ಲಿಬಿಯಾ ರಾಜಧಾನಿ ತ್ರಿಪೊಲಿಯಲ್ಲಿ ಉದ್ವಿಗ್ನ ಸ್ಥಿತಿ: ತಕ್ಷಣವೇ ನಗರ ತೊರೆಯುವಂತೆ ಭಾರತೀಯರಿಗೆ ಸುಷ್ಮಾ ಸ್ವರಾಜ್ ಮನವಿ

ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಅಲ್ಲಿ ಸಿಲುಕಿ ಹಾಕಿಕೊಂಡಿರುವ 500ಕ್ಕೂ ಹೆಚ್ಚು ಭಾರತೀಯರು ಸುರಕ್ಷತೆ ದೃಷ್ಟಿಯಿಂದ ನಗರವನ್ನು ತಕ್ಷಣವೇ ತೊರೆಯುವಂತೆ ...

Published: 20th April 2019 12:00 PM  |   Last Updated: 20th April 2019 12:04 PM   |  A+A-


Union external affairs minister Sushma Swaraj

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

Posted By : SUD SUD
Source : PTI
ನವದೆಹಲಿ: ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಅಲ್ಲಿ ಸಿಲುಕಿ ಹಾಕಿಕೊಂಡಿರುವ 500ಕ್ಕೂ ಹೆಚ್ಚು ಭಾರತೀಯರು ಸುರಕ್ಷತೆ ದೃಷ್ಟಿಯಿಂದ ನಗರವನ್ನು ತಕ್ಷಣವೇ ತೊರೆಯುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ.

ಲಿಬಿಯಾ ರಾಜಧಾನಿಯಲ್ಲಿ ಭಾರತೀಯರು ಸಿಲುಕಿ ಹಾಕಿಕೊಂಡಿದ್ದರೆ ಅವರು ತಕ್ಷಣವೇ ನಗರ ತೊರೆದು ಹೊರಬರಲಿ, ನಿಧಾನ ಮಾಡಿದರೆ ನಂತರ ನಮಗೆ ಅವರನ್ನು ಸ್ಥಳಾಂತರ ಮಾಡಲು ಸಾಧ್ಯವಾಗದಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.

ವಿಶ್ವಸಂಸ್ಥೆ ಬೆಂಬಲಿತ ಪ್ರಧಾನ ಮಂತ್ರಿ ಫಯೇಝ್ ಅಲ್ ಸರ್ರಜ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಲಿಬಿಯಾದ ಮಿಲಿಟರಿ ಕಮಾಂಡರ್ ಖಲಿಫಾ ಹಫ್ತರ್ ಅವರ ಪಡೆ ದಾಳಿ ನಡೆಸಲು ಆರಂಭಿಸಿದ ನಂತರ ಕಳೆದ ಎರಡು ವಾರಗಳಲ್ಲಿ ಟ್ರಿಪೊಲಿಯಲ್ಲಿ ನಡೆದ ದಾಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅಲ್ಲಿನ ಪರಿಸ್ಥಿತಿ ಸದ್ಯ ಬಿಗುವಿನಿಂದ ಕೂಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವೆ, ಲಿಬಿಯಾದಿಂದ ಸಾಮೂಹಿಕವಾಗಿ ಜನರ ಸ್ಥಳಾಂತರವಾದ ನಂತರ ಮತ್ತು ಪ್ರಯಾಣ ನಿರ್ಬಂಧದ ನಂತರ 500ಕ್ಕೂ ಹೆಚ್ಚು ಭಾರತೀಯರು ಟ್ರಿಪೊಲಿಯಲ್ಲಿ ಇದ್ದಾರೆ. ಅಲ್ಲಿನ ಪರಿಸ್ಥಿತಿ ಹದಗೆಡುತ್ತಿದೆ. ಸದ್ಯ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ. ಹೀಗಾಗಿ ನಿಮ್ಮ ಸ್ನೇಹಿತರು ಮತ್ತು ಬಂಧುಗಳಿಗೆ ತಕ್ಷಣವೇ ನಗರ ತೊರೆಯಲು ಹೇಳಿ, ಇಲ್ಲದಿದ್ದರೆ ನಂತರ ನಮಗೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp