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.  “ಸರ್ದಾರ್ ಪಟೇಲರ ಪ್ರತಿಮೆ, ದೇಶಾದ್ಯಂತ ಸಂಗ್ರಹಿಸಲಾದ ಬೇಡದ ವಸ್ತುಗಳನ್ನು ಸೇರಿಸಿ ನಿರ್ಮಿಸಿದ ಮಾದರಿ” ಎಂದು ಟೀಕಿಸಿದ್ದರು.  ಈ ಹೇಳಿಕೆಗಾಗಿ ಅವರ ವಿರುದ್ಧ ಫೆಬ್ರವರಿಯಲ್ಲಿ ಒಂದು ದಿನ ಅಮಾನತು ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com