ಭಾರತ ಮತ್ತು ಪಾಕಿಸ್ತಾನ ಎಂದೆಂದಿಗೂ ದೂರವಿರಲು ಸಾಧ್ಯವಿಲ್ಲ: ಪಾಕ್ ಸಚಿವ ಖುರೇಷಿ

ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಪರಸ್ಪರ ದೂರವಿರಲು ಸಾಧ್ಯವಿಲ್ಲ ಮತ್ತು ಉಭಯ ದೇಶಗಳ ನಡುವಿನ ಎಲ್ಲ ಬಿಕ್ಕಟ್ಟು ಪರಿಹಾರಕ್ಕೆ...

Published: 20th April 2019 12:00 PM  |   Last Updated: 20th April 2019 08:26 AM   |  A+A-


Narendra Modi-Imran Khan

ನರೇಂದ್ರ ಮೋದಿ-ಇಮ್ರಾನ್ ಖಾನ್

Posted By : VS VS
Source : Online Desk
ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ತಾನ ನೆರೆಹೊರೆಯ ರಾಷ್ಟ್ರಗಳಾಗಿದ್ದು, ಪರಸ್ಪರ ದೂರವಿರಲು ಸಾಧ್ಯವಿಲ್ಲ ಮತ್ತು ಉಭಯ ದೇಶಗಳ ನಡುವಿನ ಎಲ್ಲ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆಗೆ ಮುಂದಾಗಬೇಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಮಹಮ್ಮದ್‌ ಖುರೇಷಿ ಹೇಳಿದ್ದಾರೆ.

‘ಭೌಗೋಳಿಕವಾಗಿ ಭಾರತ ಪಾಕಿಸ್ತಾನದೊಂದಿಗೆ ಸಾಮಾನ್ಯ ಗಡಿ, ವಾತಾವರಣ, ಸಂಸ್ಕೃತಿ, ಭಾಷೆ ಮತ್ತು ನದಿಗಳ ಮೂಲಕ ಸಂಪರ್ಕ ಹೊಂದಿದೆ’ ಎಂದು ಖುರೇಷಿ ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಉಭಯ ರಾಷ್ಟ್ರಗಳೂ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಯುದ್ಧ ವಿನಾಶಕಾರಿಯಾಗಿದ್ದು, ಅದನ್ನು ಆಯ್ಕೆಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬ್ರಿಟನ್‌ ಮತ್ತು ಜರ್ಮನಿ ನಡುವಿನ ಸಂಬಂಧವನ್ನು ನೆನಪಿಸಿಕೊಂಡ ಅವರು, ಅದು ಎರಡನೇ ವಿಶ್ವ  ಮಹಾಯುದ್ಧಕ್ಕೆ ಕಾರಣವಾಯಿತು. ಆದರೆ ಇಂದು ಅವುಗಳು ಯೂರೋಪಿಯನ್‌ ಒಕ್ಕೂಟದ ಅಡಿಯಲ್ಲಿ ಸಂಪರ್ಕ ಹೊಂದಿದ್ದು, ಆರ್ಥಿಕ ಹಿತಾಸಕ್ತಿಯೊಂದಿಗೆ ಒಗ್ಗೂಡಿ ಕೆಲಸ ಮಾಡುತ್ತಿವೆ ಎಂದು ಉದಾಹರಣೆ ನೀಡಿದರು.
Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp